ಕಿರುತೆರೆ ನಟ ಮಡೆನೂರು ಮನು ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿದೆ. ಮದುವೆ ಆಗೋದಾಗಿ ನಂಬಿಸಿ ಅತ್ಯಾಚಾರ ಎಸಗಿ ಕೈ ಮೋಸ ಮಾಡಿದ್ದಾನೆ ಅಂಥಾ ನೊಂದ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ..
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ಮೂಲಕ ನಟ ಮಡೆನೂರು ಮನು ಜನಪ್ರಿಯತೆ ಪಡೆದುಕೊಂಡಿದ್ದರು. ಅಲ್ಲದೇ ಕಾಮಿಡಿ ಕಿಲಾಡಿಗಳು ಸೀಸನ್ 2ರ ವಿನ್ನರ್ ಕೂಡ ಆಗಿದ್ದಾರೆ. ಆದರೆ ಕಿರುತೆರೆ ನಟಿಯೊಬ್ಬರು ಮಡೆನೂರು ಮನು ಮೇಲೆ ನನ್ನ ಮದುವೆ ಆಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ್ದಾನೆ ಅಂತಾ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಕಿರುತೆರೆ ನಟಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಆದ್ರೆ, ಸದ್ಯ ದಾಖಲಾಗಿರುವ ದೂರಿನಲ್ಲಿ ಮನು ವಿರುದ್ಧ ಸ್ಫೋಟಕ ಅಂಶ ಬೆಳಕಿಗೆ ಬಂದಿದೆ..
ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನಲ್ಲಿ ಯುವತಿ ಹಲವು ಆರೋಪಗಳನ್ನು ಮಾಡಿದ್ದಾಳೆ.. 2018ನೇ ಸಾಲಿನಲ್ಲಿ ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿ ಕಾರ್ಯಕ್ರಮದಲ್ಲಿ ಮಡೆನೂರು ಮನು ಪರಿಚಯ ಆಗಿ ಇಬ್ಬರೂ ಸ್ನೇಹಿತರಾಗಿರುತ್ತೇವೆ.. ಮಡೆನೂರು ಮನು ಅವರು ಈಗಾಗ್ಲೇ ಮದುವೆಯಾಗಿ ಅವರಿಗೆ ಒಂದು ಹೆಣ್ಣು ಮಗು ಕೂಡ ಇದೆ. ದಿನಾಂಕ 29.11.2022ರಂದು ಶಿವಮೊಗ್ಗದಲ್ಲಿ ಶಿಕಾರಿಪುರದಲ್ಲಿ ಒಂದು ಕಾರ್ಯಕ್ರಮಕ್ಕೆ ನಾನು ಹಾಗೂ ಇತರೆ ಕಾಮಿಡಿ ನಟರನ್ನು ಕರೆದುಕೊಂಡು ಹೋಗಿ ಅಲ್ಲೇ ಒಂದು ಹಾಸ್ಯ ಕಾರ್ಯಕ್ರಮ ಮಾಡಿರುತ್ತೇನೆ.
ಈ ಕಾರ್ಯಕ್ರಮ ಮುಗಿದ ಮೇಲೆ ನಾನು ಶಿಕಾರಿಪುರದ ಹೋಟೆಲ್ ರೂಂನಲ್ಲಿದ್ದಾಗ ನನಗೆ ಸಂಭಾವನೆ ನೀಡುವ ನೆಪದಲ್ಲಿ ರೂಮ್‌ಗೆ ಬಂದು ನನ್ನ ಮೇಲೆ ಅತ್ಯಾಚಾರ ಮಾಡಿರುತ್ತಾನೆ.. ಇದಾದ ಮೇಲೆ 2022ನೇ ಸಾಲಿನ ಡಿಸೆಂಬರ್ 3ರಂದು ನನ್ನ ಮನೆಗೆ ಬಂದು ನನ್ನ ವಿರೋಧದ ನಡುವೆ ನನಗೆ ತಾಳಿ ಕಟ್ಟಿರುತ್ತಾನೆ. ನಂತರ ಅದೇ ಮನೆಯಲ್ಲಿ ಮನು ನನ್ನ ಮೇಲೆ ಹಲವು ಬಾರಿ ಅತ್ಯಾಚಾರ ಮಾಡಿರುತ್ತಾನೆ.. ಈ ನಡುವೆ ನಾನು ಪ್ರಗ್ನೆಂಟ್ ಆಗಿದ್ದು, ಇದನ್ನ ತಿಳಿದು ಮನು ಮನೆಗೆ ಬಂದು ನನಗೆ ಗರ್ಭಪಾತ ಆಗುವ ಮಾತ್ರೆ ನೀಡಿ ಗರ್ಭಪಾತ ಮಾಡಿಸಿರುತ್ತಾನೆ. ಇದಾದ ಮೇಲೆ ನಾನು ಮತ್ತೆ ಪ್ರಗ್ನೆಂಟ್ ಆಗಿದ್ದು, ಮತ್ತೆ ಅದೇ ರೀತಿ ಗರ್ಭಪಾತ ಮಾಡಿಸಿರುತ್ತಾನೆ..
