ಡಿಕೆಶಿ ಸಿಎಂ ಆಸೆಗೆ ಸಿದ್ದರಾಮಯ್ಯ(Siddaramanya) ಟೀಂ ಅಡ್ಡಗಾಲು..!
ಒಂದಾದ ಮೇಲೆ ಡಿನ್ನರ್ ಮೀಟಿಂಗ್.. ಒಂದಾದ ಮೇಲೊಂದು ಲಂಚ್ ಮೀಟಿಂಗ್.. ಎಂಬಂತೆ ಕಾಂಗ್ರೆಸ್ನಲ್ಲೀಗ ಮೀಟಿಂಗ್ ಮೇಲೆ ಮೀಟಿಂಗ್ ನಡೆಯುತ್ತಿವೆ.. ನೆಪಕ್ಕೆ ಡಿನ್ನರ್, ಲಂಚ್ ಆದ್ರೂ ಅಸಲಿಯ ಕಾರಣಗಳು ಬೇರೆಯದ್ದೇ ಇದೆ.. ಯಾರಿಗೂ ನಿಲುಕದ ರಾಜಕೀಯ ಲೆಕ್ಕಾಚಾರಗಳು ನಡೆಯುತ್ತಿವೆ..
ಸತೀಶ್ ಆಯ್ತು.. ಈಗ ಪರಂ ನಿವಾಸದಲ್ಲಿ ಡಿನ್ನರ್ ಮೀಟಿಂಗ್..!
ಯೆಸ್.. ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಿಕೆಶಿಗೆ ಶಾಕ್ ಕೊಡಲು ಕಾಂಗ್ರೆಸ್ನಲ್ಲೇ ದೊಡ್ಡ ಪ್ಲ್ಯಾನ್ ನಡೆಯುತ್ತಿದೆ.. ಮುಖ್ಯಮಂತ್ರಿ ಸ್ಥಾನ ತಪ್ಪಿಸಲು ಸಿದ್ದರಾಮಯ್ಯ ಬಣದಲ್ಲೇ ಮಹಾ ತಂತ್ರ ರೆಡಿಯಾಗುತ್ತಿದೆ ಅಂತಲೇ ಚರ್ಚೆಯಾಗುತ್ತಿದೆ. ಅದಕ್ಕೆ ಕಾರಣವೇ ಡಿನ್ನರ್ ಹಾಗೂ ಲಂಚ್ ಮೀಟಿಂಗ್ಗಳು.. ಹೌದು.. ಕಳೆದ ವಾರವಷ್ಟೇ ಸಚಿವ ಸತೀಶ್ ಜಾರಕಿಹೊಳಿ(Satish Jarkiholi) ನಿವಾಸದಲ್ಲಿ ಡಿನ್ನರ್ ಮೀಟಿಂಗ್ ನಡೆದಿತ್ತು. ಡಿಸಿಎಂ ಡಿಕೆಶಿ ವಿದೇಶಕ್ಕೆ ತೆರಳಿದ್ದಾಗಲೇ, ಸಿದ್ದರಾಮಯ್ಯ(Siddaramanya), ಸಚಿವರಾದ ಎಚ್.ಸಿ.ಮಹದೇವಪ್ಪ(H.C. Mahadevappa), ಜಿ.ಪರಮೇಶ್ವರ್(G.Parameshwar), ಕೆ.ಎನ್.ರಾಜಣ್ಣ, ಸೇರಿ 10ಕ್ಕೂ ಹೆಚ್ಚು ಶಾಸಕರು ಭಾಗಿಯಾಗಿದ್ದರು. ಇದೇ ವೇಳೆ, ಸಿಎಂ ಸಿದ್ದರಾಮಯ್ಯ ದೊಡ್ಡ ಬಾಂಬ್ ಸಿಡಿಸಿದ್ದರು.. ಅಧಿಕಾರ ಹಂಚಿಕೆ ಬಗ್ಗೆ ಯಾವುದೇ ಒಪ್ಪಂದ ಆಗಿಲ್ಲವೆಂದು ಆಪ್ತ ಸಚಿವರ ಮುಂದೆಯೇ ಹೇಳಿಕೊಂಡಿದ್ದು, ಭಾರಿ ಸಂಚಲನ ಸೃಷ್ಟಿಸಿದೆ.. ಇದರ ಬೆನ್ನಲ್ಲೇ ಈಗ ಪರಮೇಶ್ವರ್ ನಿವಾಸದಲ್ಲಿ ಡಿನ್ನರ್ ಮೀಟಿಂಗ್ ಫಿಕ್ಸ್ ಆಗಿದೆ.. ನಾಳೆ ಬೆಂಗಳೂರಿನ ಪರಂ ನಿವಾಸದಲ್ಲಿ ಡಿನ್ನರ್ ಕೂಟ ನಡೆಯಲಿದ್ದು, ದಲಿತ ಶಾಸಕರು, ಸಚಿವರು ಭಾಗಿಯಾಗುತ್ತಿದ್ದಾರೆ.. ಆದ್ರೆ, ಉಳಿದ ಸಮುದಾಯದ ಸಚಿವರಿಗೆ ಆಹ್ವಾನ ಇಲ್ಲ ಅಂತಾ ಹೇಳಿದ್ದಾರೆ.
