Site icon BosstvKannada

ನಾಳೆಯಿಂದ Bengaluru ಭಾರೀ ಮಳೆ!

Bengaluru : ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ಜೋರಾಗಿದೆ. ಹಲವು ಭಾಗಗಳಲ್ಲಿ ಮಳೆಯಾಗ್ತಿದೆ. ವಾಡಿಕೆಗೂ ಮುನ್ನವೇ ರಾಜ್ಯಕ್ಕೆ ಮುಂಗಾರು ಪ್ರವೇಶ ಕೂಡ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂಗಾರು ಪೂರ್ವ ಮಳೆಯ ಅಬ್ಬರ ನಾಳೆಯಿಂದ ಮತ್ತಷ್ಟು ಬಿರುಸಾಗಲಿದೆ. ಕರ್ನಾಟದ 23 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲೂ ಮೇ 17ರಿಂದ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರ್ನಾಟಕದ 23 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ರಾಯಚೂರು, ಯಾದಗಿರಿ, ಬೆಂಗಳೂರು ಗ್ರಾಮಾಂತರ, Bengaluru ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ತುಮಕೂರು ಮತ್ತು ವಿಜಯಪುರ ಜಿಲ್ಲೆಗಳಿಗೆ ಭಾರೀ ಮಳೆಯ ಅಲರ್ಟ್​ ನೀಡಲಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.

Also Read: RCB ಫ್ಯಾನ್ಸ್‌ಗೆ ಗುಡ್​ನ್ಯೂಸ್, ತಂಡ ಸೇರಿದ ದಾಂಡಿಗರು!

ಮುಂಗಾರು ಪೂರ್ವ ಮಳೆಯ ಮಧ್ಯೆ, ಈ ಬಾರಿ ಮುಂಗಾರು ಬೇಗನೇ ಶುರುವಾಗಲಿದೆ. ಮುಂಗಾರು 5 ದಿನ ಮುಂಚಿತವಾಗಿ ಆರಂಭವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮೇ 27ರಂದೇ ಕೇರಳಕ್ಕೆ ಮಾನ್ಸೂನ್ ಪ್ರವೇಶಿಸುವ ಸಾಧ್ಯತೆ ಇದೆ. ಪ್ರತಿ ಬಾರಿಯೂ ಜೂನ್ 1ರ ನಂತರ ಆರಂಭವಾಗುತ್ತಿದ್ದ ಮುಂಗಾರು, ಈ ಬಾರಿ 5 ದಿನ ಮುಂಚಿತವಾಗಿ ಆರಂಭವಾಗಲಿದೆ.

Exit mobile version