Site icon BosstvKannada

UPSC ಆಕಾಂಕ್ಷಿಗಳಿಗೆ ಗುಡ್‌ನ್ಯೂಸ್‌ : ಅಧಿಸೂಚನೆ ಹೊರಡಿಸಿದ ಆಯೋಗ

UPSC ವೇಳಾಪಟ್ಟಿಗಾಗಿ ಬಕಪಕ್ಷಿಗಳಂತೆ ಕಾದು ಕುಳಿತ ಸ್ಪರ್ಧಾರ್ಥಿಗಳೇ ಸದ್ಯ ರಿಲೀಫ್‌ ಆಗಿ. IAS ಆಗಲೇಬೇಕೆಂದು ಕಣ್ಣಲ್ಲಿ ಎಣ್ಣೆ ಬಿಟ್‌ಕೊಂಡೋ ಓದೋ Aspirants ಗಳಿಗೆ UPSC ಗುಡ್‌ನ್ಯೂಸ್‌ ನೀಡಿದೆ. ಕೇಂದ್ರ ಲೋಕಸೇವಾ ಆಯೋಗ 2026 ರ ಪರೀಕ್ಷಾ ವೇಳಾಪಟ್ಟಿಯನ್ನ ಬಿಡುಗಡೆ ಮಾಡಿದೆ. ನಾಗರಿಕ ಸೇವೆಗಳ ಪೂರ್ವಭಾವಿ (ಪ್ರಿಲಿಮ್ಸ್‌) ಪರೀಕ್ಷೇಯನ್ನ ಮೇ 24 ರಂದು ನಿಗದಿಪಡಿಸಲಾಗಿದೆ. ಮುಖ್ಯ (ಮೇನ್ಸ್‌ ) ಪರೀಕ್ಷೆ ಆಗಸ್ಟ್ 21, 2026 ರಂದು ನಡೆಯಲಿದೆ ಎಂದು ಯುಪಿಎಸ್‌ಸಿ ಆಯೋಗ ಆದೇಶ ಹೊರಡಿಸಿದೆ.

Also Read: Gold rate today ; ಗೋಲ್ಡ್‌ ಪ್ರಿಯರಿಗೆ ಗುಡ್‌ನ್ಯೂಸ್‌; ಚಿನ್ನ, ಬೆಳ್ಳಿ ದರದಲ್ಲಿ ಭಾರೀ ಇಳಿಕೆ..!

ಇನ್ನು UPSC 2026ರ ಅಧಿಸೂಚನೆಯನ್ನು ಜನವರಿ 14, 2026 ರಂದು ಹೊರಡಿಸಲಾಗುವುದು. ಫೆಬ್ರವರಿ 3 ರವರೆಗೆ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ.. ಅಷ್ಟೇ ಅಲ್ಲಾ ತುರ್ತು ಸಂದರ್ಭ ಎದುರಾದಲ್ಲಿ ಅಧಿಸೂಚನೆಯ ಅವಧಿಯನ್ನು ಬದಲಾಯಿಸಬಹುದು ಎಂದು ಯುಪಿಎಸ್‌ಸಿ ಹೇಳಿದೆ. ಇನ್ನು ಯುಪಿಎಸ್‌ಸಿ ವೇಳಾಪಟ್ಟಿ ಯಾವಾಗಪ್ಪಾ ರೀಲಿಸ್‌ ಆಗುತ್ತೆ ಅಂತಾ ಕಾಯ್ತಿರೋ ಆಕಾಂಕ್ಷಿಗಳು ಸದ್ಯ ಈ ವೇಳಾಪಟ್ಟಿಯಿಂದ ನಿರಾಳರಾಗಿದ್ದು, ಓದೋ ಕೆಲಸ ದುಪ್ಪಟ್ಟಾಗಿದೆ.

Exit mobile version