Site icon BosstvKannada

RCB ಫ್ಯಾನ್ಸ್‌ಗೆ ಗುಡ್​ನ್ಯೂಸ್, ತಂಡ ಸೇರಿದ ದಾಂಡಿಗರು!

RCB: 2025ರ ಐಪಿಎಲ್ ಸೀಸನ್- 18 ಪುನರಾರಂಭವಾಗುತ್ತಿದ್ದು ಅಭಿಮಾನಿಗಳಲ್ಲಿ ಖುಷಿ ತಂದಿದೆ. ವಿದೇಶಕ್ಕೆ ತೆರಳಿದಂತ ಕೆಲ ಆಟಗಾರರು ಮತ್ತೆ ತಮ್ಮ ತಮ್ಮ ತಂಡಗಳನ್ನು ಸೇರಿಕೊಳ್ಳುತ್ತಿದ್ದಾರೆ. ಇದರ ಬೆನ್ನಲ್ಲೇ ಆರ್​ಸಿಬಿಗೂ ಗುಡ್​ನ್ಯೂಸ್​ ಸಿಕ್ಕಿದ್ದು ತಂಡಕ್ಕೆ ವಿದೇಶದ ಸ್ಟಾರ್ ಆಟಗಾರರು ಹಿಂದಿರುಗುತ್ತಿದ್ದಾರೆ.

RCB ಭರವಸೆ ಬೌಲರ್ ಎಂದರೆ ಅದು ಜೋಶ್ ಹ್ಯಾಜಲ್ವುಡ್. ಈ ಸಲದ ಆರ್​ಸಿಬಿ ತಂಡದಲ್ಲಿ ​ಜೋಶ್ ಹ್ಯಾಜಲ್ವುಡ್ ಅವರ ಬೌಲಿಂಗ್ ನಿರ್ಣಾಯಕ ಪಾತ್ರ ವಹಿಸಿತ್ತು. ಹೇಗೆಂದರೆ ಜೋಶ್ ಹ್ಯಾಜಲ್ವುಡ್ ಆಡಿದ 10 ಪಂದ್ಯಗಳಿಂದ 18 ವಿಕೆಟ್​ಗಳನ್ನು ಉರುಳಿಸಿ ಪರ್ಪಲ್ ಕ್ಯಾಪ್​ ಅನ್ನು ಈಗಾಗಲೇ ಧರಿಸಿದ್ದರು. ಭಾರತ ಹಾಗೂ ಪಾಕಿಸ್ತಾನದ ನಡುವೆ ಘರ್ಷಣೆಯ ನಂತರ ಐಪಿಎಲ್​ ಅನ್ನು ಸ್ಥಗಿತ ಮಾಡಲಾಗಿತ್ತು. ಇದಾದ ಮೇಲೆ ವಿದೇಶಿ ಆಟಗಾರರು ತವರಿಗೆ ಮರಳಿದ್ದರು. ಇದರಲ್ಲಿ ಹ್ಯಾಜಲ್ವುಡ್ ಕೂಡ ಒಬ್ಬರು. ಆಸ್ಟ್ರೇಲಿಯಾಗೆ ಹೋಗಿದ್ದ ಹ್ಯಾಜಲ್ವುಡ್ ಇದೀಗ ಆರ್​ಸಿಬಿ ತಂಡದಲ್ಲಿ ಆಡಲು ವಾಪಸ್ ಆಗಮಿಸುತ್ತಿದ್ದಾರೆ ಎಂದು ಹೇಳಲಾಗ್ತಿದೆ.

ಮೇ 17 ರಂದು ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬಲಿಷ್ಠ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಎದುರಿಸಲಿದೆ. ಈ ಮಹತ್ವದ ಪಂದ್ಯಕ್ಕೆ ಜೋಶ್ ಹ್ಯಾಜಲ್ವುಡ್ ಹಾಜರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ತವರಿಗೆ ತೆರಳಿದ್ದ ವೆಸ್ಟ್ ಇಂಡೀಸ್​ನ ಸ್ಪೋಟಕ ದಾಂಡಿಗ ರೊಮಾರಿಯೊ ಶೆಫರ್ಡ್​ ಭಾರತಕ್ಕೆ ಹಿಂತಿರುಗಿದ್ದಾರೆ. ಹೀಗಾಗಿ ಆರ್​ಸಿಬಿ ತಂಡದ ಮುಂದಿನ ಪಂದ್ಯದಲ್ಲಿ ಕೆರಿಬಿಯನ್ ದೈತ್ಯ ಕಾಣಿಸಿಕೊಳ್ಳುವುದು ಖಚಿತ ಎನ್ನಬಹುದು.

Also Read: “ನನ್ನ ಮಗಳು ದೊಡ್ಡ ಕಳ್ಳಿ. ನನ್ನನ್ನು ಮದುವೆಗೆ ಆಹ್ವಾನಿಸಿಲ್ಲ” : Chaitra Kundapur ತಂದೆ ಗಂಭೀರ ಆರೋಪ

ಅದರಲ್ಲೂ ಐಪಿಎಲ್‌ನಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಬಲಿಷ್ಠ ತಂಡ RCB ಮೂವರು ವಿದೇಶಿ ಆಟಗಾರರು ಮರಳಿದ್ದಾರೆ. ಸ್ಪೋಟಕ ಆಟಗಾರರಾಗಿರುವ ಫಿಲ್ ಸಾಲ್ಟ್, ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಜೇಕಬ್ ಆರ್‌ಸಿಬಿ ಹಾಗೂ ಕೆಕೆಆರ್ ಪಂದ್ಯಕ್ಕೂ ಮುನ್ನ ಬೆಂಗಳೂರಿಗೆ ಆಗಮಿಸಿದ್ದಾರೆ. ಇದರಿಂದ ಬೆಂಗಳೂರು ತಂಡಕ್ಕೆ ಆನೆಬಲ ಬಂದಂತಾಗಿದೆ.

Exit mobile version