Site icon BosstvKannada

ಬಿಗ್‌ಬಾಸ್‌ ಮನೆಯಲ್ಲಿ ಸಂಜನಾ ಆರ್ಭಟ.. ಜೀವನದ ಹೊಸ ಅಧ್ಯಾಯದ ಬಗ್ಗೆ ಪೋಸ್ಟ್‌ ಮಾಡಿದ ನಟಿ!

ಇಬ್ಬರು ಮಕ್ಕಳನ್ನ ಬಿಟ್ಟು ಬಿಗ್‌ಬಾಸ್‌ ಮನೆಗೆ ಕಾಲಿಟ್ಟಿ ಸಂಜನಾ.. ಪುಟ್ಟ ಮಕ್ಕಳನ್ನ ಬಿಟ್ಟು ಸಂಜನಾ ಗಲ್ರಾನಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕನ್ನಡ, ಹಿಂದಿ, ಮಲಯಾಳಂ, ತೆಲುಗು ಭಾಷೆಗಳಲ್ಲಿ ಬಿಗ್ ಬಾಸ್ ಫೀವರ್‌ ಜೋರಾಗಿದೆ.. ಕಳೆದ ವೀಕೆಂಡ್‌ನಲ್ಲಿ ಬಿಗ್ ಬಾಸ್ ತೆಲುಗು ಸೀಸನ್ 9 ಗ್ರ್ಯಾಂಡ್ ಆಗಿ ಲಾಂಚ್ ಆಗಿದೆ. ಎಂದಿನಂತೆ ಎವರ್‌ಗ್ರೀನ್ ನಾಗಾರ್ಜುನ ಬಿಗ್ ಬಾಸ್ ಅನ್ನು ಕಿಕ್ ಸ್ಟಾರ್ಟ್ ಮಾಡಿದ್ದಾರೆ. ಇದರ ಜೊತೆಗೆ ಬಿಗ್‌ಬಾಸ್‌ ಬಿಸಿ ಹೆಚ್ಚಿಸಲು ಕನ್ನಡದ ಹಾಟ್‌ ಬೆಡಗಿ ಪುಟಾಣಿ ಮಕ್ಕಳನ್ನ ಹೊಂದಿರುವ ಸಂಜನಾ ಗಲ್ರಾನಿ ಇದೀಗ ಬಿಗ್ ಬಾಸ್ ತೆಲುಗು ರಿಯಾಲಿಟಿ ಶೋಗೆ ಕಾಲಿಟ್ಟಿದ್ದಾರೆ. ಅಯ್ಯೋ ಶಿವನೇ ಪುಟ್ಟ ಪುಟ್ಟ ಮಕ್ಕಳನ್ನ ಬಿಟ್ಟು ಸಂಜನಾ ಬಿಗ್‌ಬಾಸ್‌ಗೆ ಯಾಕೆ ಬಂದ್ರು ಅನ್ನೋ ಪ್ರಶ್ನೆಗೆ ಅವರೇ ಉತ್ತರ ಕೊಟ್ಟಿದ್ದಾರೆ.

ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿರುವ ಸಂಜನಾ, ಜೀವನದಲ್ಲಿ ಕೆಲವೊಮ್ಮೆ ಕಷ್ಟಕರ ಸವಾಲುಗಳು ಎದುರಾಗೋದು ಸಹಜ. ಒಂದ್ಕಾಲದಲ್ಲಿ ನಾನು ಸಿನಿಮಾ ತಾರೆಯಾಗಿ ಮಿಂಚುತ್ತಿದ್ದೆ. ಆದರೆ, ಪ್ರಕರಣವೊಂದರಲ್ಲಿ ನನ್ನನ್ನ ಟಾರ್ಗೆಟ್ ಮಾಡಲಾಯಿತು. ಇದರಿಂದ ನನ್ನ ವೃತ್ತಿಜೀವನದಲ್ಲಿ ಮಾತ್ರವಲ್ಲ, ವೈಯಕ್ತಿಕ ಜೀವನದಲ್ಲೂ ಅಲ್ಲೋಲ ಕಲ್ಲೋಲವಾಯಿತು. ಪರಿಸ್ಥಿತಿಗೆ ಬಲಿಯಾಗದೇ, ಸರ್‌ವೈವ್ ಆಗಿದ್ದೇನೆ. ನನ್ನ ಕಥೆಯನ್ನ ಪುನಃ ಬರೆಯಲು ಮುಂದಾಗಿದ್ದೇನೆ.‌ ತಾಯ್ತನ ನನ್ನ ಜೀವನವನ್ನೇ ಬದಲಾಯಿಸಿತು.

