ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಆವೃತ್ತಿಗೆ ಇನ್ನು ಎರಡು ತಿಂಗಳು ಬಾಕಿ ಇದ್ದು, ಎಲ್ಲಾ ತಂಡಗಳು ಈಗಾಗಲೇ ಸಿದ್ಧತೆ ಆರಂಭಿಸಿವೆ. ಐಪಿಎಲ್ (IPL)ಆರಂಭವಾಗುವ ಮುನ್ನ ಚಾಂಪಿಯನ್ಸ್ ಟ್ರೋಫಿ, ಮಹಿಳಾ ಪ್ರೀಮಿಯರ್ ಲೀಗ್ ಕೂಡ ನಡೆಯುವುದರಿಂದ ಇನ್ನು ನಾಲ್ಕು ತಿಂಗಳು ಕ್ರಿಕೆಟ್ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ಸಿಗಲಿದೆ.
ಐಪಿಎಲ್ ಎಂದರೆ ಅಲ್ಲಿ ಪರಸ್ಪರ ಕಾಲೆಳೆಯುವುದು, ಜಗಳ ಸಾಮಾನ್ಯ ಎನ್ನುವಂತಾಗಿದೆ. ವಿವಿಧ ತಂಡಗಳ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಿತ್ತಾಡಿಕೊಳ್ಳುವುದು, ಟ್ರೋಲ್ ಮಾಡುವುದು ಮಾಮೂಲು. ಆದರೆ ಕೆಲವೊಮ್ಮೆ ಕ್ರಿಕೆಟಿಗರು ಕೂಡ ಎದುರಾಳಿ ತಂಡವನ್ನು ಟ್ರೋಲ್ ಮಾಡುವುದನ್ನು ನೋಡಬಹುದು. ಈಗ ದೆಹಲಿ ಸ್ಟಾರ್ ಆಟಗಾರ ಕೂಡ ಆರ್ಸಿಬಿಯನ್ನು ಟ್ರೋಲ್ ಮಾಡಿದ್ದಾರೆ.


ಕುಲದೀಪ್(Kuldeep) ಯಾದವ್ ಕಳೆದ ವರ್ಷದ ಅಕ್ಟೋಬರ್ ತಿಂಗಳಿನಿಂದ ಭಾರತ ತಂಡಕ್ಕಾಗಿ ಆಡಿಲ್ಲ. ಗಾಯಗೊಂಡಿದ್ದ ಅವರು ಚೇತರಿಸಿಕೊಳ್ಳುತ್ತಿದ್ದಾರೆ, ಕ್ರಿಕೆಟ್ನಿಂದ ಹೊರುಗುಳಿದಿದ್ದರು ಕುಲದೀಪ್ ಯಾದವ್ ಫುಟ್ಬಾಲ್ ಪಂದ್ಯಗಳ ನೇರಪ್ರಸಾರದಲ್ಲಿ ಭಾಗವಹಿಸಿದ್ದಾರೆ. ಈ ಸಮಯದಲ್ಲಿ ಅವರು ಆರ್ ಸಿಬಿ ಅಭಿಮಾನಿಗೆ ನೀಡಿರುವ ಪ್ರತಿಕ್ರಿಯೆ ವೈರಲ್ ಆಗಿದೆ. ಟಾಕ್ ಫುಟ್ಬಾಲ್ ಎನ್ನುವ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡುವ ಸಂದರ್ಭದಲ್ಲಿ ಆರ್ ಸಿಬಿ ಅಭಿಮಾನಿಯೊಬ್ಬರು, ಕುಲದೀಪ್ ಯಾದವ್ರನ್ನು ದಯವಿಟ್ಟು ಆರ್ಸಿಬಿಗೆ ಸೇರಿ ನಮಗೆ ಒಬ್ಬರು ಗೋಲ್ ಕೀಪರ್ ಬೇಕು ಎಂದು ಕೇಳಿದ್ದಾರೆ.
ಈ ಕಮೆಂಟ್ ಓದಿದ ಕುಲದೀಪ್ (Kuldeep) ಯಾದವ್ ಹಾಸ್ಯದಿಂದಲೇ ಉತ್ತರಿಸಿದರು. ನಿಮಗೆ ಗೋಲ್ ಕೀಪರ್ ಅಲ್ಲ ಟ್ರೋಫಿಯ ಅಗತ್ಯವಿದೆ, ಗೋಲ್ ಕೀಪರ್ ತೆಗೆದುಕೊಂಡು ನೀವು ಏನು ಮಾಡುತ್ತೀರಾ ಎಂದು ಕೇಳಿದ್ದಾರೆ. ಸಧ್ಯ ಇದನ್ನ ನೋಡಿದ ಆರ್ಸಿಬಿ ಫ್ಯಾನ್ಸ್ ರೊಚ್ಚಿಗೆದ್ದಿದ್ದಾರೆ….