ಬಾಹ್ಯಾಕಾಶ ಲೋಕದಲ್ಲಿ ಭಾರತ (India)ಮತ್ತೊಂದು ಪರಾಕ್ರಮ ಮೆರೆದಿದೆ. ಇದುವರೆಗೂ ಅಮೆರಿಕ(America), ರಷ್ಯಾ & ಚೀನಾ(Russia & China) ಮಾತ್ರ ಮಾಡಿದ್ದ ಸಾಧನೆಯನ್ನು ಈಗ ಭಾರತ (India)ಮಾಡಿ ತೋರಿಸಿದೆ. ಇಸ್ರೋ ಭಾರತದ ಬಾಹ್ಯಾಕಾಶ ಇತಿಹಾಸದಲ್ಲೇ ಹೊಸ ಸಾಧನೆ ಮಾಡಿದ್ದು ಅಂತರಿಕ್ಷದಲ್ಲಿ ಈಗ ಮನುಷ್ಯರ ಸಹಾಯ ಇಲ್ಲದೆಯೇ, 2 ಉಪಗ್ರಹ ನಡುವೆ ಡಾಕಿಂಗ್ ಮಾಡಿದೆ. ಅಂದ್ರೆ, ಭೂಮಿಯ ಕಕ್ಷೆಯಲ್ಲಿ ಸುತ್ತುವ 2 ಉಪಗ್ರಹದ ಮೇಲೆ ಭೂಮಿ ಮೇಲಿಂದ ನಿಯಂತ್ರಣ ಸಾಧಿಸಿ & ಒಂದನ್ನು ಮತ್ತೊಂದಕ್ಕೆ ಕೂಡಿಸುವ ಪ್ರಕ್ರಿಯೆ ಈಗ ಯಶಸ್ವಿಯಾಗಿದೆ.
ಡಾಕಿಂಗ್, ಅನ್ಡಾಕಿಂಗ್ ಪ್ರಯೋಗ ಸಕ್ಸಸ್..!

ಇನ್ನು 2 ಬಾಹ್ಯಾಕಾಶ ನೌಕೆಗಳ ಡಾಕಿಂಗ್ & ಅನ್ಡಾಕಿಂಗ್ ಎಂದರೆ, 2 ಬಾಹ್ಯಾಕಾಶ ನೌಕೆಗಳನ್ನು ಒಂದಕ್ಕೊಂದು ಜೋಡಿಸುವುದು ಹಾಗೂ ಬೇರ್ಪಡಿಸುವ ಪ್ರಯೋಗ. ಈವರೆಗೂ ಈ ಸಾಧನೆ ಮಾಡಿದ್ದ ದೇಶಗಳ ಪೈಕಿ ಅಮೆರಿಕ(America), ರಷ್ಯಾ, ಚೀನಾ(Russia & China) ಮಾತ್ರ ಮುನ್ನೆಲೆಯಲ್ಲಿ ಇದ್ದವು. ಇದೀಗ ಭಾರತ ಕೂಡ ಭರ್ಜರಿಯಾಗಿ ಎಂಟ್ರಿ ಕೊಟ್ಟಿದೆ. ಅಂದಹಾಗೆ 2024 ರ ಡಿಸೆಂಬರ್ 30 ರಂದು ಇಸ್ರೋ ಸಂಸ್ಥೆ ಉಪಗ್ರಹ ಉಡಾವಣೆ ಮಾಡಿತ್ತು. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋ (ISRO)ಮಹತ್ವದ ಉಡಾವಣೆ ಮಾಡಿತ್ತು. ಸ್ಪೇಸ್ ಡಾಕಿಂಗ್ ಎಕ್ಸ್ಪರಿಮೆಂಟ್ ಯೋಜನೆ ಭಾಗವಾಗಿ ಒಟ್ಟು 2 ಉಪಗ್ರಹ ಉಡಾವಣೆ ಮಾಡಿದ್ದು, 17 ದಿನಗಳ ನಂತ್ರ ಇಸ್ರೋ ತನ್ನ ಕಾರ್ಯದಲ್ಲಿ ಸಕ್ಸಸ್ ಕಂಡಿದೆ.