BosstvKannada

ಐ ಲವ್ ಮುಹಮ್ಮದ್ ಪೋಸ್ಟರ್ ಜ್ವಾಲೆ : ಧರ್ಮಗುರು ಅರೆಸ್ಟ್‌, 24 ಜನರ ವಿರುದ್ಧ ಎಫ್‌ಐಆರ್

ದೇಶದಲ್ಲಿ ಐ ಲವ್ ಮುಹಮ್ಮದ್ ಎಂಬ ಪೋಸ್ಟರ್‌ಗಳ ವಿಚಾರ ಹೆಚ್ಚು ಸದ್ದು ಮಾಡುತ್ತಿದೆ. ಸೆಪ್ಟೆಂಬರ್ 4ರಂದು ಕಾನ್ಪುರದ ರಾವತ್‌ಪುರದಲ್ಲಿ ನಡೆದ ಈದ್-ಎ-ಮಿಲಾದ್-ಉನ್-ನಬಿ ಮೆರವಣಿಗೆಯಲ್ಲಿ ಐ ಲವ್ ಮುಹಮ್ಮದ್ ಎಂಬ ಪೋಸ್ಟರ್‌ಗಳನ್ನ ಹಿಡಿದು ಮೆರವಣಿಗೆ ಮಾಡಲಾಯಿತು. ಸೆಪ್ಟೆಂಬರ್ 4 ರಂದೆ ಪೊಲೀಸರು ‘ಐ ಲವ್ ಮುಹಮ್ಮದ್’ ಪೋಸ್ಟರ್ ಹೊಂದಿರುವ ಟೆಂಟ್ ಅನ್ನು ತೆಗೆದುಹಾಕಿದ್ದರು. ಮೆರವಣಿಗೆಯಲ್ಲಿ ಐ ಲವ್ ಮುಹಮ್ಮದ್ ಎಂಬ ಬ್ಯಾನರ್ ಪ್ರದರ್ಶಿಸಿದ್ದನ್ನ ಕೆಲ ಹಿಂದೂ ಸಂಘಟನೆಗಳು ಟೀಕಿಸಿದ್ವು.‌ ಇದಾದ ನಂತರ ಲಖನೌ, ಬರೇಲಿ, ಕೌಶಂಬಿ, ಉನ್ನಾವೊ, ಕಾಶಿಪುರ ಮತ್ತು ಹೈದರಾಬಾದ್ ಸೇರಿದಂತೆ ಅನೇಕ ನಗರಗಳಲ್ಲಿ ಇದೇ ರೀತಿಯ ಪ್ರತಿಭಟನೆಗಳು ತೀವ್ರಗೊಂಡಿವೆ. ಇದರ ನಡುವೆ ಉತ್ತರ ಪ್ರದೇಶದ ಬರೇಲಿಯಲ್ಲಿ ಪರಿಸ್ಥಿತಿ ಕೈಮಿರಿದ್ದು ಕಲ್ಲು ತೂರಾಟ ನಡೆದಿದೆ.

