Site icon BosstvKannada

IPL 2025 Playoff : ಐಪಿಎಲ್ ಇತಿಹಾಸದಲ್ಲಿಯೇ ಶ್ರೇಯಸ್‌ ಹೊಸ ದಾಖಲೆ..!

IPL 2025 Playoff

IPL 2025 Playoff: ಈ ಬಾರಿಯ ಐಪಿಎಲ್‌ ಸೀಸನ್‌ ದಿನಕ್ಕೊಂದು ಟ್ವಿಸ್ಟ್‌, ಮನೋರಂಜನೆ ನೀಡ್ತಾ ಇದೆ.. ಭಾನುವಾರದಂದು ನಡೆದ ಪಂಜಾಬ್‌ ಕಿಂಗ್ಸ್‌ ಹಾಗೂ ರಾಜಸ್ಥಾನ್‌ ರಾಯಲ್ಸ್‌ ತಂಡಗಳ ನಡುವಿನ ಪಂದ್ಯ ರೋಚಕ ಫೈಟ್‌ಗೆ ಸಾಕ್ಷಿಯಾಗಿತ್ತು.. ರಾಜಸ್ಥಾನ ತಂಡ ಈಗಾಗಲೇ ಫ್ಲೇಆಫ್‌ ರೇಸ್‌ನಿಂದ ಹೊರಬಿದ್ದಿದೆ.. ಆದ್ರೆ ಪಂಜಾಬ್‌ಗೆ ಇದು ಮಹತ್ವದ ಪಂದ್ಯವಾಗಿತ್ತು. ಹೀಗಾಗಿ ಅದ್ಭುತ ಪ್ರದರ್ಶನ ನೀಡಿ ರಾಜಸ್ಥಾನ ವಿರುದ್ಧ 10 ರನ್‌ಗಳ ಜಯಗಳಿಸಿ ಫ್ಲೇಆಫ್‌ಗೆ ಎಂಟ್ರಿ ಕೊಟ್ಟಿದೆ.

ಆದ್ರೆ ಎಲ್ಲರ ಗಮನ ಸೆಳೆಯುತ್ತಿರೋದು ಮಾತ್ರ ಪಂಜಾಬ್‌ ತಂಡ ನಾಯಕ ಶ್ರೇಯಸ್‌ ಅಯ್ಯರ್‌.. ಅಯ್ಯರ್‌ ಪಂಜಾಬ್‌ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ ಫ್ಲೇಆಫ್‌ಗೆ ಎಂಟ್ರಿಯಾಗೋ ಹಾಗೆ ಮಾಡಿದ್ದಾರೆ.. ಈ ಮೂಲಕ ಐಪಿಎಲ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ..

ಒಂದು ತಂಡವನ್ನು ಫ್ಲೇಆಫ್‌ಗೆ ತಲುಪಿಸೋದು ಸವಾಲಿನ ಕೆಲಸ.. ಅಂತದ್ರಲ್ಲಿ ಶ್ರೇಯಸ್‌ ಅಯ್ಯರ್‌ ಮೂರು ತಂಡಗಳ ನಾಯಕನಾಗಿ ಯಶಸ್ವಿಯಾಗಿ ಮುನ್ನಡೆಸಿ ಫ್ಲೇಆಪ್‌ ಪ್ರವೇಶಿಸಿದ್ದಾರೆ.. ಅದ್ರಲ್ಲೂ ಒಂದು ಬಾರಿ ಚಾಂಪಿಯನ್ಸ್‌ ಕೂಡ ಆಗಿದ್ದಾರೆ.. 2019ರಲ್ಲಿ ಡೆಲ್ಲಿ ತಂಡವನ್ನ ಮುನ್ನಡೆಸಿ ಫ್ಲೇಆಫ್‌ ತಲುಪಿಸಿದ್ದ ಅಯ್ಯರ್‌, 2020ರಲ್ಲಿ ಅದೇ ತಂಡ ಫೈನಲ್‌ ಪ್ರವೇಶಿಸುವಂತೆ ಮಾಡಿದ್ರು.. ಬಳಿಕ ಕೊಲ್ಕತ್ತಾ ತಂಡವನ್ನು 2024ರಲ್ಲಿ ಯಶಸ್ವಿಯಾಗಿ ಮುನ್ನಡೆಸಿ ಚಾಂಪಿಯನ್‌ ಆಗುವಂತೆ ಮಾಡಿದ್ರು.

Also Read: RCB ತಂಡಕ್ಕೆ ಜಿಂಬಾಬ್ವೆ ಬೌಲರ್‌ ಎಂಟ್ರಿ!

ಇದೀಗ ಪ್ರಸ್ತುತ 2025ರ ಐಪಿಎಲ್‌ ಸೀಸನ್‌ನಲ್ಲೂ ಪಂಜಾಬ್‌ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ ಫ್ಲೇಆಫ್‌ ತಲುಪುವಂತೆ ಮಾಡಿದ್ದಾರೆ.. ಈ ಮೂಲಕ ಐಪಿಎಲ್‌ ಇತಿಹಾಸದಲ್ಲೇ ಮೂರು ವಿವಿಧ ತಂಡಗಳ ನಾಯಕನಾಗಿ ಫ್ಲೇಆಫ್‌ ತಲುಪಿಸಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಶ್ರೇಯಸ್‌ ಅಯ್ಯರ್‌ ಪಾತ್ರರಾಗಿದ್ದಾರೆ. ಅಂದಹಾಗೆ 12 ಮ್ಯಾಚ್‌ಗಳನ್ನ ಆಡಿ 17 ಪಾಯಿಂಟ್ಸ್‌ ಗಳಿಸಿರುವ ಪಂಜಾಬ್‌ ಕಿಂಗ್ಸ್‌ ತಂಡ ಟೇಬಲ್‌ನಲ್ಲಿ ಮೂರನೇ ಸ್ಥಾನದಲ್ಲಿದೆ.. ಉಳಿದ ಪಂದ್ಯಗಳಲ್ಲಿ ಡೆಲ್ಲಿ ಹಾಗೂ ಮುಂಬೈ ತಂಡಗಳ ವಿರುದ್ಧ ಸೆಣೆಸಾಡಲಿದೆ.

Exit mobile version