ಬಿಗ್ ಬಾಸ್ ಕನ್ನಡ ಸೀಸನ್ 11 ರ ಗ್ರ್ಯಾಂಡ್ ಫಿನಾಲೆ (Bigg boss kannada season 11 grand finale) ಮುಕ್ತಾಯವಾಗಿದೆ. ಹನುಮಂತನನ್ನು(Hanumanta) ವಿನ್ನರ್ ಎಂದು ಘೋಷಣೆ ಮಾಡಿ ಆಗಿದೆ. ಬಿಗ್ ಬಾಸ್ ಕನ್ನಡ ಸೀಸನ್ ಶುರುವಾಗಿ 4ನೇ ವಾರಕ್ಕ ಹನುಮಂತ (Hanumanta) ಮನೆಯೊಳಗೆ ಎಂಟ್ರಿ ಕೊಟ್ಟರು. ಈಗ ಹೊಸ ದಾಖಲೆಗಳನ್ನು ಬರೆದು ವಿನ್ನರ್ ಆಗಿದ್ದಾರೆ.
ಬಿಗ್ ಬಾಸ್ ಇತಿಹಾದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಫಿನಾಲೆ ತಲುಪಿದ್ದು ಇಬ್ಬರೇ ಸ್ಪರ್ಧಿಗಳು. ಒಂದು ರಜತ್ ಮತ್ತೊಂದು ಹನುಮಂತ(Hanumanta). ಅದರಲ್ಲಿ ಹನುಮಂತ ವಿನ್ನರ್ ಕೂಡ ಆಗಿದ್ದು ಬಿಗ್ ಬಾಸ್ ಕನ್ನಡ ವಿನ್ ಆದ ಮೊದಲ ವೈಲ್ಡ್ ಕಾರ್ಡ್ ಸ್ಪರ್ಧಿ ಎಂಬ ದಾಖಲೆ ಬರೆದರು. ಜೊತೆಗೆ 5 ಕೋಟಿಗೂ ಅಧಿಕ ವೋಡ್ ಪಡೆದು ಮತ್ತೊಂದು ದಾಖಲೆ ಸೃಷ್ಟಿಸಿದರು.
ಹನುಮಂತ ಬಿಗ್ ಬಾಸ್ ವಿನ್ನರ್ ಆಗ್ತಿದ್ದಂತೆ ಅವರ ಫ್ಯಾನ್ಸ್ ಸಂತಸದಲ್ಲಿ ಸಂಭ್ರಮಿಸಿದ್ದಾರೆ. ಬಿಗ್ ಬಾಸ್ ಬಹುಮಾನ ಮೊತ್ತವಾಗಿ ಬರೋಬ್ಬರಿ 50 ಲಕ್ಷ ರೂಪಾಯಿ ಹಣ ಕಾನ್ಫಿಡೆಂಟ್ ಗ್ರೂಪ್ ಕಡೆಯಿಂದ ಹನುಮಂತನಿಗೆ ಕೊಡಲಾಗಿದೆ. ಆದರೆ ಸಂಪೂರ್ಣ 50 ಲಕ್ಷ ರೂಪಾಯಿ ಹಣ ಹನುಮಂತನ ಕೈ ಸೇರುವುದಿಲ್ಲ.
ಬಿಗ್ ಬಾಸ್ ಕನ್ನಡ ಪ್ರತಿ ಸೀಸನ್ನಲ್ಲೂ ಸ್ಪರ್ಧಿಗಳು ಗೆಲ್ಲುವ ಪ್ರತಿ ಹಣದ ಮೇಲೆ ಕತ್ತರಿ ಹಾಕಲಾಗುತ್ತದೆ. ಇದಕ್ಕೆ ಕಾರಣ ತೆರಿಗೆ. ಬಹುಮಾನ ಮೊತ್ತಕ್ಕೆ ಸರ್ಕಾರ ಶೇ. 30ರಷ್ಟು ತೆರಿಗೆ ವಿಧಿಸುತ್ತದೆ. ಬಹುಮಾನದ ರೂಪದಲ್ಲಿ ಬರುವ ಲಕ್ಷಾಂತರ ರೂಪಾಯಿ ಹಣದಲ್ಲಿ ಶೇ. 30 ರಷ್ಟು ಪಾಲನ್ನು ಸರ್ಕಾರಕ್ಕೆ ಕೊಡಲೇಬೇಕಿದೆ. ಇದು ಟ್ಯಾಕ್ಸ್ ಎಂದು ಸರ್ಕಾರ ಪರಿಗಣಿಸುತ್ತದೆ. ಈ ಹಣವನ್ನು ಸಂಸ್ಥೆಯವರು ಕಡಿತ ಮಾಡಿ ಬಳಿಕ ಉಳಿದ ಹಣವನ್ನು ವಿಜೇತರಿಗೆ ನೀಡುತ್ತಾರೆ.
ಹನುಮಂತ ಬಿಗ್ ಬಾಸ್ ಕನ್ನಡ ಸೀಸನ್ 11 ವಿನ್ನರ್ ಆಗಿ 50 ಲಕ್ಷ ಗೆದ್ದಿದ್ದರೂ ಸಹ ಆತನಿಗೆ ಸಿಗೋದು ಕೇವಲ 35 ಲಕ್ಷ ರೂಪಾಯಿ ಅಷ್ಟೇ. ಟಿವಿ ರಿಯಾಲಿಟಿ ಶೋ, ಲಾಟರಿ, ಕಾರ್ಡ್ ಗೇಮ್ನಲ್ಲಿ ಗೆದ್ದ ಬಹುಮಾನದ ಮೊತ್ತದ ಮೇಲೆ ಶೇ. 30 ತೆರಿಗೆ ಪಾವತಿಸಬೇಕು.
ಕೇವಲ ಹನುಮಂತ ಮಾತ್ರವಲ್ಲದೆ ರನ್ನರ್ ಅಪ್ ಆದ ತ್ರಿವಿಕ್ರಮ್ ಅವರಿಗೆ ಬಂದ ಬಹುಮಾನದ ಹಣದ ಮೇಲೂ ತೆರಿಗೆ ಹಣ ಪಾವತಿಸಬೇಕು. ಅವರಿಗೆ ಒಟ್ಟೂ 15 ಲಕ್ಷ ರೂಪಾಯಿ ಸಿಕ್ಕಿದ್ದು ಅದರಲ್ಲಿ 4,50,000 ರೂಪಾಯಿ ಕಡಿತಗೊಂಡು 10,50,000 ಮಾತ್ರ ಸಿಗಲಿದೆ. 4,50,000 ರೂಪಾಯಿ ತೆರಿಗೆ ರೂಪದಲ್ಲಿ ಸರ್ಕಾರದ ಕೈ ಸೇರಲಿದೆ. ಸೆಕೆಂಡ್ ರನ್ನರ್ ಅಪ್ ಆದ ರಜತ್ ಅವರಿಗೆ 10 ಲಕ್ಷ ರೂಪಾಯಿ ಸಿಕ್ಕಿದ್ದು, ಅವರ ಕೈ ಸೇರುವುದು 7 ಲಕ್ಷ ರೂಪಾಯಿ ಹಣ ಮಾತ್ರ.