ವಿಶ್ವ ಕಂಡ ಶ್ರೇಷ್ಠ ನಾಯಕ, ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿಯನ್ನು(MS Dhoni ) ಐಸಿಸಿ ಹಾಲ್ ಆಫ್ ಫೇಮ್ ಗೌರವಕ್ಕೆ(ICC Hall of Fame) ಭಾಜನರಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಎಂಎಸ್ ಧೋನಿಯ ಸಾಧನೆ ಗುರುತಿಸಿ ಈ ಗೌರವ ನೀಡಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಸಂತಸ ತಂದಿದೆ.
2004ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟಿದ್ದ ಧೋನಿ ಅದ್ಭುತ ನಾಯಕತ್ವ, ಸ್ಮರಣೀಯ ಆಟಗಾರಿಕೆ & ಕ್ರಿಕೆಟ್‌ಗೆ ನೀಡಿದ ಕೊಡುಗೆಗಾಗಿ ಈ ಗೌರವ ನೀಡಲಾಗಿದೆ. 2007 ರಲ್ಲಿ ಟಿ-20 ವಿಶ್ವಕಪ್, 2011 ರಲ್ಲಿ ಏಕದಿನ ವಿಶ್ವಕಪ್‌ನಲ್ಲಿ 2013ರ ಚಾಂಪಿಯನ್ಸ್ ಟ್ರೋಫಿಯ ನಾಯಕತ್ವ ವಹಿಸಿ ಗೆಲ್ಲಿಸಿದ ಕೀರ್ತಿ ಧೋನಿಗೆ ಸಲ್ಲುತ್ತದೆ.




ಭಾರತದ ಪರ 350 ಏಕದಿನ ಪಂದ್ಯ ಆಡಿರುವ ಧೋನಿ 10773ರನ್ ಬಾರಿಸಿದ್ದು, 144 ಟೆಸ್ಟ್ ಪಂದ್ಯದಲ್ಲಿ 4,876 ರನ್ ಕಲೆಹಾಕಿದ್ದಾರೆ. 98 ಟಿ20 ಪಂದ್ಯದಲ್ಲಿ ಆಡಿ 1617 ಬಾರಿಸುವ ಮೂಲಕ ಭಾರತ ಅಷ್ಟೇ ಅಲ್ಲದೇ ವಿಶ್ವದ ಶೇಷ್ಠ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಭಾರತದ ಪರ ಏಕದಿನ ಪಂದ್ಯದಲ್ಲಿ 10 ಸಾವಿರ ರನ್ ಬಾರಿಸಿದ ಭಾರತೀಯ ಆಟಗಾರರಲ್ಲಿ ಒಬ್ಬರಾಗಿದ್ದಾರೆ.
Read Also : ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ : ಇಂಟರ್‌ನೆಟ್ ಸ್ಥಗಿತ, ಕರ್ಫ್ಯೂ ಜಾರಿ
ಧೋನಿಯ ಈ ಸಾಧನೆಯ ಕಿರೀಟಕ್ಕೆ ಇನ್ನೊಂದು ಗರಿ ಏರಿದೆ. ಜೂನ್ 9 ರಂದು ನಡೆದ ವಿಶೇಷ ಕಾರ್ಯಕ್ರಮದಲ್ಲಿ, ಧೋನಿ ಜೊತೆಗೆ ಐಸಿಸಿ ಇತರ 6 ಕ್ರಿಕೆಟಿಗರ ಜೊತೆಗೆ ಹಾಲ್ ಆಫ್ ಫೇಮ್‌ಗೆ ಸೇರಿದೆ. ಇವರಲ್ಲಿ ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ ಮತ್ತು ಹಾಶಿಮ್ ಆಮ್ಲಾ, ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್, ನ್ಯೂಜಿಲೆಂಡ್‌ನ ಡೇನಿಯಲ್ ವೆಟ್ಟೋರಿ ಸೇರಿದ್ದಾರೆ.