BosstvKannada

ಕರ್ನಾಟಕ ನಮಗೆ ಉದಾತ್ತ ಉಡುಗೊರೆ ಕೊಟ್ಟಿದೆ : ಆಂಧ್ರ ಡಿಸಿಎಂ pawan kalyan

ವಿಧಾನಸೌಧದ ಮುಂಭಾಗದಲ್ಲಿ‌ ಆಯೋಜಿಸಿರುವ ಆನೆಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಆಂಧ್ರ ಡಿಸಿಎಂ ಪವನ್‌ ಕಲ್ಯಾಣ್‌ ಭಾಗವಹಿಸಿದ್ದಾರೆ. ಕುಮ್ಕಿ ಆನೆಗಳನ್ನ ಆಂಧ್ರ ಡಿಸಿಎಂ ಪವನ್‌ ಕಲ್ಯಾಣ್‌ ಅವರಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಗೌರವ ಪೂರ್ವಕವಾಗಿ ಹಸ್ತಾಂತರಿಸಿದ್ರು..

ಇನ್ನು ಈ ಕಾರ್ಯಕ್ರಮದಲ್ಲಿ ಕನ್ನಡದಲ್ಲೇ ಮಾತು ಆರಂಭಿಸಿದ ಡಿಸಿಎಂ ಪವನ್ ಕಲ್ಯಾಣ್, ಕರ್ನಾಟಕ ನಾಡಗೀತೆಯ ಸಾಲುಗಳನ್ನ ಹೇಳಿದ್ರು. ಅಷ್ಟೇಅಲ್ಲದೇ ಕುವೆಂಪು ಕವನದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅವರನ್ನ ನಾವು ಸದಾಕಾಲ ನೆನೆಯಬೇಕಿದೆ ಎಂದರು. ಇವತ್ತು ವಿಧಾನಸೌಧದಲ್ಲಿ ನಾನು ನಿಂತಿದ್ದೇನೆ. ಒಂದು ಐತಿಹಾಸಿಕ ಕಾರ್ಯಕ್ರಮ ನಡೆಯುತ್ತಿದೆ. ಈಕ್ವಿಟಿ, ಎಕಾಲಜಿ, ಡೆವಲಪ್ಮೆಂಟ್ ಇದು ಸಿದ್ದರಾಮಯ್ಯನವರ ಸೂತ್ರಗಳಾಗಿವೆ. ನಮ್ಮದು ಇದೇ ರೀತಿಯ ಸೂತ್ರಗಳಾಗಿವೆ ಎಂದರು.

Also Read: ರಾಜ್ಯದ ಐದು ಕುಮ್ಕಿ ಆನೆಗಳನ್ನ Andhra ಸರ್ಕಾರಕ್ಕೆ ಹಸ್ತಾಂತರ

ಎರಡು ಡಿಫರೆಂಟ್ ಪೊಲಿಟಿಕಲ್ ಗ್ರೂಪ್‌ಗಳಿವೆ. ಒಂದು ಇಂಡಿಯಾ ಅಲೆಯನ್ಸ್, ಮತ್ತೊಂದು ಎನ್.ಡಿ.ಎ. ಆದರೆ ಎಲ್ಲರ ಹಿತಾಸಕ್ತಿಯು ಸಮಾಜದ ಕಲ್ಯಾಣಕ್ಕಾಗಿಯೇ ಇರುವಾಗ ಆ ನಿಟ್ಟಿನಲ್ಲೇ ನಾವು ಕೆಲಸ ಮಾಡ್ತಿದ್ದೇವೆ.
ಸಿದ್ದರಾಮಯ್ಯ ನೇತೃತ್ವದಲ್ಲಿ ಕರ್ನಾಟಕ ಅಭಿವೃದ್ಧಿಯಾಗ್ತಿದೆ ಅಂತಾ ಕನ್ನಡದಲ್ಲಿಯೇ ಸಿಎಂಗೆ ಅಭಿನಂದನೆ ಸಲ್ಲಿಸಿದರು. ಇನ್ನು ಕರ್ನಾಟಕ, ಆಂಧ್ರ ಸಹೋದರ ರಾಜ್ಯಗಳು. ವೈಲ್ಡ್ ಲೈಫ್‌ನಲ್ಲಿ ಎರಡು ರಾಜ್ಯ ಪ್ರಬಲವಾಗಿವೆ.

ಅರಣ್ಯ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹಿತಾಸಕ್ತಿ. ಹೀಗಾಗಿ ಕರ್ನಾಟಕ ನಮಗೆ ಉದಾತ್ತ ಉಡುಗೊರೆ ಕೊಟ್ಟಿದೆ ಅದಕ್ಕೆ ನಾವು ಧನ್ಯವಾದ ತಿಳಿಸ್ತೇವೆ ಎಂದರು. ಸಹಕಾರದಿಂದ ಎರಡು ರಾಜ್ಯದ ಅರಣ್ಯ ಸುರಕ್ಷಿತವಾಗಿವೆ. ನಮಗೆ ಇವತ್ತು ಕುಮ್ಕಿ ಆನೆಗಳನ್ನ ಸರ್ಕಾರ ನೀಡಿದೆ. ಇದರಿಂದ ನಮಗೆ ಸಂತೋಷವಾಗಿದೆ. ಪದೇ ಪದೇ ನಾನು ಇಲ್ಲಿಗೆ ಬರುತ್ತೇನೆ. ಆಂಧ್ರದಲ್ಲಿ ಅರಣ್ಯ ಕಳ್ಳತನಕ್ಕೆ ಕಡಿವಾಣ ಹಾಕ್ತೇವೆ. ಇಲ್ಲಿನ ಮಾದರಿಯಲ್ಲೇ ಆಂಧ್ರದಲ್ಲೂ ಆನೆಗಳ ಸಂರಕ್ಷಣೆ ಮಾಡ್ತೇವೆ. ತರಬೇತಿ ಕ್ಯಾಂಪುಗಳನ್ನ ಪ್ರಾರಂಭಿಸ್ತೇವೆ. ಕುಮ್ಕಿ ಆನೆಗಳ ತರಬೇತಿ ನೀಡ್ತೇವೆ. ಆನೆಗಳ ಸಂರಕ್ಷಣೆಗೆ ಒತ್ತು ಕೊಡ್ತೇವೆ. ಇದಕ್ಕೆ ಕರ್ನಾಟಕದ ಸಹಕಾರವನ್ನ ಪಡೆಯುವ ಮೂಲಕ ಪ್ರಾರಂಭಿಸುತ್ತಿದ್ದೇವೆ ಎಂದು ಹೇಳಿದರು.

Exit mobile version