ಬಿಗ್ಬಾಸ್ ವಿನ್ನರ್ ಹನುಮಂತ (Hanumantu)ಗೆದ್ದ ಹಣದಲ್ಲಿ ಮಾಡುವ ಕೆಲಸ ಇದೇ ಅಂತೆ…!
ಕನ್ನಡದ ಅತಿ ದೊಡ್ಡ ರಿಯಾಲಿಟಿ ಷೋ ಬಿಗ್ ಬಾಸ್ ಸೀಸನ್ 11 (Bigg boss season 11)ಮುಕ್ತಾಯಗೊಂಡಿದೆ. ಆರಂಭದಿಂದಲೂ ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಮಾಡುತ್ತಿದ್ದ ಬಿಗ್ ಬಾಸ್ ಸೀಸನ್ 11ರ (Bigg boss season 11) ಕಪ್ ಗೆಲ್ಲುವವರು ಯಾರು ಎಂಬ ಕುತೂಹಲ ತೀವ್ರವಾಗಿತ್ತು. ಇದೀಗ ಆ ಕುತೂಹಲ ತಣಿದಿದ್ದು ತೀವ್ರ ಸ್ಪರ್ಧೆಯಿದ್ದ ಆಟದಲ್ಲಿ ಹಳ್ಳಿ ಹೈದ ಹನುಮಂತ ಬಿಗ್ ಬಾಸ್ ಗೆದ್ದು ಇತಿಹಾಸ ಸೃಷ್ಠಿಸಿದ್ದಾರೆ.

ಈ ಮೊದಲು ಕೂಡ ಕೆಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದ ಹನುಮಂತ (Hanumantu)ತಮ್ಮ ಹಳ್ಳಿ ಸೊಗಡು ತುಂಬಿದ ಭಾಷೆ ಮತ್ತು ವಿಶಿಷ್ಟ ಮ್ಯಾನರಿಸಂ ಮೂಲಕ ಕನ್ನಡ ಪ್ರೇಕ್ಷಕರ ಮನ ಗೆದ್ದಿದ್ದರು. ಈ ಸಲ ಬಿಗ್ ಬಾಸ್ ಸೀಸನ್ 11ರಲ್ಲೂ ಹನುಮಂತ ಗೆಲ್ಲಬಹುದು ಎನ್ನುವ ಅನುಮಾನವನ್ನು ಹುಟ್ಟುಹಾಕಿದ್ದರು. ಅದೇ ರೀತಿ ಭಾನುವಾರ ನಡೆದ ಫಿನಾಲೆಯಲ್ಲಿ ಹನುಮಂತ ಬಿಗ್ ಬಾಸ್ ಸೀಸನ್ 11ರ ವಿಜಯಿಯಾಗಿ ಹೊರಹೊಮ್ಮಿದ್ದಾರೆ.
ಬಿಗ್ ಬಾಸ್ ಸೀಸನ್ 11ರ ಹೀರೊ ಹನುಮಂತ ಅವರಿಗೆ 50 ಲಕ್ಷ ರೂಪಾಯಿ ಬಹುಮಾನ ಬಂದಿದೆ. ಹಿಂದೆ ಅವರು ಭಾಗವಹಿಸಿದ್ದ ರಿಯಾಲಿಟಿ ಶೋಗಳಿಗೆ ಹೋಲಿಸಿಕೊಂಡರೆ ಹನುಮಂತ ಇಷ್ಟು ದೊಡ್ಡ ಮೊತ್ತದ ಬಹುಮಾನ ಗೆದ್ದಿರುವುದು ಇದೇ ಮೊದಲು. ಅವರೇ ಹೇಳಿಕೊಳ್ಳುವ ಪ್ರಕಾರ ಬಡಕುಟುಂಬದಲ್ಲಿ ಹುಟ್ಟಿದ ಅವರು ಇಷ್ಟು ದೊಡ್ಡ ಮೊತ್ತದ ದುಡ್ಡು ನೋಡುತ್ತಿರುವುದು ಕೂಡ ಇದೇ ಮೊದಲು.
ಬಿಗ್ ಬಾಸ್ ಸೀಸನ್ 11ರ ಕಪ್ ಗೆದ್ದು 50 ಲಕ್ಷ ರೂಪಾಯಿ ಬಹುಮಾನ ಸ್ವೀಕರಿಸಿರುವ ಹನುಮಂತ ಮೊದಲು ಮದುವೆ ಅಗಲಿದ್ದಾರಂತೆ. ಉಳಿದ ಹಣದಲ್ಲಿ ತನ್ನ ಸಮುದಾಯ ಮತ್ತು ಹುಟ್ಟೂರಿಗೆ ನೆರವಾಗುತ್ತೇನೆ ಎಂದು ಕೂಡ ಹೇಳಿದ್ದಾರೆ. ಬಡತನದಲ್ಲಿ ಬೆಂದು ನೊಂದು ಸಾಕಾಗಿದ್ದರೂ ತನಗೆ ಬಹುಮಾನವಾಗಿ ಬಂದ ಹಣದಲ್ಲಿ ಸಮುದಾಯಕ್ಕೆ ಮತ್ತು ಊರಿಗೆ ನೆರವಾಗುತ್ತೇನೆ ಎಂದಿರುವ ಹನುಮಂತ ಮಾತಿಗೆ ಮೆಚ್ಚುಗೆ ವ್ಯಕ್ತವಾಗಿದೆ.
ಒಟ್ಟಿನಲ್ಲಿ ಹನುಮಂತು ಅವರು ಬಿಗ್ಬಾಸ್ ಟ್ರೋಫಿ ಗೆದ್ದಿದ್ದಕ್ಕೆ ಇಡೀ ಕರ್ನಾಟಕದ ಬಿಗ್ಬಾಸ್ ಅಭಿಮಾನಿಗಳು, ವಿಶೇಷವಾಗಿ ಉತ್ತರ ಕರ್ನಾಟಕದ ಜನತೆ ತುಂಬಾ ಖುಷಿಯಾಗಿದ್ದಾರೆ.