Site icon BosstvKannada

RCB ತಂಡಕ್ಕೆ ಜಿಂಬಾಬ್ವೆ ಬೌಲರ್‌ ಎಂಟ್ರಿ!

ಈ ಬಾರಿಯ ಐಪಿಎಲ್‌ ಪ್ಲೇಆಫ್‌ಗೆ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಎಂಟ್ರಿ ಕೊಟ್ಟಿದೆ.. ಇಂತಹ ಹೊತ್ತಲ್ಲಿ RCB ತಂಡಕ್ಕೆ ಹೊಸ ಹುಮ್ಮಸ್ಸು ಬಂದಂತಾಗಿದೆ. ಯಾಕಂದ್ರೆ, ಆರ್‌ಸಿಬಿ ಟೀಂಗೆ ಮಾರಕ ಬೌಲರ್‌ ಎಂಟ್ರಿ ಆಗಿದೆ. ಆರ್ ಸಿಬಿ ತಂಡದ ವೇಗಿ ಲುಂಗಿ ಎಂಗಿಡಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಆಡಬೇಕಿದ್ದು ಪ್ಲೇಆಫ್ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.

ಹೀಗಾಗಿ, ಈಗ ಗಿಡಿ ಬದಲಾಗಿ ಹೊಸ ವೇಗಿಯನ್ನು ಆರ್ ಸಿಬಿ ಆಯ್ಕೆ ಮಾಡಿದೆ.. ಜಿಂಬಾಬ್ವೆ ತಂಡದ ವೇಗದ ಬೌಲರ್ ಬ್ಲೆಸ್ಸಿಂಗ್ ಮುಜರಬಾನಿ ಆರ್ ಸಿಬಿ ತಂಡ ಸೇರಿಕೊಂಡಿದ್ದಾರೆ. ಪ್ಲೇಆಫ್‌ನಲ್ಲಿ ಜೋಶ್ ಹೇಜಲ್‌ವುಡ್ ಕೂಡ ಅಲಭ್ಯರಾದರೆ ಬ್ಲೆಸ್ಸಿಂಗ್ ಮುಜರಬಾನಿ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಅವಕಾಶ ಪಡೆಯುವುದು ಖಚಿತವಾಗಿದೆ.

ಇನ್ನು, ಬ್ಲೆಸ್ಸಿಂಗ್ ಮುಜರಬಾನಿ ಇದುವರೆಗೆ 70 ಟಿ20 ಪಂದ್ಯಗಳನ್ನು ಆಡಿದ್ದು, 78 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 12 ಟೆಸ್ಟ್ ಮತ್ತು 55 ಏಕದಿನ ಪಂದ್ಯಗಳಲ್ಲಿ ಜಿಂಬಾಬ್ವೆ ಟೀಂ ಪ್ರತಿನಿಧಿಸಿದ್ದಾರೆ. ಪ್ಲೇಆಫ್ ಪಂದ್ಯಗಳಲ್ಲಿ ಆಡಲು ಮುಜರಬಾನಿ 75 ಲಕ್ಷ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ.

Also Read: Darshan ಬಾಳಲ್ಲಿ ಸಂತೋಷದ ಅಲೆ, ಪ್ರೀತಿ ಮಡದಿ ಜೊತೆ ದಚ್ಚು ಡ್ಯಾನ್ಸ್‌..!

ಇನ್ನು, ಆರ್‌ಸಿಬಿ ಮುಂದಿನ ಪಂದ್ಯವನ್ನು ಮೇ 23 ರಂದು ಹೈದರಾಬಾದ್‌ ವಿರುದ್ಧ ಆಡಲಿದ್ದು, ಮೇ 27 ರಂದು ಎಲ್‌ಎಸ್‌ಜಿ ವಿರುದ್ಧ ಆಡಲಿದೆ. ಆರ್‌ಸಿಬಿಯ ಕೊನೆಯ ಲೀಗ್ ಹಂತದ ಪಂದ್ಯಕ್ಕೆ ಸ್ವಲ್ಪ ಮೊದಲು ಮಾತ್ರ ಆಯ್ಕೆಗೆ ಮುಜರಬಾನಿ ಲಭ್ಯವಿರುತ್ತಾರೆ. ಭುಜದ ನೋವಿನಿಂದಾಗಿ ಹಿಂದಿನ ಪಂದ್ಯವನ್ನು ತಪ್ಪಿಸಿಕೊಂಡಿದ್ದ ಜೋಶ್ ಹ್ಯಾಜಲ್‌ವುಡ್ ಆಗಮನಕ್ಕಾಗಿ ಆರ್‌ಸಿಬಿ ಕಾಯುತ್ತಿದೆ..

Exit mobile version