Delhi Election

ದೆಹಲಿ ವಿಧಾನಸಭೆ(Delhi Legislative Assembly) ಚುನಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್‌ ಆಗಿದೆ.. ಫೆಬ್ರವರಿ 05ರಂದು ಮತದಾನ ನಡೆಯಲಿದ್ದು, ಫೆಬ್ರವರಿ 08ರಂದು ಫಲಿತಾಂಶ ಪ್ರಕಟಗೊಳ್ಳಲಿದೆ ಅಂತಾ ಚುನಾವಣಾ ಆಯೋಗ ಮಾಹಿತಿ ನೀಡಿದೆ. ದೆಹಲಿಯಲ್ಲಿ ಒಟ್ಟು 70 ವಿಧಾನಸಭಾ ಕ್ಷೇತ್ರಗಳಿದ್ದು, 58 ಸಾಮಾನ್ಯ ಕ್ಷೇತ್ರಗಳಾಗಿವೆ. 12 ಕ್ಷೇತ್ರಗಳಿಗೆ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ ಅಂತಾ ಚುನಾವಣಾ ಆಯುಕ್ತ ರಾಜೀವ್‌ಕುಮಾರ್‌ (Rajiv Kumar)ಹೇಳಿದರು.. ಕೇಂದ್ರಾಡಳಿತ ಪ್ರದೇಶವಾದ ದೆಹಲಿಯಲ್ಲಿ ಒಟ್ಟು 1 ಕೋಟಿ 55 ಲಕ್ಷದ 24 ಸಾವಿರದ 858 ನೋಂದಾಯಿತ ಮತದಾರರಿದ್ದಾರೆ.

Delhi Election

ಪುರುಷ ಮತದಾರರ ಸಂಖ್ಯೆ 84 ಲಕ್ಷ 49 ಸಾವಿರದ 645 ಹಾಗೂ ಮಹಿಳಾ ಮತದಾರರ ಸಂಖ್ಯೆ 71 ಲಕ್ಷ 73 ಸಾವಿರದ 952. ಈ ಬಾರಿ ದೆಹಲಿಯಲ್ಲಿ ಯುವ ಮತದಾರರ ಸಂಖ್ಯೆ 25.89 ಲಕ್ಷವಿದ್ದು ಮೊದಲ ಬಾರಿಗೆ ಮತ ಚಲಾಯಿಸಲು ಅರ್ಹರಾದವರ ಸಂಖ್ಯೆ 2.08 ಲಕ್ಷವಿದೆ. ಇನ್ನು, ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಎಎಪಿ – ಕಾಂಗ್ರೆಸ್‌ – ಬಿಜೆಪಿ ಪಕ್ಷಗಳು ಇಲ್ಲಿ ಚುನಾವಣಾ ಕಣದಲ್ಲಿರುವ ಪ್ರಮುಖ ಪಕ್ಷಗಳಾಗಿದ್ದು, ಈ ಪಕ್ಷಗಳ ನಡುವೆ ತೀವ್ರ ಪೈಪೋಟಿ ಇದೆ.

Share.
Leave A Reply