ಅಲಾರಿಕ್ ಪಾಷಾ ಮತ್ತು ಅಜೀನಾ ಪಾಷಾ ಎಂಬ ಎರಡು ಮುದ್ದು ಮಕ್ಕಳಿಂದ ನಾನು ನನ್ನ ಜೀವನದ ಹೊಸ ಅಧ್ಯಾಯವನ್ನು ಅಪಾರವಾದ ಪ್ರೀತಿಯಿಂದ ಆರಂಭಿಸಿದ್ದೇನೆ. ತೆರೆಮೇಲೆ ಮೆಚ್ಚುಗೆ ಗಳಿಸಿ ನಟಿಯಾಗಿದ್ದ ನನ್ನ ಗುರುತು, ಈಗ ಮಕ್ಕಳನ್ನು ಸಾಕುವ, ಪೋಷಿಸುವ ತಾಯಿಯಾಗಿ ಮಾರ್ಪಟ್ಟಿತು. ಮಕ್ಕಳ ಮುದ್ದು ನಗುವಿನ ಹಿಂದೆ ಕನಸುಗಳನ್ನು ಬೆಳೆಸಿಕೊಂಡ ಹಂಬಲಗಳನ್ನ ಹೊತ್ತ ಮಹಿಳೆಯಾಗಿ ಬದುಕುತ್ತಿದ್ದೆ. ಮತ್ತೆ ಎದ್ದು ನಿಲ್ಲಲು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದೆ. ಈಗ ಆ ಕ್ಷಣ ಬಂದೇಬಿಟ್ಟಿದೆ. ಇದರ ಜೊತೆಗೆ ನನ್ನ ಪತಿ ಡಾ.ಅಜೀಜ್ ಪಾಷಾಗೆ ವಿಶೇಷ ಧನ್ಯವಾದಗಳು. ಅವರಿಲ್ಲದೆ, ಅವರ ಬೆಂಬಲವಿಲ್ಲದೆ ಈ ಪಯಣವೇ ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಇನ್ನು 12 ವರ್ಷಗಳ ಹಿಂದೆ ಕನ್ನಡದ ಮೊದಲ ಬಿಗ್​​ಬಾಸ್​​ಗೆ ಸ್ಪರ್ಧಿಯಾಗಿ ಹೋಗಿದ್ದ ನಟಿ ಸಂಜನಾ ಈಗ ಒಂದು ದಶಕಕ್ಕೂ ಹೆಚ್ಚು ಸಮಯದ ಬಳಿಕ ತೆಲುಗು ಬಿಗ್​​ಬಾಸ್ ಮನೆ ಪ್ರವೇಶಿಸಿದ್ದಾರೆ. ಸಂಜನಾ, ಇದೀಗ ತೆಲುಗು ಬಿಗ್​​ಬಾಸ್​​ನಲ್ಲಿ ತಮ್ಮ ವಿಶ್ವರೂಪ ದರ್ಶನ ಮಾಡಿಸುತ್ತಿದ್ದಾರೆ. ಮನೆ ಮಂದಿಯ ಮೇಲೆ ಹಾರಿ ಬಿದ್ದಿದ್ದು, ಹಲವರೊಟ್ಟಿಗೆ ಜಗಳ ಮಾಡಿದ್ದಾರೆ. ಖ್ಯಾತ ನಟಿಯನ್ನು ಟಾರ್ಗೆಟ್ ಮಾಡಿ ವಾಗ್ದಾಳಿ ನಡೆಸಿದ್ದು, ನಟಿ ಫ್ಲೋರಾ ಸೈನಿ ಕಣ್ಣೀರು ಹಾಕಿದ್ದಾರೆ. ಸದ್ಯ ಸಂಜನಾ ಅಬ್ಬರಕ್ಕೆ ಬಿಗ್‌ಬಾಸ್‌ ಮನೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದ್ದು, ಮುಂದಿನ ದಿನಗಳಲ್ಲಿ ಏನಾಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

Read Also : ಮಾಜಿ ಪತಿಯ 30 ಸಾವಿರ ಕೋಟಿ ಆಸ್ತಿಯಲ್ಲಿ ಪಾಲು ಕೇಳಿದ ಕರೀಷ್ಮಾ!

Exit mobile version