ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ವಿರಾಮದ ಹಂತಕ್ಕೆ ಬಂದಿದ್ದು, ಉದ್ವಿಗ್ನತೆ ಮುಂದುವರೆದಿದೆ. ಇದರ ನಡುವೆ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಈಗಾಗಲೇ ಇರುವ ಝಡ್ ಭದ್ರತೆ ಜತೆಗೆ ಬುಲೆಟ್ ಪ್ರೂಫ್ car ಕೂಡ ಸರ್ಕಾರ ಒದಗಿಸಲಿದೆ. ದೆಹಲಿಯಲ್ಲಿರುವ ಅವರ ನಿವಾಸದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಹೆಚ್ಚಿಸಲಾಗಿದೆ. ಎಸ್ ಜೈಶಂಕರ್ ಅವರಿಗೆ ಈಗಾಗಲೇ ಗೃಹ ಸಚಿವಾಲಯವು Z ವರ್ಗದ ಭದ್ರತೆಯನ್ನು ಒದಗಿಸಿದೆ.
ವಿದೇಶಾಂಗ ಸಚಿವರಿಗೆ ಸಿಆರ್‌ಪಿಎಫ್ ಕಮಾಂಡೋಗಳು ಭದ್ರತೆ ಒದಗಿಸುತ್ತಾರೆ. ಇದರಲ್ಲಿ, 33 ಕಮಾಂಡೋಗಳು ಅವರ ಸುತ್ತಮುತ್ತಲಿರುತ್ತಾರೆ. ಅಕ್ಟೋಬರ್ 2023 ರಲ್ಲಿ ಅವರ ಭದ್ರತೆಯನ್ನು Y-ವರ್ಗದಿಂದ Z-ವರ್ಗಕ್ಕೆ ಭದ್ರತೆ ಹೆಚ್ಚಿಸಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಿರುವ ಸಮಯದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇಷ್ಟೇ ಅಲ್ಲ, ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ಪಾಕಿಸ್ತಾನ ಮತ್ತು ಪಿಒಕೆ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿತು(car)
Also Read: Earthquake Hits Pakistan : ಸಿಂದೂರ ಆಪರೇಷನ್ ಬಳಿಕ ಪಾಕ್‌ನಲ್ಲಿ 4.6 ತೀವ್ರತೆಯ ಭೂಕಂಪ
ವಾಸ್ತವವಾಗಿ, Z- ವರ್ಗದ ಭದ್ರತೆಯು ಭಾರತದಲ್ಲಿ ಮೂರನೇ ಅತ್ಯುನ್ನತ ಭದ್ರತೆಯಾಗಿದೆ. ಅದರಲ್ಲಿ 22 ಸೈನಿಕರಿದ್ದಾರೆ. ಇವರಲ್ಲಿ 4 ರಿಂದ 6 ಎನ್‌ಎಸ್‌ಜಿ ಕಮಾಂಡೋಗಳು ಮತ್ತು ಸ್ಥಳೀಯ ಪೊಲೀಸರು ಸೇರಿದ್ದಾರೆ. ಇದು ಬುಲೆಟ್ ಪ್ರೂಫ್ ಕಾರನ್ನು ಸಹ ಹೊಂದಿದೆ. ಹೆಚ್ಚುವರಿಯಾಗಿ, ಬೆಂಗಾವಲು ಪಡೆಗಳನ್ನು ಸಹ ಒದಗಿಸಲಾಗುತ್ತದೆ. ಈ ಭದ್ರತೆಯನ್ನು ಹೆಚ್ಚಿನ ಭದ್ರತೆಯ ಅಗತ್ಯವಿರುವ ದೊಡ್ಡ ನಾಯಕರು ಮತ್ತು ಸೆಲೆಬ್ರಿಟಿಗಳಿಗೆ ನೀಡಲಾಗುತ್ತದೆ. ಅಕ್ಟೋಬರ್ 2023 ರಲ್ಲಿ, ಜೈಶಂಕರ್ ಅವರ ಭದ್ರತೆಯನ್ನು ಹೆಚ್ಚಿಸಲಾಯಿತು. ಈ ಹಿಂದೆ ಅವರಿಗೆ ವೈ-ಕೆಟಗರಿ ಭದ್ರತೆಯನ್ನು ಒದಗಿಸಲಾಗಿತ್ತು.

