FIR Against Madenur Manu: ಕಿರುತೆರೆ ನಟ ಮಡೆನೂರು ಮನು ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿದೆ. ಮದುವೆ ಆಗೋದಾಗಿ ನಂಬಿಸಿ ಅತ್ಯಾಚಾರ ಎಸಗಿ ಕೈ ಮೋಸ ಮಾಡಿದ್ದಾನೆ ಅಂಥಾ ನೊಂದ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ..
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ಮೂಲಕ ನಟ ಮಡೆನೂರು ಮನು ಜನಪ್ರಿಯತೆ ಪಡೆದುಕೊಂಡಿದ್ದರು. ಅಲ್ಲದೇ ಕಾಮಿಡಿ ಕಿಲಾಡಿಗಳು ಸೀಸನ್ 2ರ ವಿನ್ನರ್ ಕೂಡ ಆಗಿದ್ದಾರೆ. ಆದರೆ ಕಿರುತೆರೆ ನಟಿಯೊಬ್ಬರು ಮಡೆನೂರು ಮನು ಮೇಲೆ ನನ್ನ ಮದುವೆ ಆಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ್ದಾನೆ ಅಂತಾ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಕಿರುತೆರೆ ನಟಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಇನ್ನು, ನಿರ್ದೇಶಕ ಯೋಗರಾಜ್ ಭಟ್ ಅವರ ಬ್ಯಾನರ್‌ನಲ್ಲಿ ಮೂಡಿಬಂದ ಸಿನಿಮಾದಲ್ಲಿ ಮಡೆನೂರು ಮನು ನಟಿಸಿದ್ದಾರೆ. ಕುಲದಲ್ಲಿ ಕೀಳ್ಯಾವೋದು ಸಿನಿಮಾ ನಾಳೆ ರಿಲೀಸ್ ಆಗಬೇಕಿದೆ. ಆದ್ರೆ ಇದರ ಮಧ್ಯೆ ಮಡೆನೂರು ಮನು ಮೇಲೆ ಅತ್ಯಾಚಾರದ ಆರೋಪ ಕೇಳಿ ಬಂದಿದೆ. ಸದ್ಯ ಅನ್ನಪೂರ್ಣೇಶ್ವರಿ ನಗರ ಪೊಲೀಸರು ನಟ ಮನುಗಾಗಿ ಹುಡಕಾಟ ಶುರು ಮಾಡಿದ್ದಾರೆ..
Also Read: ಮಡೆನೂರು ಮನು ವಿರುದ್ಧFIR ದಾಖಲು..!
ಸದ್ಯ ಎಫ್‌ಆರ್ ದಾಖಲಾಗಿದ್ದು, ಅದರಲ್ಲಿ ಸ್ಫೋಟಕ ಅಂಶ ಬಯಲಾಗಿದೆ.. ಮನೆಯಲ್ಲಿ ನನ್ನ ಮೇಲೆ ಅತ್ಯಾಚಾರ ಮಾಡಿ ವಿಡಿಯೋ ಮಾಡಿಕೊಂಡಿದ್ದಾನೆ. ಇದರ ನಡುವೆ ನಾನು ಪ್ರೆಗ್ನೆಂಟ್ ಆಗಿದ್ದು, ಗರ್ಭಪಾತ ಮಾತ್ರೆ ನೀಡಿ ಗರ್ಭಪಾತ ಮಾಡಿಸಿರುತ್ತಾನೆ.. ಇದಾದ ಮೇಲೂ ನಾನು ಮತ್ತೆ ಪ್ರೆಗ್ನೆಂಟ್ ಆಗಿದ್ದು, ಮತ್ತೆ ಅದೇ ರೀತಿ ಗರ್ಭಪಾತ ಮಾಡಿಸಿದ್ದಾನೆ ಅಂತಾ ಯುವತಿ ದೂರಿನಲ್ಲಿ ಆರೋಪಿಸಿದ್ದಾಳೆ..

