Site icon BosstvKannada

ತಮಿಳಿನಿಂದ ಕನ್ನಡ ಹುಟ್ಟಿದ್ದು : Kamal Haasan ವಿವಾದಾತ್ಮಕ ಹೇಳಿಕೆಗೆ ಕನ್ನಡಿಗರಿಂದ ಆಕ್ರೋಶ

ತಮಿಳಿನಿಂದ ಕನ್ನಡ ಹುಟ್ಟಿದ್ದು ಅಂತಾ ನಟ Kamal Haasan ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮಣಿರತ್ನಂ ಹಾಗೂ ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗೆ ಚೆನ್ನೈನಲ್ಲಿ ಈ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ನಡೀತು. ಇದಕ್ಕೆ ಕನ್ನಡ ನಟ ಶಿವರಾಜ್‌ಕುಮಾರ್ ಮುಖ್ಯ ಅತಿಥಿಯಾಗಿ ಹೋಗಿದ್ದರು.

ಈ ಸಂದರ್ಭದಲ್ಲಿ ವೇದಿಕೆ ಮೇಲೆ ಮಾತನಾಡಿದ Kamal Haasan ಅಣ್ಣಾವ್ರ ಕುಟುಂಬದ ಜೊತೆಗಿರುವ ಆತ್ಮೀಯತೆ ಒಡನಾಟ ಬಗ್ಗೆ ಮನ ಬಿಚ್ಚಿ ಮಾತನಾಡಿದ್ರು. ಡಾ. ರಾಜ್‌ಕುಮಾರ್ ಜೊತೆಗಿನ ಒಡನಾಟದ ಬಗ್ಗೆ ನೆನಪಿಸಿಕೊಂಡಿ ದ್ದರು. ಬಳಿಕ ಮಾತು ಮುಂದುವರೆಸಿ ಕಮಲ್ ನನ್ನ ‘ರಾಜ ಪಾರ್ವೈ’ ಚಿತ್ರಕ್ಕೆ ಕ್ಲಾಪ್ ಮಾಡಿ ರಾಜ್‌ಕುಮಾರ್ ಅವ್ರು ಶುಭ ಕೋರಿದ್ದರು. ಬಳಿಕ ಬೆಂಗಳೂರಿನಲ್ಲಿ ‘ಪುಷ್ಪಕ ವಿಮಾನ’ ಸಿನಿಮಾ ಆರಂಭಿಸಿದಾಗ ಅದಕ್ಕೂ ಅವ್ರೇ ಕ್ಲಾಪ್ ಮಾಡಿದ್ದರು. ಇದು ಆ ಊರಿನಲ್ಲಿರುವ ನನ್ನ ಕುಟುಂಬ, ಅದಕ್ಕಾಗಿ ಶಿವಣ್ಣ ಇಲ್ಲಿ ಬಂದಿದ್ದಾರೆ.

ತಮಿಳಿನಿಂದ ಹುಟ್ಟಿದ್ದು ನಿಮ್ಮ ಭಾಷೆ ಕನ್ನಡ. ಹಾಗಾಗಿ ನೀವು ಅದರಲ್ಲಿ ಒಂದು ಎಂದು ಕಮಲ್ ಹಾಸನ್ ಹೇಳಿದ್ರು. ಅಣ್ಣಾವ್ರ ಕುಟುಂಬದ ಮೇಲಿನ ಕಮಲ್ ಹಾಸನ್ ಅಭಿಮಾನಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ ತಮಿಳಿನಿಂದ ಹುಟ್ಟಿದ್ದು ಕನ್ನಡ ಎನ್ನುವ ಅವರ ಹೇಳಿಕೆ ಸದ್ಯ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

Also Read: ಸಂಚಾರಿ ಆರೋಗ್ಯ ಘಟಕಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ Santosh Lad ಚಾಲನೆ

ಕನ್ನಡಕ್ಕೆ ತಮಿಳು ಮೂಲ ಅಲ್ಲ. ತಮಿಳಿಗಿಂತಲೂ ಬಹಳ ಹಳೆಯ ಭಾಷೆ ಕನ್ನಡ ಎಂದು ಕನ್ನಡಿಗರು ಕಾಮೆಂಟ್ ಮಾಡುತ್ತಿದ್ದು, ಕಮಲ್ ಈ ವಿವಾದಿತ ಹೇಳಿಕೆ ಬಗ್ಗೆ ಕನ್ನಡಿಗರಿಂದ ಆಕ್ರೋಶ ವ್ಯಕ್ತವಾಗ್ತಿದ್ದು, ಪರ ವಿರೋಧ ಚರ್ಚೆ ನಡೆಯುತ್ತಿದೆ.

Exit mobile version