Site icon BosstvKannada

ಕನ್ನಡಿಗರಿಗೆ Kamal Haasan ಕ್ಷಮೆಯಾಚಿಸದಿದ್ದರೆ ಸಿನಿಮಾ ಬ್ಯಾನ್‌ ಮಾಡಲು ಹೇಳುವೆ : ಸಚಿವ ಶಿವರಾಜ್ ತಂಗಡಗಿ

Kamal Haasan

ಕಾಲಿವುಡ್‌ನ ಖ್ಯಾತ ನಟ Kamal Haasan ವಿವಾದಿತ ಹೇಳಿಕೆಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಕಿಡಿಕಾರಿದ್ದಾರೆ. ಕನ್ನಡದ ಭಾಷೆಯ ಬಗ್ಗೆ ಹಗುರವಾಗಿ ಮಾತನಾಡಿರುವ ಬಹುಭಾಷ ನಟ ಕಮಲ್ ಹಾಸನ್ ಕೂಡಲೇ ರಾಜ್ಯದ ಜನರ ಕ್ಷಮೆಯಾಚಿಸಬೇಕು. ಇಲ್ಲದ್ದಿದ್ದರೆ ಅವರ ಚಿತ್ರಗಳಿಗೆ ರಾಜ್ಯದಲ್ಲಿ ನಿರ್ಬಂಧ ಹೇರುವಂತೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆಯಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಗುಡುಗಿದ್ದಾರೆ.

ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡದ ನೆಲ, ಜಲ, ಭಾಷೆ ವಿಚಾರದಲ್ಲಿ ಯಾವುದೇ ದೊಡ್ಡ ವ್ಯಕ್ತಿ ಇದ್ದರೂ ಅದನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಕಮಲ್ ಹಾಸನ್ ಅವರು ಕೂಡಲೇ ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.ಕನ್ನಡದ ಹಲವು ಚಿತ್ರಗಳಲ್ಲಿ ಕಮಲ್ ಹಾಸನ್ ಅವರು ನಟನೆ ಮಾಡಿದ್ದಾರೆ. ಓರ್ವ ಹಿರಿಯ ನಟ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ.

ಅವರ ಚಿತ್ರಗಳಿಗೆ ರಾಜ್ಯದಲ್ಲಿ ಬಿಡುಗಡೆಗೆ ನಿಷೇಧ ಹೇರುವಂತೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆಯಲಾವುದು ಎಂದು ತಿಳಿಸಿದರು. ನಟನೆ ಮಾಡಲು ಹಾಗೂ ಹಣ ಸಂಪಾದನೆ ಮಾಡಲು ನಮ್ಮ ಭಾಷೆ ಬೇಕು. ಇದೀಗ ಪುಕ್ಕಟೆ ಪ್ರಚಾರಕ್ಕೆ ಮಾತನಾಡುವುದೇ? ಈ ಹಿಂದೆ ಗಾಯಕ ಸೋನು ನಿಗಮ್ ಇದೇ ರೀತಿ ಕನ್ನಡಿಗರ ಬಗ್ಗೆ ಮಾತನಾಡಿ, ಬಳಿಕ ಎಚ್ಚೆತ್ತು ಕ್ಷಮೆಯಾಚಿಸಿದ್ದಾರೆ. ಇವರಿಗೆಲ್ಲ ಪಾಠ ಕಲಿಸುವ ಅಗತ್ಯವಿದೆ ಎಂದು ಕಿಡಿಕಾರಿದ್ದಾರೆ..

Also Read: Kamal Haasan ಹೇಳಿಕೆ ಬಗ್ಗೆ ಶಿವಣ್ಣನ ಫಸ್ಟ್‌ ರಿಯಾಕ್ಷನ್‌…! : ಯಾಕ್‌ ಹೀಗಂದ್ರು?

ಕನ್ನಡ ಶಾಲೆಗಳಿಗೆ ಅನುದಾನ ಕಡಿಮೆ ಕೊಟ್ಟು, ಉರ್ದು ಶಾಲೆಗಳಿಗೆ ಅನುದಾನ ಕೊಟ್ಟಿದ್ದಾರೆ ಎಂಬ ಬಿಜೆಪಿ ಟ್ವೀಟ್ ವಿಚಾರವಾಗಿ ಮಾತನಾಡಿದ ಅವರು, ಇದು ಸಂಪೂರ್ಣ ಸತ್ಯಕ್ಕೆ ದೂರ ವಾದ ವಿಚಾರ ನಮ್ಮ ಸರ್ಕಾರ ಹಾಗೂ ಸಿದ್ದರಾಮಯ್ಯ ಸಂಪೂರ್ಣ ಕನ್ನಡಪರ ಇದ್ದಾರೆ. ಇದು ಬಹಳ ಬಿಜೆಪಿಯ ಸುಳ್ಳಿನ ಸೃಷ್ಟಿ. ಈ ರೀತಿ ಸುಳ್ಳು ಹೇಳಿ ಜನರ ದಾರಿ ತಪ್ಪಿಸುವ ಕೆಲಸ ಮಾಡಬಾರದು. ನಿಜವಾಗಲೂ ಬಿಜೆಪಿಯವರು ಕನ್ನಡ ದ್ರೋಹಿಗಳು.. ವಿಷಬೀಜ ಬಿತ್ತುವ ಕೆಲಸ ಬಿಜೆಪಿಯವರು ಇವರು ಮಾಡ್ತಾ ಇದಾರೆ ಎಂದರು..


ಇನ್ನು ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಅವರನ್ನು ಸನ್ಮಾನ ಮಾಡುವ ಕೆಲಸವನ್ನು ಸರ್ಕಾರ ಮಾಡುತ್ತದೆ. ಎರಡನೇಯ ತಾರೀಖು ವಿಧಾನಸೌಧದಲ್ಲಿ ಭಾನು ಮುಶ್ತಾಕ್ ಅವರನ್ನು ಸರಕಾರದ ವತಿಯಿಂದ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಬ್ಯಾಂಕ್ವೆಟ್ ಹಾಲ್ ನಲ್ಲಿ ಸನ್ಮಾನ ಕಾರ್ಯಕ್ರಮ ಮಾಡಲು ತೀರ್ಮಾನ ಮಾಡಲಿದ್ದೇವೆ ಅಂತಾ ತಿಳಿಸಿದರು.

ಇನ್ನು ಅನಂತ್ ನಾಗ್ ಅವರ ಪದ್ಮವಿಭೂಷಣ ಪ್ರಶಸ್ತಿ ಬಗ್ಗೆ ಮಾತನಾಡಿ, ಅವರನ್ನ ವಿಚಾರಸಿ ಅದರ ಬಗ್ಗೆ ಡೇಟ್ ತಗೋತೇವೆ..‌ ಅವರನ್ನೂ ಗೌರವಿಸುತ್ತೇವೆ.. ಕಾಲೇಜು‌ ದಿನಗಳಿಂದಲೂ‌‌ ನಾನು ಅನಂತ್ ನಾಗ್ ಅವರ ಸಿನಿಮಾಗಳನ್ನ ನೋಡಿದೇವೆ. ಹಿರಿಯ‌ ನಟನನ್ನು ಅಭಿನಂದಿಸುತ್ತೇವೆ.. ಇದ್ರಲ್ಲಿ ಯಾವುದೇ ರಾಜಕೀಯ ಇಲ್ಲ ಅಂತಾ ಹೇಳಿದ್ರು..

Exit mobile version