ನಂತರ ನಾಗರಬಾವಿಯಲ್ಲಿ ಬಾಡಿಗೆ ಮನೆಯನ್ನು ಮನು ಹುಡುಕಿ ಕೊಟ್ಟಿರುತ್ತಾರೆ. ಮನು ಅವರು ನನಗೆ ಬೇರೆ ಕಡೆ ಮನೆಯನ್ನು ಬಾಡಿಗೆಗೆ ಮಾಡಿ ಈ ಮನೆಯಲ್ಲೂ ಸಹ ನನ್ನ ಮೇಲೆ ಅತ್ಯಾಚಾರ ಮಾಡಿ ನನ್ನ ಖಾಸಗಿ ವಿಡಿಯೋವನ್ನು ಆತ ಫೋನಿನಲ್ಲಿ ಮಾಡಿರುತ್ತಾನೆ.. ಅದನ್ನು ಪ್ರಶ್ನಿಸಿದ್ದಕ್ಕೆ ನನಗೆ ಹೊಡೆದು ಹಲ್ಲೆ ಮಾಡಿ ಈ ವಿಚಾರವನ್ನು ಯಾರಿಗೂ ಹೇಳಬೇಡ ಎಂದು ಬೆದರಿಕೆ ಹಾಕಿರುತ್ತಾನೆ.. ಆತ ಒಬ್ಬ ನಾಯಕ ನಟನಾಗಿ ಸಿನಿಮಾ ಮಾಡಲು ಒಪ್ಪಿಕೊಂಡಿದ್ದು, ಇದಕ್ಕೆ ನಾನು ಸುಮಾರು ಲಕ್ಷಾಂತರ ರೂಪಾಯಿಯನ್ನು ನೀಡಿರುತ್ತೇನೆ..
Also Read: ED Raid : ಸಿದ್ದಾರ್ಥ ಶಿಕ್ಷಣ ಸಂಸ್ಥೆ ಮೇಲೆ ED ದಾಳಿ : ಹೇಗಿತ್ತು ಗೃಹ ಸಚಿವ ಪರಮೇಶ್ವರ್ ರಿಯಾಕ್ಷನ್!
ಆದ್ದರಿಂದ ಈ ರೀತಿ ನನ್ನ ಮೇಲೆ ಅತ್ಯಾಚಾರ ಮಾಡಿ ಮದುವೆ ಮಾಡಿಕೊಂಡಂತೆ ನಾಟಕ ಮಾಡಿ ನನಗೆ ಗರ್ಭಪಾತ ಮಾಡಿಸಿ ಮದುವೆ ಮಾಡಿಕೊಳ್ಳದೇ ಮೋಸ ಮಾಡಿದ್ದಾನೆ. ಇದನ್ನು ಕೇಳಿದ್ದಕ್ಕೆ ನನ್ನ ಮೇಲೆ ಹಲ್ಲೆ ಮಾಡಿ ಪ್ರಾಣಬೆದರಿಕೆ ಹಾಕಿರುವ ಮಡೆನೂರು ಮನು ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾಳೆ.
ಇನ್ನು, ನಿರ್ದೇಶಕ ಯೋಗರಾಜ್ ಭಟ್ ಅವರ ಬ್ಯಾನರ್‌ನಲ್ಲಿ ಮೂಡಿಬಂದ ಕುಲದಲ್ಲಿ ಕೀಳ್ಯಾವುದೋ ಸಿನಿಮಾದಲ್ಲಿ ಮಡೆನೂರು ಮನು ನಟಿಸಿದ್ದಾರೆ. ಈ ಸಿನಿಮಾ ನಾಳೆ ರಿಲೀಸ್ ಆಗಬೇಕಿದೆ. ಆದ್ರೆ ಇದರ ಮಧ್ಯೆ ಮಡೆನೂರು ಮನು ಮೇಲೆ ಅತ್ಯಾಚಾರದ ಆರೋಪ ಕೇಳಿ ಬಂದಿದೆ. ಸದ್ಯ ಅನ್ನಪೂರ್ಣೇಶ್ವರಿ ನಗರ ಪೊಲೀಸರು ನಟ ಮನುಗಾಗಿ ಹುಡಕಾಟ ಶುರು ಮಾಡಿದ್ದಾರೆ..
ಒಟ್ನಲ್ಲಿ, ಮದುವೆ ಆಗೋದಾಗಿ ನಂಬಿಸಿ ಕೈಕೊಟ್ಟಿರೋ ಮಡೆನೂರು ಮನುಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.. ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿರುವ ಆರೋಪಗಳು ಹಲವು ಅನುಮಾನ ಹುಟ್ಟು ಹಾಕಿವೆ..

