ಆನೆಗಳನ್ನ ಪಳಗಿಸಲು ರಾಜ್ಯದ ಆನೆಗಳಿಗೆ ಆಂಧ್ರ ಸರ್ಕಾರ ಬೇಡಿಕೆ ಇಟ್ಟಿತ್ತು. ಹೀಗಾಗಿ ಇಂದು ಐದು ಕುಮ್ಕಿ ಆನೆ ಗಳನ್ನ Andhra ಸರ್ಕಾರಕ್ಕೆ ಹಸ್ತಾಂತರಿಸುವ ಸಲುವಾಗಿ ವಿಧಾನಸೌಧದ ಮುಂಭಾಗದಲ್ಲಿ ಹಸ್ತಾಂತರ ಕಾರ್ಯಕ್ರಮ ವನ್ನ ಆಯೋಜಿಸಲಾಗಿದೆ. ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಇವರಿಗೆ ಸಿಎಂ ಸಿದ್ದರಾಮಯ್ಯ ಅವರು ಆನೆಗಳನ್ನ ಹಸ್ತಾಂತರಿಸಿದ್ರು.

ಈಗಾಗಲೇ ವಿಧಾನಸೌಧಕ್ಕೆ ಆನೆಗಳು ಆಗಮಿಸಿವೆ. ಎರಡು ಶಿವಮೊಗ್ಗದ ಸಕ್ರೆಬೈಲಿನಿಂದ ಆಗಮಿಸಿದ್ದು, ಮೂರು ಕೊಡಗಿನ ದುಬಾರೆಯಿಂದ ಆಗಮಿಸಿವೆ. ಆನೆಗಳ ಜೊತೆ ತೆರಳಲಿರುವ ರಾಜ್ಯದ ಅರಣ್ಯ ಸಿಬ್ಬಂದಿ ಹಾಗೂ
ಆನೆಗಳ ಮಾವುತರು Andhra ತೆರಳಲಿದ್ದು, ಅಲ್ಲಿನ ಸಿಬ್ಬಂದಿಗೆ ತರಬೇತಿ ನೀಡಿ ವಾಪಸ್ ಆಗಲಿದ್ದಾರೆ.
Also Read: ಮಾಜಿ ಪ್ರಧಾನಿ Rajiv Gandhi ಅವರ ಪುಣ್ಯಸ್ಮರಣೆ : ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಪುಷ್ಪ ನಮನ
ಇನ್ನು ವಿಧಾನಸೌಧದ ಮುಂಭಾಗದಲ್ಲಿ ಹಸ್ತಾಂತರ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, Andhra ಡಿಸಿಎಂ ಪವನ್ ಕಲ್ಯಾಣ್, ಸಚಿವರಾದ ಈಶ್ವರ್ ಖಂಡ್ರೆ, ದಿನೇಶ್ ಗುಂಡೂರಾವ್, ಭೈರತಿ ಸುರೇಶ್, ಕೆ.ಜೆ.ಜಾರ್ಜ್,ಎಂ.ಸಿ ಸುಧಾಕರ್, ಆಂಧ್ರ ಕರ್ನಾಟಕ ಅರಣ್ಯ ಅಧಿಕಾರಿಗಳು ಭಾಗಿಯಾಗಿದ್ದಾರೆ.