Site icon BosstvKannada

400kg RDX ಬಳಸಿ ಸ್ಫೋಟ : ಮುಂಬೈ ಪೊಲೀಸರಿಗೆ ಬಂತು ಬಾಂಬ್‌ ಬ್ಲಾಸ್ಟ್‌ ಮೆಸೇಜ್‌.. ಎಲ್ಲೆಡೆ ಹೈ ಅಲರ್ಟ್‌..!

ನೀವು ಗಣೇಶೋತ್ಸವ ನೋಡಬೇಕಾ.. ಹಾಗಿದ್ರೆ ಮುಂಬೈಗೆ ಹೋಗಿ ಅಂತಾರೆ.. ದಸರಾ ನೋಡಬೇಕಾ ಹಾಗಿದ್ರೆ ಕರ್ನಾಟಕಕ್ಕೆ ಭೇಟಿ ನೀಡಿ ಅನ್ನೋ ಮಾತಿನ ಥರಾ. ನೀವೆನಾದ್ರೂ ಗಣೇಶೋತ್ಸವ ನೋಡಲಿಕೆ ಅಂತಾ ಮುಂಬೈಗೆ ಹೋಗಿದ್ರೆ ಹುಷಾಗಿರಿ.. ಯಾಕಂದ್ರೆ ಮುಂಬೈ ಸದ್ಯ ಪೊಲೀಸರಿಂದ ಬಿಗಿಭದ್ರತೆಯಲ್ಲಿದೆ.

ಹೌದು, ಮುಂಬೈನಲ್ಲಿ ಗಣೇಶೋತ್ಸವದ ಆಚರಣೆ ಭರ್ಜರಿಯಾಗಿ ಆರಂಭವಾಗಿದ್ದು, ಇನ್ನೇನು ಗಣೇಶ ವಿಸರ್ಜನೆ ದಿನ ಹತ್ತಿರ ಬಂದಿದ್ರೆ.. ಇಡೀ ನಗರವೇ ಹೈ ಅಲರ್ಟ್‌ನಲ್ಲಿದೆ. ಯಾಕಂದ್ರೆ ಪೊಲೀಸರಿಗೆ ಬಂದ ಅದೊಂದು ಮೆಸೇಜ್‌ನಿಂದ ಇಡೀ ಮುಂಬೈ ಮಹಾನಗರದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಕಂಡು ಕೇಳರಿಯದ ಉಗ್ರ ದಾಳಿ ನಡೆಸುವುದಾಗಿ ಮುಂಬೈ ಸಂಚಾರ ಪೊಲೀಸ್​ ಠಾಣೆಗೆ ವಾಟ್ಸಪ್ ಬೆದರಿಕೆ ಸಂದೇಶ ಬಂದಿದೆ. ಅನಾಮಿಕ ವ್ಯಕ್ತಿಯೊಬ್ಬನಿಂದ ಬೆದರಿಕೆ ಸಂದೇಶ ಬಂದಿದ್ದು, ನಗರದ್ಯಾಂತ ಭಾರೀ ಕಟ್ಟೆಚ್ಚರ ವಹಿಸಲಾಗಿದೆ.

ಪಾಕಿಸ್ತಾನ ಮೂಲದ ಜಿಹಾದಿ ಗುಂಪಿನ ಸದಸ್ಯನಿಂದ ಬೆದರಿಕೆ ಬಂದಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಪಾಕಿಸ್ತಾನ ಲಷ್ಕರ್-ಎ-ಜಿಹಾದಿ ಸಂಘಟನೆಯ 14 ಉಗ್ರರು ಭಾರತ ಪ್ರವೇಶಿಸಿದ್ದಾರೆ. 400 ಕೆಜಿ ಆರ್‌ಡಿಎಕ್ಸ್‌ ಸ್ಫೋಟಿಸಿ ಜನರನ್ನ ಕೊಲ್ಲಲಿದ್ದಾರೆ. ಅಲ್ಲದೇ ನಗರಾದ್ಯಂತ 34 ವಾಹನಗಳಲ್ಲಿ ಮಾನವ ಬಾಂಬ್‌ ಸ್ಫೋಟಿಸಲಾಗುವುದು ಎಂದು ಎಚ್ಚರಿಕೆ ಸಂದೇಶ ಕಳಿಸಿರುವುದಾಗಿ ಮುಂಬೈ ಪೊಲೀಸರು ತಿಳಿಸಿದ್ದಾರೆ.

ಬೆದರಿಕೆ ಸಂದೇಶ ಬಂದ ಕೂಡಲೇ ಮುಂಬೈ ಟ್ರಾಫಿಕ್‌ ಪೊಲೀಸರು, ಅಪರಾಧ ವಿಭಾಗಕ್ಕೆ ಮಾಹಿತಿ ರವಾನಿಸಿದ್ದಾರೆ. ಮುಂಬೈ ಪೊಲೀಸರು ಫುಲ್‌ ಅಲರ್ಟ್‌ ಆಗಿದ್ದು, ಇಡೀ ರಾಜ್ಯದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಅಲ್ಲದೇ ಬೆದರಿಕೆಯ ಪ್ರತಿಯೊಂದು ಸಾಧ್ಯತೆ ಮತ್ತು ಮೂಲವನ್ನು ತನಿಖೆ ಮಾಡಲಾಗುತ್ತಿದೆ. ಇನ್ನೂ ನಾಳೆ ಮುಂಬೈನಲ್ಲಿ ಗಣೇಶ ವಿಸರ್ಜನೆ ಕಾರ್ಯಕ್ರಮಗಳು ನಡೆಯಲಿದೆ. ಹೀಗಾಗಿ ಅನಂತ ಚತುರ್ದಶಿ ದಿನವನ್ನೇ ಟಾರ್ಗೆಟ್‌ ಮಾಡಲಾಗಿದೆಯೇ ಎಂಬ ಅನುಮಾನಗಳೂ ಹುಟ್ಟಿಕೊಂಡಿದೆ.

Read Also : ಗಣೇಶೋತ್ಸವ ಮಾಡಿದವ್ರಿಗೆ ಸರ್ಕಾರದಿಂದ ₹25 ಸಾವಿರ ಅನುದಾನ..!

Exit mobile version