ಸತೀಶ್ ನಿವಾಸದ ಡಿನ್ನರ್ ಬೆನ್ನಲ್ಲೇ ಅಲರ್ಟ್ ಆಗಿದ್ದ ಡಿಕೆಶಿ ಬಣ!
ಸತೀಶ್ ಜಾರಕಿಹೊಳಿ (Satish Jarkiholi)ನಿವಾಸದಲ್ಲಿ ಸಿದ್ದು ಆಪ್ತರ ಡಿನ್ನರ್ ಮೀಟಿಂಗ್ ಬೆನ್ನಲ್ಲೇ ಡಿಕೆಶಿ ಪಟಾಲಂ ಅಲರ್ಟ್ ಆಗಿತ್ತು.. ಡಿಕೆಶಿ ಆಪ್ತ ಸಚಿವ ಹಾಗೂ ಒಕ್ಕಲಿಗ ನಾಯಕನಾಗಿರುವ ಚಲುರಾಯಸ್ವಾಮಿ ನಿವಾಸದಲ್ಲಿ ಲಂಚ್ ಪಾರ್ಟಿ ನಡೆದಿತ್ತು.. ಈ ಸಭೆಯಲ್ಲಿ ಒಕ್ಕಲಿಗ ನಾಯಕರು ಹಾಗೂ ಡಿಕೆಶಿ ಆಪ್ತರು ಭಾಗಿಯಾಗಿದ್ರು.. ಡಿಕೆಶಿ ವಿದೇಶದಲ್ಲಿರುವಾಗ್ಲೇ ಲಂಚ್ ಮೀಟಿಂಗ್ ಮಾಡುವ ಮೂಲಕ ನಾವು ಡಿಕೆಶಿ ಜತೆಗಿದ್ದೇವೆ ಅನ್ನೋ ಸಂದೇಶ ರವಾನಿಸಿದ್ದರು..
ಡಿಕೆಶಿ ಸಿಎಂ ಆಸೆಗೆ ಅಡ್ಡಗಾಲು ಹಾಕಲು ಸಿದ್ದು ಬಣ ತಂತ್ರ..?
ಈ ಎಲ್ಲಾ ಸಭೆಗಳನ್ನು ನೋಡಿದ್ಮೇಲೆ ಎಲ್ಲರಿಗೂ ಅನ್ನಿಸೋದು ಒಂದೇ.. ಡಿಕೆಶಿಯ ಸಿಎಂ ಆಸೆಗೆ ಅಡ್ಡಗಾಲು ಹಾಕಲು ನಡೆಯುತ್ತಿರುವ ತಂತ್ರ ಅನ್ನೋದು.. ಯಾಕಂದ್ರೆ, ಈಗಾಗ್ಲೇ ಅಧಿಕಾರ ಹಂಚಿಕೆ ಬಗ್ಗೆ ಒಪ್ಪಂದ ಆಗಿದೆ ಅಂಥಾ ಡಿಕೆಶಿ ರಾಷ್ಟ್ರೀಯ ಮಾಧ್ಯಮಕ್ಕೆ ನೀಡಿದ ಸಂದರ್ಶದಲ್ಲೇ ಹೇಳಿಕೊಂಡಿದ್ದಾರೆ.. ಇದೇ ಹೊತ್ತಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣ ಈಗ ತಾರ್ಕಿಕ ಹಂತಕ್ಕೆ ಬಂದಿದೆ. ಇದೇ ಕಾರಣಕ್ಕಾಗಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೂ ಅಚ್ಚರಿಯಿಲ್ಲ.. ಇಂತಾ ಹೊತ್ತಲ್ಲಿ ಪರಿಸ್ಥಿತಿ ಲಾಭ ಪಡೆದು ಸಿಎಂ ಸ್ಥಾನಕ್ಕೇರಲು ಡಿಕೆಶಿ ತಂತ್ರ ನಡೆಸಿದ್ದಾರೆ ಅಂತಲೂ ಹೇಳಲಾಗ್ತಿದೆ. ಆದ್ರೆ, ಯಾವುದೇ ಕಾರಣಕ್ಕೂ ಡಿಕೆಶಿಗೆ ಸಿಎಂ ಆಗುವ ಅವಕಾಶ ಸಿಗಲು ಬಿಡಬಾರದು ಅಂತಾ ಸಿದ್ದು ಬಣ ತಂತ್ರ ನಡೆಸಿದೆ ಎನ್ನಲಾಗ್ತಿದೆ.. ಈ ಹಿನ್ನೆಲೆಯಲ್ಲಿ ಅಹಿಂದ ನಾಯಕರು ಡಿನ್ನರ್ ನೆಪದಲ್ಲಿ ಮೀಟಿಂಗ್ ಮೇಲೆ ಮೀಟಿಂಗ್ ಮಾಡ್ತಿದ್ದಾರೆ..
