Gold rate today: ಚಿನ್ನವನ್ನು ‘ಅನಿಶ್ಚಿತ ಕಾಲದ ದೇವರು’ ಎಂದು ಪೂಜಿಸಲಾಗುತ್ತದೆ, ಇದು ಆರ್ಥಿಕ ಸಂಕಷ್ಟ ಮತ್ತು ಕೇಂದ್ರ ಬ್ಯಾಂಕುಗಳಲ್ಲಿ ಹೆಚ್ಚಿನ ಸಾಲದ ಮಟ್ಟಗಳ ಸಮಯದಲ್ಲಿ ಸುರಕ್ಷಿತ ಆಶ್ರಯವನ್ನು ಒದಗಿಸುತ್ತದೆ.
ಇತ್ತೀಚಿನ ಘಟನೆಗಳ ಬದಲಾವಣೆಯು ವಿಶ್ವದ ಮಂಕಾದ ಆರ್ಥಿಕ ದೃಷ್ಟಿಕೋನವನ್ನು ಸ್ಥಗಿತಗೊಳಿಸಿದಂತೆ ಕಾಣುತ್ತಿದೆ. ಟ್ರಂಪ್ ಆಡಳಿತವು ಇತರ ದೇಶಗಳೊಂದಿಗೆ ಆಕ್ರಮಣಕಾರಿಯಾಗಿ ಮಾತುಕತೆ ನಡೆಸುತ್ತಿದೆ ಮತ್ತು ಮಾರುಕಟ್ಟೆಗಳು ಶೀಘ್ರದಲ್ಲೇ ಕಡಿಮೆ ಸುಂಕ ರಚನೆಯನ್ನು ನಿರೀಕ್ಷಿಸುತ್ತಿವೆ. ಚೀನಾವನ್ನು ಹೊರತುಪಡಿಸಿ ಇತರ ವ್ಯಾಪಾರ ಪಾಲುದಾರರೊಂದಿಗೆ ಸಂಭಾವ್ಯ ಸಮನ್ವಯದ ಸಲಹೆಗಳೊಂದಿಗೆ ಟ್ರಂಪ್ ಅವರ ಸ್ವರವು ಗಣನೀಯವಾಗಿ ಬದಲಾಗಿದೆ.
ಚೀನಾ ಮತ್ತು ಅಮೆರಿಕಾ ನಡುವಿನ ಟ್ಯಾರಿಫ್ ಯುದ್ಧ ಜಗತ್ತಿನಾದ್ಯಂತ ಭಾರೀ ಹೊಡೆತ ಕೊಟ್ಟಿತ್ತು.. ಇದ್ರಿಂದಾಗಿ ಚಿನ್ನ, ಬೆಳ್ಳಿ ಮುಂತಾದವುಗಳ ಬೆಲೆ ಏರಿಕೆಯೂ ಆಗಿತ್ತು. ಆದ್ರೆ ಈ ಭೀಕರ ಟ್ರೇಡ್ವಾರ್ಗೆ ಇದೀಗ ತಾತ್ಕಾಲಿಕ ವಿರಾಮ ಸಿಕ್ಕಿದೆ.
ಈ ಎರಡು ದೇಶಗಳು 90 ದಿನಗಳ ಕಾಲ ಯಾವುದೇ ಟ್ಯಾರಿಫ್ ಏರಿಕೆ ಮಾಡದಿರುವ ನಿರ್ಣಯಕ್ಕೆ ಬಂದಿರುವ ಕಾರಣ ಈ ನಿರ್ಧಾರ ಚಿನ್ನ ಹಾಗೂ ಬೆಳ್ಳಿ ಬೆಲೆ ಮೇಲೂ ಉತ್ತಮ ಪರಿಣಾಮ ಬೀರಿದೆ. ಇಷ್ಟು ದಿನ ಚಿನ್ನದ ಬೆಲೆ ಏರಿಳಿತವಾಗ್ತಿತ್ತು. ಆದ್ರೆ ಈಗ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 195 ರೂಗಳಷ್ಟು ಕುಸಿತವಾಗಿದೆ. 8,805 ರೂ ಇದ್ದ ಆಭರಣ ಚಿನ್ನದ ಬೆಲೆ 8,610 ರೂಗೆ ಇಳಿದಿದೆ. ಇದು ಗ್ರಾಹಕರಲ್ಲಿ ಸಂತಸ ಮೂಡಿಸಿದೆ.
Also Read: ಮುಸ್ಲಿಂ ಪುರಷರು ಬಹುಪತ್ನಿತ್ವ ಪದ್ದತಿಯನ್ನು ಪಾಲಿಸಬಹುದು ; Allahabad ಹೈಕೋರ್ಟ್‌ನಿಂದ ತೀರ್ಪು..!
22 ಕ್ಯಾರಟ್‌ನ 10 ಗ್ರಾಂ ಚಿನ್ನದ ದರ 86,100 ರೂಪಾಯಿಗೆ ಇಳಿದಿದೆ.. ಇನ್ನೂ 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆ 9,393 ರೂಪಾಯಿಗೆ ಇಳಿದಿದ್ರೆ.. 10 ಗ್ರಾಂ ಚಿನ್ನದ ಬೆಲೆ 93,930 ರೂಪಾಯಿಗೆ ಇಳಿದಿದೆ.. ಇನ್ನೂ 18 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆ 7,045 ರೂಪಾಯಿಗೆ ಇಳಿದಿದ್ದು, ಗೋಲ್ಡ್ ಪ್ರಿಯರು ಕೊಂಚ ನಿರಾಳರಾಗಿದ್ದಾರೆ.

