Site icon BosstvKannada

ಸಲ್ಮಾನ್ ಖಾನ್​ಗೆ ಕಂಟಕ, ಹಿಂದಿ BiggBoss ಬಂದ್‌..? : ಕ್ಲಾರಿಟಿ ಕೊಟ್ಟ ರಿಷಿ ನೇಗಿ

ದೇಶದ ಅತಿದೊಡ್ಡ ರಿಯಾಲಿಟಿ ಶೋ ಎಂದೇ ಹೆಸರುವಾಸಿಯಾಗಿರು ಹಿಂದಿ ಬಿಗ್‌ ಬಾಸ್‌ ಬಂದ್‌ ಆಗುತ್ತೆ ಎಂಬ ಊಹಾಪೋಹಗಳು ಹಬ್ಬಿದೆ. ಬಿಗ್‌ ಬಾಸ್‌ಗೆ ಇಷ್ಟೋದು ಕೀರ್ತಿ ಬರಲು ಪ್ರಮುಖ ಕಾರಣ ಎಂದರೆ ಅದು ಬಾಲಿವುಡ್‌ನ ಭಾಯ್‌ಜಾನ್‌ ಸಲ್ಮಾನ್ ಖಾನ್.

ಸಲ್ಲು ಭಾಯ್‌ ಹೋಸ್ಟ್‌ ಆಗಿ ಬಂದ ನಂತರದಿಂದ ಹಿಂದಿ ಬಿಗ್‌ಬಾಸ್‌ನ ಪ್ರಸಿದ್ಧತೆ ಹೆಚ್ಚಿದೆ. ಆದರೆ ಭಾಯ್‌ಜಾನ್‌ ಜೀವಕ್ಕೆ ಕಂಟಕ ಇರುವ ಕಾರಣ ಈ ಬಾರಿಯ ಬಿಗ್‌ ಬಾಸ್‌ 19ರ ಹೋಸ್ಟ್‌ ಯಾರು ಎಂಬ ಪ್ರಶ್ನೆ ಹುಟ್ಟಿದೆ. ಕೆಲವೇ ತಿಂಗಳ ಹಿಂದೆ ಸಲ್ಲು ಆಪ್ತ ಬಾಬು ಸಿದ್ದಿಕ್‌ ನನ್ನು ಗುಂಡು ಹಾರಿಸಿ ಕೊಲ್ಲಲಾಗಿತ್ತು. ಅದಲ್ಲದೆ ಹರಿಣವನ್ನ ಕೊಂದ ಕಾರಣ ಲಾರೆನ್ಸ್ ಬಿಷ್ಣೋಯ್ ಗುಂಪು ಆಗಾಗ ಕೊಲ್ಲುವ ಬೆದರಿಕೆಯನ್ನ ಇಡುತ್ತಿತ್ತು.

ಈಗ ಮತ್ತೆ ಬಾಯ್‌ ಜಾನ್‌ಗೆ ಜೀವ ಬೇದರಿಕೆ ಬಂದಿದೆ. ಈ ಕಾರಣದಿಂದ ಬಿಗ್‌ ಬಾಸ್‌ ಹೋಸ್ಟ್‌ ಯಾರು ಎಂಬ ಪ್ರಶ್ನೆ ಇತ್ತು, ಆದರೆ ಈಗ ಎಂಡೆಮೋಲ್ ಶೈನ್ ಇಂಡಿಯಾ ಸಿಇಒ ರಿಷಿ ನೇಗಿ ಈ ಎಲ್ಲಾ ಪ್ರಶ್ನೆಗಳಿಗೆ ಬ್ರೇಕ್‌ ಹಾಕಿದ್ದಾರೆ. ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ, ಸಲ್ಮಾನ್ಗೆ ಹೆಚ್ಚಿನ ಭದ್ರತೆಯೋಂದಿಗೆ ಶೋ ನಡೆಸಲಾಗುವುದು ಮತ್ತು ಹೊರಗಿನ ಜನರಿಗೆ ಅನುಮತಿ ನೀಡುವುದಿಲ್ಲ ಎಂದು ಹೇಳಿದ್ದಾರೆ. ಇದು ಹಿಂದಿ ಬಿಗ್‌ ಬಾಸ್‌ ಹಾಗೂ ಸಲ್ಲು ಅಭಿಮಾನಿಗಳಲ್ಲಿ ಸಂತಸ ತಂದಿದೆ.

Read Also : ಬಿಗ್‌ಬಾಸ್‌ ಮನೆಯಲ್ಲಿ ಸಂಜನಾ ಆರ್ಭಟ.. ಜೀವನದ ಹೊಸ ಅಧ್ಯಾಯದ ಬಗ್ಗೆ ಪೋಸ್ಟ್‌ ಮಾಡಿದ ನಟಿ!

Exit mobile version