ಎಐಸಿಸಿ ಅಧ್ಯಕ್ಷರ ಭೇಟಿಯಾಗಿ ದೂರು ನೀಡ್ತಾರಾ ಡಿಕೆಶಿ..?
ಇನ್ನು, ಡಿನ್ನರ್ ಪಾರ್ಟಿಗಳಿಂದ ಒಳಗೊಳಗೆ ಕುದ್ದು ಹೋಗಿರುವ ಡಿಕೆಶಿ, ಎಐಸಿಸಿ ಅಧ್ಯಕ್ಷರನ್ನು ಭೇಟಿಯಾಗುವ ಸಾಧ್ಯತೆ ಇದೆ.. ಈಗಾಗ್ಲೇ ದೆಹಲಿಯಲ್ಲಿರುವ ಡಿ.ಕೆ.ಶಿವಕುಮಾರ್, ಅಲ್ಲಿನ ಚುನಾವಣೆ ಗೆಲ್ಲಲು ಗ್ಯಾರಂಟಿ ಘೋಷಣೆ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯರನ್ನೇ ಬಿಟ್ಟು ಡಿಕೆಶಿಗೆ ಮಾತ್ರ ಪ್ರಚಾರಕ್ಕೆ ಆಹ್ವಾನ ನೀಡಿದ್ದು ಎಲ್ಲರಿಗೂ ಅಚ್ಚರಿ ತರಿಸಿದೆ. ಈಗ ಡಿನ್ನರ್ ಮೀಟಿಂಗ್ನಿಂದ ಬೂದಿ ಮುಚ್ಚಿದಂತಾಗಿರುವ ಡಿಕೆಶಿ, ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿ, ರಾಜ್ಯ ಬೆಳವಣಿಗೆಗಳ ಬಗ್ಗೆ ದೂರು ನೀಡುವ ಸಾಧ್ಯತೆ ಇದೆ..
ಒಟ್ನಲ್ಲಿ, ಡಿಕೆಶಿಗೆ ಸಿಎಂ ಗಾದಿ ತಪ್ಪಿಸಲೆಂದೇ ಸಿದ್ದು ಬಣ ತಂತ್ರ ನಡೆಸಿದೆ ಅಂತಾ ಭಾರಿ ಚರ್ಚೆಯಾಗುತ್ತಿದೆ.. ಅತ್ತ ಡಿಕೆಶಿ ಆಸೆ ಪಟ್ಟಂತೆ ಸಿಎಂ ಆಗಿಯೇ ಸಿದ್ಧ ಅಂಥಾ ಪಣ ತೊಟ್ಟು ಹೈಕಮಾಂಡ್ ಮಟ್ಟದಲ್ಲೇ ಲಾಬಿ ನಡೆಸ್ತಿದ್ದಾರೆ. ಇದೆಲ್ಲದರ ಮಧ್ಯೆ ಮುಂದಿನ ರಾಜಕೀಯ ಬೆಳವಣಿಗೆಗಳು ಏನಾಗುತ್ತವೆ ಅನ್ನೋದು ಕುತೂಹಲ ಕೆರಳಿಸಿದೆ.
ಬ್ಯೂರೋ ರಿಪೋರ್ಟ್ ಬಾಸ್ ಟಿವಿ ಕನ್ನಡ.