ಬೂದಿ ಮುಚ್ಚಿದ ಕೆಂಡದಂತಿರುವ ಮಂಡ್ಯದ ಮದ್ದೂರಿನಲ್ಲಿವತ್ತು ಕೇಸರಿ ಪಡೆ ಗರ್ಜಿಸಿದೆ. ಮೊನ್ನೆ ಒಂದು ಗಣೇಶ ಮೆರವಣಿಗೆಯನ್ನು ಅಡ್ಡಿಪಡಿಸಿದ್ದಕ್ಕೆ, ಕಲ್ಲು ತೂರಾಟ ಮಾಡಿದ್ದಕ್ಕೆ ಇಂದು ಬರೋಬ್ಬರಿ ಸಾಮೂಹಿಕ ಗಣಪತಿ ವಿಸರ್ಜನಾ ಮೆರವಣಿಗೆ ನಡೆದಿದೆ. ಇವತ್ತು ಬಿಜೆಪಿ ನಿಯೋಗ ಮದ್ದೂರಿಗೆ ಭೇಟಿ ನೀಡಿದ್ದು, ಮದ್ದೂರಿನಲ್ಲಿ 28 ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ ನಡೆಯುತ್ತಿದೆ. ಮದ್ದೂರಿಗೆ ಮದ್ದೂರೇ ಕೇಸರಿಮಯ ಆಗಿದ್ದು, ಹಿಂದೂ ಕಾರ್ಯಕರ್ತರು, ಶಾಲು ಬೀಸಿ, ಕುಣಿದು ಕುಪ್ಪಳಿಸಿದ್ದಾರೆ.. ಪ್ರತಿಪಕ್ಷ ನಾಯಕ ಆರ್ ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದ ನಿಯೋಗ ಮದ್ದೂರಿನಲ್ಲಿ ಅಬ್ಬರಿಸಿದೆ.
ಬಿ.ವೈ.ವಿಜಯೇಂದ್ರ ಅವರ ಜೊತೆಗೆ ವಿಪಕ್ಷ ನಾಯಕ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಸಿ.ಟಿ.ರವಿ, ಯದುವೀರ್, ಅಶ್ವತ್ಥ ನಾರಾಯಣ ಮತ್ತಿತರರ ನಾಯಕರು ಭಾಗಿಯಾಗಿದ್ದಾರೆ. ಬಿಜೆಪಿ ನಾಯಕರು ಬರುತ್ತಿದ್ದಂತೆ, ಹಿಂದೂ ಕಾರ್ಯಕರ್ತರು ಕುಣಿದು ಕುಪ್ಪಳಿಸಿದ್ದಾರೆ. ಕೇಕೇ ಹಾಕಿದ್ದಾರೆ. ಜೈಶ್ರೀರಾಮ ಘೋಷಣೆಗಳು ಮೆರವಣಿಗೆಯಲ್ಲಿ ಮೊಳಗಿವೆ. ತಮಟೆ ವಾದ್ಯ, ದೇವರ ಮೆರವಣಿಗೆಯ ಜೊತೆ ಗಣೇಶ ಮೂರ್ತಿ ಮೆರವಣಿಗೆ ಮಾಡಿ, ಭಗವಾ ಶಾಲು ತಿರುಗಿಸುತ್ತಾ ಮೆರವಣಿಗೆ ಸಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
Read Also : ಮದ್ದೂರು ಕಲ್ಲು ತೂರಾಟ ಕೇಸ್ : ಹಿಂದೂಗಳಿರಲಿ, ಮುಸ್ಲಿಂರಿರಲಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ-ಪರಮೇಶ್ವರ್