BosstvKannada

ದೊಡ್ಮನೆಗೆ ಎಂಟ್ರಿ ಕೊಡ್ತಾರಾ ಈ ಖದರ್‌ ಖಳನಾಯಕ ..? : ಬಿಗ್‌ಬಾಸ್‌ ಪ್ರೋಮೊದಲ್ಲಿ ರಿವೀಲ್!‌

ದಕ್ಷಿಣ ಭಾರತ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್‌ ಬಾಸ್‌ ಕನ್ನಡ ಸಖತ್‌ ಕ್ಯೂರಿಯಾಸಿಟಿ ಹುಟ್ಟಿಸಿದೆ. ಕಲರ್ಸ್‌ ಕನ್ನಡ ಬಿಟ್ಟಿದ್ದ ಪ್ರೋಮೊದಲ್ಲಿ ಕಿಚ್ಚ ಸುದೀಪ್‌ ಹೇಳಿದಂತೆ 11 ಸೀಸನ್ ನೋಡಿದ್ದೇವೆ ಈ ಸೀಸನ್‌ನಲ್ಲಿ ಏನು ಸ್ಪೆಷಲ್ ಇದೆ ಅನ್ನೊರಿಗೆ ಓ ಭ್ರಮೆ ಅಂದಿದ್ದು, ಅದಕ್ಕೆ ತಕ್ಕಂತೆ ಬಿಗ್ ಬಾಸ್‌ ಈಗ ಹೊಸ ಪ್ರೋಮೊ ಬಿಟ್ಟಿದ್ದಾರೆ. ಬಿಗ್‌ ಬಾಸ್‌ 12ರ ಸ್ಪರ್ಧಿಗಳು ಯಾರು ಎನ್ನುವ ಪ್ರಶ್ನೆಗೆ ಬಿಗ್‌ ಬಾಸ್‌ ಹಿಂಟ್‌ ಕೊಟ್ಟಿದ್ದಾರೆ. ಇದರ ನಡುವೆ ಈಗ ಹೊಸ ವಿಷಯ ಹೊರಬಿದಿದ್ದು, ಬಿಗ್‌ಬಾಸ್‌ ಮನೆಗೆ ಕನ್ನಡದ ಖದರ್‌ ಖಳನಾಯಕ ಕಾಕ್ರೋಚ್ ಸುಧಿ ಎಂಟ್ರಿ ಪಕ್ಕಾ ಆಗಿದೆ.

ಹೌದು… ಬಿಗ್ ಬಾಸ್ ಕನ್ನಡ ಸೀಸನ್ 12 ಶೋಗೆ ಇನ್ನು ಬಾಕಿ ಉಳಿದಿರೋದು ಕೆಲವೇ ಗಂಟೆಗಳು ಮಾತ್ರ. ಹೀಗಿರುವಾಗಲೇ ಶೋ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿದೆ. ಯಾರೆಲ್ಲ ಸ್ಪರ್ಧಿಗಳು ಬಿಗ್ ಬಾಸ್​ಗೆ ಬರುತ್ತಾರೆ ಎಂಬ ಬಗ್ಗೆ ಚರ್ಚೆಗಳು ಹುಟ್ಟಿಕೊಂಡಿವೆ. ಇದಕ್ಕೆ ಸಂಬಂಧಿಸಿದಂತೆ ಬಿಗ್‌ಬಾಸ್‌ ಹೊಸ ಪ್ರೋಮೊ ಬಿಟ್ಟಿದ್ದು, ಮುಖ ಮುಚ್ಚಿಕೊಂಡು ಒಬ್ಬ ವ್ಯಕ್ತಿ ನಾನು ಬಿಗ್‌ಬಾಸ್‌ ಮನೆಗೆ ಹೋಗ್ತೀನಿ ಅಂತ ಜನರ ಬಳಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಕೆಲವೇ ಕ್ಷಣದಲ್ಲಿ ಸಖತ್‌ ವೈರಲ್‌ ಆಗಿದ್ದು, ಆ ವ್ಯಕ್ತಿಯ ವೇಷಭೂಷಣ ನೋಡಿದ್ರೆ ಇದು ಪಕ್ಕಾ ಕಾಕ್ರೋಚ್ ಸುಧಿ ಎಂಬ ಮಾತುಗಳು ಕೇಳಿ ಬರ್ತಿದೆ. ಜೊತೆಗೆ ಬಿಗ್‌ಬಾಸ್‌ ಕೂಡ ಇದೇ ಭಾನುವಾರ 6:30ಕ್ಕೆ ಮನೆ ಮನೆಗೆ ಗ್ರಾಂಡ್‌ ಎಂಟ್ರಿ ಕೊಡುತ್ತಿದೆ. ಒಟ್ನಲ್ಲಿ ಬಿಗ್‌ಬಾಸ್‌ ಫಿವರ್‌ ಜಾಸ್ತಿಯಾಗುತ್ತಿದ್ದು, ಈ ಸಲ ಯಾರು ಬರ್ತಾರೆ, ಯಾರು ಬರಲ್ಲ.. ದೊಡ್ಮನೆ ಆಟ ಯಾವ ರೀತಿ ಇರುತ್ತೆ ಎಂಬ ಮಿಲಿಯನ್‌ ಡಾಲರ್‌ ಪ್ರಶ್ನೆಗಳಗೆ ಸಂಡೇ ಉತ್ತರ ಸಿಗಲಿದೆ.

Read Also : ನನ್ನ ಮೇಲೆ ಇಷ್ಟೊಂದು ದ್ವೇಷ, ಹಗೆತನ ಯಾಕೆ? : ಹೆಗ್ಗಡೆಯವರ ನೋವಿನ ನುಡಿ

Exit mobile version