BosstvKannada

ವಿಂಡೀಸ್‌ ವಿರುದ್ಧ ಭಾರತ ಕ್ಲೀನ್‌ ಸ್ವೀಪ್‌ : ಟೀಮ್ ಇಂಡಿಯಾ ವಿಶ್ವ ದಾಖಲೆ

ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್‌ ಸರಣಿಯನ್ನು ಭಾರತ ಗೆದ್ದುಬೀಗಿದೆ.. ಎರಡನೇ ಪಂದ್ಯದಲ್ಲಿ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಟೀಂ ಇಂಡಿಯಾ 2-0 ಅಂತರದಿಂದ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿದೆ.. ತವರಲ್ಲಾಗಲಿ, ಹೊರದೇಶದಲ್ಲಾಗಲಿ ಭಾರತ ಟೆಸ್ಟ್‌ ಮಾದರಿಯಲ್ಲಿ ತನ್ನ ಪರಾಕ್ರಮವನ್ನು ಮುಂದುವರಿಸಿದೆ.. ಇದೀಗ ಸರಣಿ ಗೆಲುವಿನ ಬಳಿಕ ಭಾರತ ವಿಶ್ವ ದಾಖಲೆ ನಿರ್ಮಿಸಿದೆ.. ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲೇ ಒಂದೇ ತಂಡದ ವಿರುದ್ಧ ಸತತ ಅತ್ಯಧಿಕ ಸರಣಿ ಗೆದ್ದ ತಂಡಗಳ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನಕ್ಕೆ ಏರಿದೆ.. ಇಲ್ಲೀವರೆಗೆ ಈ ರೆಕಾರ್ಡ್‌ ಸೌತ್‌ ಆಫ್ರಿಕಾ ಹೆಸರಲ್ಲಿತ್ತು.. 1998 ರಿಂದ 2024 ರವರೆಗೆ ಸೌತ್‌ ಆಫ್ರಿಕಾ ವೆಸ್ಟ್ ಇಂಡೀಸ್ ವಿರುದ್ಧ ಸತತ 10 ಟೆಸ್ಟ್‌ ಸರಣಿಗಳನ್ನು ಗೆದ್ದಿತ್ತು.. ಆದ್ರೆ ಇದೀಗ ಭಾರತ 2002ರಿಂದ ವೆಸ್ಟ್‌ ಇಂಡೀಸ್ ವಿರುದ್ಧ ಸತತ 10 ಟೆಸ್ಟ್ ಸರಣಿಗಳನ್ನು ಗೆದ್ದು ದಾಖಲೆ ನಿರ್ಮಿಸಿದೆ.. ಈ ಮೂಲಕ ಒಂದೇ ತಂಡದ ವಿರುದ್ಧ ಸತತ 10 ಟೆಸ್ಟ್‌ ಸರಣಿಗಳನ್ನು ಗೆದ್ದ 2ನೇ ತಂಡವಾಗಿದೆ.. ಮತ್ತೊಂದು ವಿಶೇಷ ಅಂದ್ರೆ 2013ರಿಂದ ವೆಸ್ಟ್‌ ಇಂಡೀಸ್‌ ಭಾರತದಲ್ಲಿ ಒಂದೇ ಒಂದು ಟೆಸ್ಟ್‌ ಪಂದ್ಯ ಗೆದ್ದಿಲ್ಲ.. ಈ ಬಾರಿಯೂ ಟೀಂ ಇಂಡಿಯಾ ಅದೇ ಪಾರುಪತ್ಯವನ್ನು ಮುಂದುವರಿಸಿದೆ.

Read Also : RSS ಶಿಭಿರದಲ್ಲಿ ಲೈಂಗಿಕ ಕಿರುಕುಳ..? : ತಪ್ಪಿತಸ್ಥರ ವಿರುದ್ಧ ಸಿಡಿದೆದ್ದ ಪ್ರಿಯಾಂಕಾ ಗಾಂಧಿ

Exit mobile version