Site icon BosstvKannada

ಮದ್ದೂರು ಕಲ್ಲು ತೂರಾಟ ಕೇಸ್‌ : ಹಿಂದೂಗಳಿರಲಿ, ಮುಸ್ಲಿಂರಿರಲಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ-ಪರಮೇಶ್ವರ್

ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣ ಸದ್ಯ ತಣ್ಣಗಾಗೋ ಹಾಗೇ ಕಾಣ್ತಿಲ್ಲ. ಯಾಕಂದ್ರೆ ಪ್ರತಿಪಕ್ಷಗಳ ವಾಗ್ದಾಳಿ ನಿಲ್ತಿಲ್ಲಾ.. ಇನ್ನು ಇದಕ್ಕೆ ಸಂಬಂಧಿಸಿದಂತೆ ಹಿಂದೂಗಳಿರಲಿ, ಮುಸ್ಲಿಂರಿರಲಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಡಾ.ಜಿ.ಪರಮೇಶ್ವರ್, ಮದ್ದೂರಿಗೆ ಬಿಜೆಪಿಯವರು ಹೋಗಲಿ ಯಾರು ಬೇಡ ಅಂತ ಹೇಳುತ್ತಾರೆ. ಈ ಸಂದರ್ಭದಲ್ಲಿ ಪ್ರಚೋದನೆ ಮಾಡುವುದು ಸರಿಯಲ್ಲ. ಎಲ್ಲರೂ ಸಹಕಾರ ಮತ್ತು ಶಾಂತಿ ಕಾಪಾಡಬೇಕು ಎಂದರು.

ಗಣೇಶ ಮೆರವಣಿಗೆ ವೇಳೆ ಕಲ್ಲುತೂರಾಟ ನಡೆಸಿದವರನ್ನು ಯಾವುದೇ ಕಾರಣಕ್ಕೂ ನಾವು ರಕ್ಷಣೆ ಮಾಡಲ್ಲ. ಇಂದು ಜಿಲ್ಲಾ ಉಸ್ತುವಾರಿ ಸಚಿವರು ಶಾಂತಿ ಸಭೆ ಮಾಡುತ್ತಿದ್ದಾರೆ. ಹಿಂದೂಗಳಿರಲಿ ಮುಸ್ಲಿಮರು ಇರಲಿ, ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.

Read Also : ಮದ್ದೂರಿನಲ್ಲಿ ಗಲಾಟೆ ಮಾಡಿದವರ ಬಂಧನವಾಗಿದೆ : ಗೃಹ ಸಚಿವ ಡಾ.ಜಿ ಪರಮೇಶ್ವರ್

Exit mobile version