ಮತ್ತೊಂದು ಮದುವೆಯಾಗಲು ಸಜ್ಜಾದ್ರಾ ಸಮಂತಾ?

ನಾಗ ಚೈತನ್ಯ ಮತ್ತು ಸಮಂತಾ(Samantha) 2017 ರಲ್ಲಿ ವಿವಾಹವಾದರು. ಆದರೆ ದಂಪತಿಗಳು ಕೆಲವು ವರ್ಷಗಳ ಭಿನ್ನಾಭಿಪ್ರಾಯದ ನಂತರ ಅಕ್ಟೋಬರ್ 2021 ರಲ್ಲಿ ವಿಚ್ಚೇದನ ಪಡೆದು ದೂರಾಗಿದ್ದಾರೆ… ವಿಚ್ಛೇದನದ ನಂತರ ಸಮಂತಾ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ಈ ನಡುವೆ ಸಮಂತಾ ಎರಡನೇ ಮದುವೆ ಬಗ್ಗೆ ಸಾಕಷ್ಟು ಸುದ್ದಿ ಹರಿದಾಡ್ತಿದೆ…. ಖ್ಯಾತ ನಿರ್ದೇಶಕನ ಜತೆ ಸಮಂತಾ ಹೆಸರು ತಳುಕು ಹಾಕಿಕೊಂಡಿದೆ..
ಸಮಂತಾ(Samantha) ಮತ್ತೆ ಮದುವೆಯಾಗುವುದಿಲ್ಲ ಎಂದು ಎಲ್ಲೂ ಹೇಳುತ್ತಿಲ್ಲ. ಸಮಂತಾ ಎರಡನೇ ಮದುವೆಯ ಸುದ್ದಿಯೊಂದು ಇದೀಗ ಸಂಚಲನ ಮೂಡಿಸಿದೆ. ಕೆಲ ದಿನಗಳಿಂದ ಬಾಲಿವುಡ್ ನಲ್ಲಿ ನಿರ್ದೇಶಕರೊಬ್ಬರ ಜೊತೆ ಸಮಂತಾ ರಿಲೇಶನ್ ಶಿಪ್ ನಲ್ಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆ ನಿರ್ದೇಶಕ ಬೇರೆ ಯಾರೂ ಅಲ್ಲ ರಾಜು ನಿಡುಮೋರು. ರಾಜು ನಿಡುಮೋರು ನಿರ್ದೇಶನದ ಸಮಂತಾ ಅಭಿನಯದ ಫ್ಯಾಮಿಲಿ ಮ್ಯಾನ್ ವೆಬ್ ಸಿರೀಸ್ನಲ್ಲಿ ಸ್ಯಾಮ್ ನಟಿಸಿದ್ದರು.. ಈ ವೇಳೆ ಸ್ನೇಹ ಶುರುವಾಗಿ ಪ್ರೀತಿಗೆ ತಿರುಗಿದ್ದು, ಇವರಿಬ್ಬರು ಬಹಳ ದಿನಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ರಾಜು ನಿಡುಮೋರು ಅವರು ಇತ್ತೀಚೆಗೆ ಸಮಂತಾ ನಟಿಸಿದ ಸಿಟಾಡೆಲ್ ವೆಬ್ ಸರಣಿಯನ್ನು ಸಹ ನಿರ್ದೇಶಿಸಿದ್ದಾರೆ. ಫ್ಯಾಮಿಲಿ ಮ್ಯಾನ್ ವೆಬ್ ಸೀರೀಸ್ ವೇಳೆಯೇ ಇವರಿಬ್ಬರ ನಡುವೆ ಪ್ರೇಮದ ಮೊಳಕೆಯೊಡೆದಿತ್ತು ಎಂಬ ವರದಿಗಳಿವೆ. ಆದರೆ ನಿಡುಮೋರು ರಾಜ ಈಗಾಗಲೇ ಮದುವೆಯಾದ್ದು, ಸದ್ಯದಲ್ಲೇ ಪತ್ನಿಗೆ ವಿಚ್ಛೇದನ ನೀಡಿ ಸಮಂತಾ ಅವರನ್ನು ಮದುವೆಯಾಗಲು ಸಿದ್ಧರಾಗಲಿದ್ದಾರೆ ಎಂದು ಬಾಲಿವುಡ್ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಅಲ್ಲದೇ ಇವರಿಬ್ಬರು ಶೀಘ್ರದಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿಯೊಂದು ಸದ್ದು ಮಾಡುತ್ತಿದೆ.. ಇದೇ ಸಮಯಕ್ಕೆ ಸರಿಯಾಗಿ ಸಮಂತಾ ಮತ್ತೊಮ್ಮೆ ನಿರ್ದೇಶಕರೊಂದಿಗೆ ದರ್ಶನ ನೀಡಿ ಎಲ್ಲರಿಗೂ ಶಾಕ್ ನೀಡಿದ್ದಾರೆ.
ಫ್ಯಾಮಿಲಿಮ್ಯಾನ್ ಸೀಸನ್ 3 ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ. ಈ ಸಂದರ್ಭದಲ್ಲಿ ನಿರ್ದೇಶಕ ರಾಜು ನಿಡುಮೋರೆ ಸ್ಯಾಮ್ ಒಟ್ಟಿಗೆ ಕಾಣಿಸಿಕೊಂಡಿದ್ದರು.. ಇದಕ್ಕೆ ಸಂಬಂಧಿಸಿದ ಫೋಟೋಗಳು ವೈರಲ್ ಆಗಿದ್ದವು.. ಇದಲ್ಲದೇ ಸಮಂತಾ (Samantha) ಇತ್ತೀಚೆಗೆ ಮತ್ತೆ ನಿರ್ದೇಶಕರೊಂದಿಗೆ ಕಾಣಿಸಿಕೊಂಡಿದ್ದಾರೆ.. ಹೌದು ಚೆನ್ನೈಚಾಂಪಿಯನ್ಸ್ ಅವರನ್ನು ಬೆಂಬಲಿಸುತ್ತಿರುವ ಸ್ಯಾಮ್, ಅವರೊಂದಿಗೆ ಫೋಟೋ ತೆಗೆಸಿಕೊಳ್ಳುವಾಗ ರಾಜ್ ಅವರ ಕೈ ಹಿಡಿದಿದಿದ್ದಾರೆ.. ಹೀಗಾಗಿ ಸಮಂತಾ ನಿರ್ದೇಶಕರನ್ನು ಎರಡನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿವೆ. ಸದ್ಯ ಸಮಂತಾ-ರಾಜು ನಿಡುಮೋರು ಒಟ್ಟಿಗೆ ಇರುವ ಚಿತ್ರಗಳು ವೈರಲ್ ಆಗಿವೆ.