ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಸರ್ಕಾರ ಮತ್ತೊಂದು ಆಘಾತ ನೀಡಿದೆ. ಪರಿಷ್ಕೃತ ಆಸ್ತಿ ನೋಂದಣಿ ಶುಲ್ಕ ನಾಳೆಯಿಂದ ಅಂದರೆ ಆಗಸ್ಟ್ 31 ರಿಂದ ಅನ್ವಯವಾಗುವಂತೆ ಜಾರಿಗೆ ಬರಲಿದೆ. ಈಗಾಗ್ಲೇ ಹಾಲು, ಬಸ್, ವಿದ್ಯುತ್, ನೀರು ಮತ್ತು ಮೆಟ್ರೋ ದರಗಳ ಏರಿಕೆಯ ಬೆನ್ನಲ್ಲೇ, ಕಂದಾಯ ಇಲಾಖೆ ಈಗ ಆಸ್ತಿ ನೋಂದಣಿ ಶುಲ್ಕವನ್ನು ಸಂಗ್ರಹಿಸಲು ಆದೇಶ ಹೊರಡಿಸಿದ್ದು, ಇದು ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಆಸ್ತಿ ನೋಂದಣಿ ಶುಲ್ಕವನ್ನ ಶೇಕಡಾ 1 ರಿಂದ ಶೇ.2ರಷ್ಟು ಏರಿಕೆ ಮಾಡುವಂತೆ ಆದೇಶ ಹೊರಡಿಸಲಾಗಿದ್ದು, ಆಗಸ್ಟ್ 31 ರಿಂದ ಈ ನೀಯಮ ಜಾರಿಯಾಗಲಿದೆ. ಈ ಮೊದಲು ಆಸ್ತಿಯ ನೋಂದಣಿ ಶುಲ್ಕ 6.6% ಇತ್ತು. ಆದರೆ ಪರಿಷ್ಕೃತ ನಿಯಮದ ಪ್ರಕಾರ ಇನ್ನು ಮುಂದೆ 7.6% ಆಗಿರುತ್ತದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಆದಾಯದಲ್ಲಿ ಭಾರಿ ಕುಸಿತ ಕಂಡುಬಂದ ಕಾರಣ ಈ ಹೊಸ ಕ್ರಮ ಜಾರಿಮಾಡಲಾಗಿದೆ.
Read Also : ಪ್ರಧಾನಿ ಮೋದಿ ಜಪಾನ್ ಪ್ರವಾಸ, ಟೋಕಿಯೋ ತಲುಪಿದ ʼನಮೋʼಗೆ ಅದ್ದೂರಿ ಸ್ವಾಗತ

