Site icon BosstvKannada

ಬಿಜೆಪಿಗೆ ಅರ್ಜಿ ಹಾಕಿದ್ದಾರೆ ಅನ್ನೋ ಬಾಲಕೃಷ್ಣ ಆರೋಪಕ್ಕೆ ಮಾಜಿ ಸಚಿವ ರಾಜಣ್ಣ ತಿರುಗೇಟು!

ರಾಜ್ಯ ರಾಜಕಾರಣದಲ್ಲಿ ಆಡಳಿತ ಪಕ್ಷದ ಕಾಂಗ್ರೆಸ್‌ ನಾಯಕರ ಟಾಕ್‌ ವಾರ್‌ ಭಾರೀ ಜೋರಾಗಿ ಸದ್ದು ಮಾಡ್ತಿದೆ. ಏಟಿಗೆ ಎದುರೇಟು ಅಂತಾ ಪರಸ್ಪರರೇ ಬಹಿರಂಗವಾಗೇ ಹೇಳಿಕೆಗಳನ್ನ ನೀಡ್ತಿದ್ದಾರೆ. ನಿನ್ನೆ ಶಾಸಕ ಬಾಲಕೃಷ್ಣ ಮಾಜಿ ಸಚಿವ ರಾಜಣ್ಣ ವಿರುದ್ಧ ನಾಲಗೆ ಹರಿಬಿಟ್ಟಿದ್ದಾರೆ. ಇದಕ್ಕೆ ರಾಜಣ್ಣ ಪುತ್ರ ರಾಜೆಂದ್ರ ತಿರುಗೇಟು ನೀಡಿದ್ರು.. ಆದ್ರೂ ಕಾಂಗ್ರೆಸ್‌ ನಾಯಕರ ಮಧ್ಯೆ ರಾಜಕೀಯ ವಾಕ್ಸಮರ ಮುಂದುವರೆದಿದೆ.

ಮಾಜಿ ಸಚಿವ ಕೆ.ಎನ್ ರಾಜಣ್ಣ ಬಿಜೆಪಿ ಸೇರ್ಪಡೆಗೆ ಅರ್ಜಿ ಹಾಕಿದ್ದಾರೆ ಅನ್ನೋ ಶಾಸಕ ಬಾಲಕೃಷ್ಣ ಹೇಳಿಕೆಗೆ, ಇದೀಗ ಸ್ವತಃ ಮಾಜಿ ಸಚಿವ ಕೆ.ಎನ್ ರಾಜಣ್ಣ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕೊಡಿಗೇಹಳ್ಳಿ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಕೆ.ಎನ್ ರಾಜಣ್ಣ, ‘ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ. ನಾನ್ಯಾಕೆ ಬಿಜೆಪಿಗೆ ಹೋಗಲಿ. ನಾನು 35 ಸಾವಿರ ಮತಗಳ ಅಂತರದಿಂದ ಗೆದ್ದಿದ್ದೇನೆ. ಈಗ ಚುನಾವಣೆ ನಡೆದರೂ ಅತ್ಯಧಿಕ ಮತಗಳಿಂದ ಗೆಲ್ಲುತ್ತೇನೆ ಎಂದು ಟಾಂಗ್ ಕೊಟ್ಟರು.

ನಾನು ಭ್ರಷ್ಟಾಚಾರ ಮಾಡಿಲ್ಲ, ಆದರೂ ರಾಜೀನಾಮೆ ಕೊಟ್ಟಿದ್ದೇನೆ, ನಾನು ಯಾಕೆ ಬಿಜೆಪಿಗೆ ಹೋಗಬೇಕು..? ಬಿಜೆಪಿ, ಜೆಡಿಎಸ್, ಕಾಂಗ್ರೆಸ್, ಪಕ್ಷೇತರ ಯಾವ ಪಕ್ಷದಿಂದ ನಿಂತರೂ ಮತ ಹಾಕಿ ನನ್ನನ್ನು ಜನ ಗೆಲ್ಲಿಸುತ್ತಾರೆ. ಸಿದ್ದರಾಮಯ್ಯ ನೇತೃತ್ವ ಇರುವವರೆಗೂ ನನ್ನ ಭವಿಷ್ಯಕ್ಕೆ ತೊಂದರೆ ಇಲ್ಲ’ ಎಂದು ಕೆ.ಎನ್ ರಾಜಣ್ಣ ಹೇಳಿದ್ದಾರೆ.

Read Also : ಗಣೇಶೋತ್ಸವ ಮಾಡಿದವ್ರಿಗೆ ಸರ್ಕಾರದಿಂದ ₹25 ಸಾವಿರ ಅನುದಾನ..!

Exit mobile version