Site icon BosstvKannada

Bengaluru ಇನ್ಮುಂದೆ GBA ಆರ್ಭಟ, ಏನೆಲ್ಲಾ ಬದಲಾವಣೆ?

ಬೃಹತ್ Bengaluru ಇನ್ಮುಂದೆ GBA ಆರ್ಭಟ, ಏನೆಲ್ಲಾ ಬದಲಾವಣೆ?ಮಹಾನಗರ ಪಾಲಿಕೆ ನಾಳೆಯಿಂದ ಅಂದ್ರೆ ಮೇ.15ರಿಂದ ತನ್ನ ಅಸ್ತಿತ್ವವನ್ನ ಕಳೆದುಕೊಳ್ಳಲಿದೆ.. ಇಷ್ಟು ವರ್ಷಗಳ ಕಾಲ ಆರ್ಭಟಿಸಿದ್ದ ಬಿಬಿಎಂಪಿ ಹೆಸರು ಇನ್ಮುಂದೆ ಇತಿಹಾಸ ಪುಟ ಸೇರಲಿದೆ.. ಬಿಬಿಎಂಪಿ ಬದಲಿಗೆ ‘ಗ್ರೇಟರ್‌ ಬೆಂಗಳೂರು ಪ್ರದೇಶ’ ಅಸ್ಥಿತ್ವಕ್ಕೆ ಬರಲಿದೆ.. ಇದರ ಮೂಲಕ ರಾಜಧಾನಿ ಬೆಂಗಳೂರಿನ ಆಡಳಿತದ ಚಿತ್ರಣವೇ ಬದಲಾಗಲಿದೆ. ಜೊತೆಗೆ ಬೆಂಗಳೂರಿನ ಪ್ರಾದೇಶಿಕತೆ-ಭೌಗೋಳಿಕತೆಯ ವ್ಯಾಪ್ತಿ-ವಿಸ್ತೀರ್ಣ ಕೂಡ ಹೆಚ್ಚಾಗಲಿದೆ.

ಈಗಾಗಲೇ ರಾಜ್ಯಪಾಲರು ಅಂಕಿತ ಹಾಕಿರುವ ಕಾರಣಕ್ಕೆ ರಾಜ್ಯ ಸರ್ಕಾರ ಗ್ರೇಟರ್ ಬೆಂಗಳೂರು ಪ್ರದೇಶವನ್ನ ಅನುಷ್ಠಾನಕ್ಕೆ ತರುತ್ತಿದೆ. ಬಿಬಿಎಂಪಿಯಲ್ಲಿ ಕಳೆದ ನಾಲ್ಕೂವರೇ ವರ್ಷದಿಂದ ಚುನಾವಣೆ ಆಗದೇ ಜನಪ್ರತಿನಿಧಿಗಳು ಇಲ್ಲದೇ ಅಧಿಕಾರಿಗಳ ನೇತೃತ್ವದಲ್ಲಿ ಅಡಳಿತ ನಡೀತಿತ್ತು..

ಮೇ.15ರಿಂದ ಬೆಂಗಳೂರು ಆಡಳಿತ ಕಾಯ್ದೆ-2024 ಜಾರಿಯಾಗಲಿದ್ದು, ಈಗಿದ್ದ ಬಿಬಿಎಂಪಿಯನ್ನು ಮೂರು ಪಾಲಿಕೆಗಳನ್ನಾಗಿ ಮಾಡುವ ಸಾಧ್ಯತೆಗಳಿವೆ. ಇನ್ನೂ ಆಡಳಿತಾಧಿಕಾರಿ ಅಡಿಯಲ್ಲೇ ಮೂರು ಪಾಲಿಕೆಗಳ ಅಡಳಿತ ನಿರ್ವಹಣೆಯಾಗಲಿದೆ. ಸಿಎಂ ಸಿದ್ದರಾಮಯ್ಯ ಜಿಬಿಎ ಅಧ್ಯಕ್ಷರಾಗಲಿದ್ದು, ಡಿಸಿಎಂ ಡಿಕೆಶಿ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

Also Read: ವಿದೇಶಾಂಗ ಸಚಿವರಿಗೆ ಬುಲೆಟ್‌ ಫ್ರೂಪ್‌ car ಜತೆಗೆ 33 ಕಮಾಂಡೋ ಪಡೆ!

ಬೆಂಗಳೂರು ಕೇಂದ್ರ ನಗರ ಪಾಲಿಕೆ, ಬೆಂಗಳೂರು ಉತ್ತರ ನಗರ ಪಾಲಿಕೆ ಹಾಗೂ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಎಂಬುದಾಗಿ ಬಿಬಿಎಂಪಿಯನ್ನು ಮೂರು ಭಾಗಗಳನ್ನಾಗಿ ಮಾಡಲು ಸರ್ಕಾರ ತೀರ್ಮಾನಿಸಿದೆ ಅಂತ ಹೇಳಲಾಗಿದೆ.. ಹೀಗಾಗಿ ಎಲ್ಲಾ ಪಾಲಿಕೆಗಳ ಹೆಸರು ಬೆಂಗಳೂರು ಎನ್ನುವುದರಿಂದಲೇ ಆರಂಭವಾಗಬಹುದು ಎನ್ನಲಾಗಿದೆ.

Exit mobile version