
ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಹೊಸ ಇತಿಹಾಸಕ್ಕೆ ಸಾಕ್ಷಿಯಾಗಿದೆ. 40 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಏಷ್ಯಾಕಪ್ ಫೈನಲ್‌ನಲ್ಲಿ ಇಂಡಿಯಾ ಪಾಕಿಸ್ತಾನ ಮುಖಾಮುಖಿಯಾಗುತ್ತಿವೆ. ಹೌದು.. ಸೆಪ್ಟೆಂಬರ್ 28ರಂದು ದುಬೈನಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಎರಡೂ ತಂಡಗಳು ಸಜ್ಜಾಗುತ್ತಿವೆ.. ಈಗಾಗಲೇ 2025 ರ ಏಷ್ಯಾಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ, ಪಾಕಿಸ್ತಾನವನ್ನು 2 ಬಾರಿ ಬಗ್ಗು ಬಡಿದಿದೆ. ಈಗ, ಎರಡೂ ತಂಡಗಳು ಮತ್ತೊಮ್ಮೆ ಫೈನಲ್‌ನಲ್ಲಿ ಸೆಣಸಾಡಲು ರೆಡಿಯಾಗಿ ನಿಂತಿವೆ..
ಇನ್ನು, ಟೀಮ್ ಇಂಡಿಯಾ ಇದುವರೆಗೆ 8 ಬಾರಿ ಏಷ್ಯಾ ಕಪ್ ಗೆದ್ದಿದೆ. ಪಾಕಿಸ್ತಾನ 2 ಬಾರಿ ಪ್ರಶಸ್ತಿ ಗೆದ್ದಿದೆ. ಈವರೆಗೂ ನಡೆದ ಏಷ್ಯಾಕಪ್ ಟೂರ್ನಿಗಳಲ್ಲಿ ಎರಡೂ ದೇಶಗಳು ಫೈನಲ್‌ನಲ್ಲಿ ಮುಖಾಮುಖಿ ಆಗಿರಲಿಲ್ಲ. ಸೆಪ್ಟೆಂಬರ್ 28 ರಂದು ಭಾನುವಾರ ಫೈನಲ್ ಮ್ಯಾಚ್ ನಡೆಯಲಿದೆ. ಟೀಂ ಇಂಡಿಯಾ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಫೈನಲ್ ತಲುಪಿದೆ. ಸಲ್ಮಾನ್ ಅಲಿ ಅಘಾ ನಾಯಕತ್ವದಲ್ಲಿ ಪಾಕಿಸ್ತಾನ ಫೈನಲ್ ತಲುಪಿದೆ. ಇದೇ ಟೂರ್ನಿಯಲ್ಲಿ ಎರಡು ಪಂದ್ಯಗಳಲ್ಲಿ ಪಾಕ್‌ಗೆ ಸೋಲಿನ ರುಚಿನ ನೀಡಿರುವ ಟೀಂ ಇಂಡಿಯಾ, ಫೈನಲ್‌ನಲ್ಲೂ ಗೆಲ್ಲುವ ಫೇವರಿಟ್ ಆಗಿದೆ. ಹೊಡಿಬಡಿ ಆಟಗಾರರಾದ ಅಭಿಷೇಕ್ ಶರ್ಮ, ಶುಬ್ಮನ್ ಗಿಲ್ ಸೇರಿದಂತೆ ಕೆಲವೇ ಆಟಗಾರರ ಬ್ಯಾಟಿಂಗ್ ನೆಚ್ಚಿಕೊಂಡಿರುವ ಭಾರತ, ಬೌಲಿಂಗ್‌ನಲ್ಲೂ ವೇಗಿ ಜಸ್ ಪ್ರಿತ್ ಬುಮ್ರಾ, ಅರ್ಷ್ ದೀಪ್, ವರುಣ್ ಚಕ್ರವರ್ತಿ ಮೇಲೆ ನಿರೀಕ್ಷೆ ಇಟ್ಟುಕೊಂಡಿದೆ. ಮತ್ತೊಂದೆಡೆ, ಈ ಟೂರ್ನಿಯ ಅಂಕಿ ಅಂಶ ಗಮನಿಸಿದರೆ ಪಾಕ್ ತಂಡ ಭಾರತಕ್ಕಿಂತ ವೀಕ್ ಅನ್ನಿಸಿದ್ರೂ ಪುಟಿದೇಳುವ ಸಾಧ್ಯತೆಯನ್ನ ತಳ್ಳಿ ಹಾಕುವಂತಿಲ್ಲ. ಹೀಗಾಗಿ, ಏಷ್ಯಾಕಪ್ ಫೈನಲ್‌ನತ್ತ ಎಲ್ಲರ ಚಿತ್ತ ನೆಟ್ಟಿದೆ.
Read Also : ದೊಡ್ಮನೆಗೆ ಎಂಟ್ರಿ ಕೊಡ್ತಾರಾ ಈ ಖದರ್ ಖಳನಾಯಕ ..? : ಬಿಗ್‌ಬಾಸ್ ಪ್ರೋಮೊದಲ್ಲಿ ರಿವೀಲ್!