ಗಣೇಶ ಹಬ್ಬ ಅಂದ್ರೆ ಹಿಂದೂಗಳಿಗೆ ಸಂಭ್ರಮ, ಸಡಗರ.. ಇದರ ಮದ್ಯೆ ಈಗ ಗಣೇಶ ಹಬ್ಬದ ಭಜನಾ ಮಂಡಳಿಗಳಿಗೆ ಗುಡ್‌ನ್ಯೂಸ್ ಕೊಟ್ಟಿದೆ. ಹಬ್ಬದ ಪ್ರಯುಕ್ತ 25,000 ಪ್ರೋತ್ಸಾಹ ಧನ ಪಡೆಯುವ ಸುವರ್ಣಾವಕಾಶ ಒದಗಿ ಬಂದಿದೆ. ಗಣೇಶ ಹಬ್ಬ ಬಹಳ ಫೇಮಸ್ ಎಂಬುದು ಎಲ್ಲರಿಗೂ ಗೊತ್ತು. ಇಲ್ಲಿ ನಡೆಯುವ ವಿಜೃಂಭಣೆಯನ್ನು ಕಣ್ಣಾರೆ ಕಂಡು ಆನಂದಿಸಲು ವಿದೇಶಗಳಿಂದಲೂ ಜನರು ಇಲ್ಲಿಗೆ ಬರ್ತಾರೆ.
ಈ ಎಲ್ಲಾ ಅಂಶಗಳನ್ನು ಪರಿಗಣಿಸಿರುವ ಸರ್ಕಾರ, ಭಜನಾ ಮಂಡಳಿಗಳಿಗೆ ತಲಾ 25 ಸಾವಿರ ಅನುದಾನ ನೀಡಲು ಸಜ್ಜಾಗಿದೆ. ಈಗಾಗ್ಲೇ ಮಹಾರಾಷ್ಟ್ರದಲ್ಲಿ ಈ ಯೋಜನೆ ಘೋಷಣೆಯಾಗಿದ್ದು, ಅಲ್ಲಿರುವ 1800 ಭಜನಾ ಮಂಡಳಿಗಳಿಗೆ 25 ಸಾವಿರ ರೂಪಾಯಿ ಸಿಗಲಿದೆ. ಗಣೇಶ ಹಬ್ಬವನ್ನ ರಾಜ್ಯ ಹಬ್ಬ ಅಂತಲೂ ಮಹಾರಾಷ್ಟ್ರ ಸರ್ಕಾರ ಘೋಷಿಸಿದೆ.
ಅಲ್ಲಿನ ಸಾಂಸ್ಕೃತಿಕ ಇಲಾಖೆ ಸಚಿವರಾದ ಆಶಿಶ್ ಶೆಲಾರ್ ಘೋಷಣೆ ಮಾಡಿದ್ದು, ಗಣೇಶ ಹಬ್ಬಕ್ಕೆ ಬೇಕಾದ ಉಪಕರಣಗಳನ್ನು ಖರೀದಿಸಲು ಅನುದಾನ ನೀಡೋದಾಗಿ ಘೋಷಣೆ ಮಾಡಿದ್ದಾರೆ. ಇದಕ್ಕಾಗಿ ಆಗಸ್ಟ್ 23ರಿಂದ ಸೆಪ್ಟೆಂಬರ್ 6ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ..
Read Also : ಆಸ್ತಿ ಖರೀದಿದಾರರಿಗೆ ಶಾಕ್.. ನಾಳೆಯಿಂದ ನೋಂದಣಿ ಶುಲ್ಕ ದುಪ್ಪಟ್ಟು!

