Site icon BosstvKannada

Madenur Manu Arrest: ಮಡೆನೂರು ಮನು ಕೈಗೆ ಕೋಳ ತೊಡಿಸಿದ ಪೊಲೀಸರು : ಮನು ಎಲ್ಲಿದ್ದ ಗೊತ್ತಾ..?

ಖತರ್ನಾಕ್‌ ಕಿಲಾಡಿ ಮನು ಎಲ್ಲಿದ್ದ ಗೊತ್ತಾ..?ಕಿರುತೆರೆ ನಟಿ ಮೇಲೆ ಅತ್ಯಾಚಾರ ಪ್ರಕರಣ ದಾಖಲಾದ ಬೆನ್ನಲ್ಲೇ Madenur Manu Arrest ಕೈಗೆ ಪೊಲೀಸರು ಕೊನೆಗೂ ಕೋಳ ತೊಡಿಸಿದ್ದಾರೆ.

ಕಾಮಿಡಿ ಕಿಲಾಡಿಗಳು ಶೋ ಮೂಲಕ ಖ್ಯಾತಿ ಪಡೆದ Madenur Manu Arrest ವಿರುದ್ಧ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ಕಿರುತೆರೆ ನಟಿಯೊಬ್ಬರು ಇವರ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ್ದಾರೆ.

ಸದ್ಯ ಈ ವಿಚಾರ ಸೆನ್ಸೇಷನ್ ಸೃಷ್ಟಿಸಿದ್ದು, ಇನ್ನು ಎಫ್‌ಆರ್‌ನಲ್ಲಿ ಸ್ಫೋಟಕ ಅಂಶ ಬಯಲಾಗಿದ್ದು, ಸಹನಟಿ ಹಲವು ಆರೋಪಗಳನ್ನು ಹೊರಿಸಿದ್ದಾರೆ… ನನ್ನ ಮನೆಯಲ್ಲಿ ಅತ್ಯಾಚಾರ ಮಾಡಿ ವಿಡಿಯೋ ಮಾಡಿಕೊಂಡಿದ್ದಾನೆ. ಇದರ ನಡುವೆ ನಾನು ಪ್ರೆಗ್ನೆಂಟ್‌ ಆಗಿದ್ದು, ಗರ್ಭಪಾತ ಮಾತ್ರೆ ನೀಡಿ ಗರ್ಭಪಾತ ಮಾಡಿಸಿರುತ್ತಾನೆ. ಇದಾದ ಮೇಲೂ ನಾನು ಮತ್ತೆ ಪ್ರೆಗ್ನೆಂಟ್‌ ಆಗಿದ್ದು, ಮತ್ತೆ ಅದೇ ರೀತಿ ಗರ್ಭಪಾತ ಮಾಡಿಸಿದ್ದಾನೆ ಅಂತಾ ಯುವತಿ ದೂರಿನಲ್ಲಿ ಆರೋಪಿಸಿದ್ದಾಳೆ.

Also Read: ಮಡೆನೂರು ಮನು ಕಳ್ಳಾಟ FIR ನಲ್ಲಿ ಬಯಲು, ದೂರಿನಲ್ಲಿ ಏನಿದೆ..?

ಜೊತೆಗೆ ಸಹ ನಟಿ ಬಗ್ಗೆ ಮಾತನಾಡಿರುವ ಆಡಿಯೋ ಮತ್ತು ವಿಡಿಯೋ ವೈರಲ್‌ ಆದ್ದ ಬೆನ್ನಲ್ಲೇ ಈಗ ಪೊಲೀಸರು ಬಂಧಿಸಿದ್ದಾರೆ.. ಹಾಸನ ಬಳಿಯ ಶಾಂತಿಗ್ರಾಮದ ಮಡೆನೂರು ಬಳಿ ಮನು ಅರೆಸ್ಟ್‌ ಆಗಿದ್ದು, ಪೊಲೀಸ್ರು ವಿಚಾರಣೆ ನಡೆಸುತ್ತಿದ್ದಾರೆ.

Exit mobile version