Site icon BosstvKannada

ಮಡೆನೂರು ಮನು ವಿರುದ್ಧFIR ದಾಖಲು..!

fir

ಕಾಮಿಡಿ ಕಿಲಾಡಿ ಖ್ಯಾತಿಯ ಮಡೆನೂರು ಮನು ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ಕಾಮಿಡಿ ಕಿಲಾಡಿಗಳು’ ಮೂಲಕ ನಟ ಮಡೆನೂರು ಮನು ಜನಪ್ರಿಯತೆ ಪಡೆದುಕೊಂಡಿದ್ದರು. ಕಿರುತೆರೆ ನಟಿಯೊಬ್ಬರು ಮಡೆನೂರು ಮನು ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದಾರೆ. ಈ ಕುರಿತು ಮನು ವಿರುದ್ಧ ಸಹನಟಿ ಪ್ರಕರಣ ದಾಖಲಿಸಿದ್ದಾರೆ. ಕೇಸ್‌ ದಾಖಲಾಗುತ್ತಿದ್ದಂತೆ ಮಡೆನೂರು ಮನು ನಾಪತ್ತೆಯಾಗಿದ್ದಾರೆ. ಮದುವೆ ಆಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ್ದಾರೆ ಎಂದು ಮನು ವಿರುದ್ಧ ಗಂಭೀರ ಆರೋಪಿಸಿ ಕೇಸ್‌ ದಾಖಲಿಸಿಲಾಗಿದೆ(fir).

Also Read: Pruthvi Ambaar : ಹಿಂದೆಂದೂ ಕಾಣದ ಅವತಾರದಲ್ಲಿ ಪೃಥ್ವಿ ಅಂಬಾರ್‌ ಅಬ್ಬರ..!

ಇನ್ನು ಈ ಸಂಬಂಧ ಕಿರುತೆರೆ ನಟಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಿದ್ದಾರೆ. ಇನ್ನೂ, ನಿರ್ದೇಶಕ ಯೋಗರಾಜ್ ಭಟ್ ಅವರ ಬ್ಯಾನರ್‌ನಲ್ಲಿ ಮೂಡಿಬಂದ ಸಿನಿಮಾದಲ್ಲಿ ನಟ ಮಡೆನೂರು ಮನು ನಟಿಸಿದ್ದಾರೆ. ಈ ಕುಲದಲ್ಲಿ ಕೀಳ್ಯಾವೋದು ಸಿನಿಮಾ ನಾಳೆ ರಿಲೀಸ್​ ಆಗಬೇಕಿದೆ. ಆದ್ರೆ ಇದರ ಮಧ್ಯೆ ನಟ ಮಡೆನೂರು ಮನು ಮೇಲೆ ಅತ್ಯಾಚಾರದ ಆರೋಪ ಕೇಳಿ ಬಂದಿದೆ. ಸದ್ಯ ಅನ್ನಪೂರ್ಣೇಶ್ವರಿ ನಗರ ಪೊಲೀಸರಿಂದ ನಟ ಮನುಗಾಗಿ ಹುಡಕಾಟ ಶುರು ಮಾಡಿದ್ದಾರೆ.

Exit mobile version