ಬರೇಲಿಯಲ್ಲಿ ಇಸ್ಲಾಮಿಕ್ ಧರ್ಮಗುರು ಮೌಲಾನಾ ತೌಕೀರ್ ರಜಾ ʼಐ ಲವ್ ಮುಹಮ್ಮದ್ʼ ಪೋಸ್ಟರ್‌ಗಳ ಬೆಂಬಲವಾಗಿ ಧರಣಿ ನಡೆಸುವುದಾಗಿ ಘೋಷಿಸಿದ್ದು ಇದಕ್ಕೆ ಜಿಲ್ಲಾಡಳಿತದಿಂದ ಅನುಮತಿ ದೊರೆಯದ ಕಾರಣ ಪ್ರತಿಭಟನೆ ತೀವ್ರ ಸ್ವರೂಪ ಪಡೆಯಿತು. ಮಸೀದಯಲ್ಲಿ ಪ್ರಾರ್ಥನೆಯ ನಂತರ ಮಸೀದಿಗಳ ಬಳಿ ಜನಸಮೂಹ ಸೇರಿ ಐ ಲವ್ ಮುಹಮ್ಮದ್ ಎಂಬ ಘೋಷಣೆ ಜೊತೆಗೆ ಕೆಲವರು ಆಕ್ಷೇಪಾರ್ಹ ಘೋಷಣೆಗಳನ್ನು ಕೂಗಲಾರಂಭಿಸಿದರು. ಈ ಪ್ರತಿಭಟನೆಯನ್ನ ತಡೆಯಲು ಬಂದ ಪೊಲೀಸರ ಮೇಲೆಯೇ ಕೆಲವರು ಕಲ್ಲು ತೂರಿದ ಆರೋಪ ಹಿನ್ನೆಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದು, ಗಲಾಟೆಗೆ ಪ್ರಚೋದನೆ ಮತ್ತು ಪ್ರತಿಭಟನೆ ಆರೋಪದಡಿಯಲ್ಲಿ ಮೌಲಾನಾ ತೌಕೀರ್ ರಜಾ ಸೇರಿದಂತೆ 24 ಜನರ ವಿರುದ್ಧ ಎಫ್​ಐಆರ್ ದಾಖಲಿಸಿದ್ದು, ಧರ್ಮಗುರುನನ್ನು ಅರೆಸ್ಟ್‌ ಮಾಡಲಾಗಿದೆ. ಪೊಲೀಸರ ಈ ಕ್ರಮಕ್ಕೆ ಕಾನ್ಪುರ ಮುಸ್ಲಿಮರು ಆಕ್ರೋಶ ವ್ಯಕ್ತಪಡಿಸಿ ಧರಣಿ ಮಾಡುತ್ತಿದ್ದು, ಜೊತೆಯಲ್ಲಿ ಉತ್ತರ ಪ್ರದೇಶ, ಗುಜರಾತ್ ಸೇರಿ ಹಲವು ರಾಜ್ಯಗಳಲ್ಲಿ ಐ ಲವ್ ಮೊಹಮ್ಮದ್ ಬ್ಯಾನರ್​​ಗಳನ್ನು ಹಿಡಿದು ರ್ಯಾಲಿಗಳನ್ನು ಮಾಡಲಾಗುತ್ತಿದೆ. ʼಐ ಲವ್ ಮೊಹಮ್ಮದ್ʼ ಪೋಸ್ಟರ್‌ಗೆ ಪ್ರತಿಯಾಗಿ ʼಐ ಲವ್ ಮಹದೇವ್ʼ ಎಂದು ಹಿಂದೂ ಪರ ಕಾರ್ಯಕರ್ತರು ಅಭಿಯಾನ ಆರಂಭಿಸಿದ್ದಾರೆ. ಇದೇ ವಿಚಾರವಾಗಿ ಗುಜರಾತ್‌ನ ಗಾಂಧಿನಗರ ಜಿಲ್ಲೆಯ ದಹೇಗಾಮ್‌ನ ಬಹಿಯಾಲ್ ಗ್ರಾಮದಲ್ಲಿ ಗಾರ್ಭಾ ಆಚರಣೆ ವೇಳೆ 2 ಸಮುದಾಯಗಳ ನಡುವೆ ಘರ್ಷಣೆ ಭುಗಿಲೆದ್ದಿದೆ ಅಂತಾ ವರದಿಯಾಗಿದೆ..

Read Also : ದೊಡ್ಮನೆಗೆ ಎಂಟ್ರಿ ಕೊಡ್ತಾರಾ ಈ ಖದರ್‌ ಖಳನಾಯಕ ..? : ಬಿಗ್‌ಬಾಸ್‌ ಪ್ರೋಮೊದಲ್ಲಿ ರಿವೀಲ್!‌

Exit mobile version