Site icon BosstvKannada

Dawood Ibrahim: ಜನರಿಗಿಂತ ಉಗ್ರರ ಮೇಲೆಯೇ ಪಾಕ್‌ಗೆ ಪ್ರೀತಿ: ಹೇಡಿ ದಾವೂದ್ ಇಬ್ರಾಹಿಂ ಮತ್ತೆ ಎಸ್ಕೇಪ್?

Dawood Ibrahim

Dawood Ibrahim : ಮತ್ತೆ ನರಿ ಬುದ್ಧಿ ತೋರಿಸಿದ ಪಾಕ್‌, ಜನರಿಗಿಂತ ಉಗ್ರರ ಮೇಲೆಯೇ ಪಾಕ್‌ಗೆ ಪ್ರೀತಿ, ಭಾರತದ ದಾಳಿಗೆ ಮೊತ್ತೊಬ್ಬ ಮೋಸ್ಟ ವಾಂಟೆಡ್ ಹಂತಕ‌ ಎಸ್ಕೇಪ್ ಆಗಿದ್ದಾನೆ.

ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ದೇಶದ ಅಮಾಯಕ ಜನರು ಬಲಿಯಾಗಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಭಾರತದ ಸೈನಿಕರು ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಮೂಲಕ ಉಗ್ರ ನೆಲೆಗಳನ್ನ ಉಡೀಸ್‌ ಮಾಡಿ, ಭಾರತಕ್ಕೆ ಬೇಕಿದ್ದ ಮೋಸ್ಟ್ ವಾಂಟೆಡ್ ಉಗ್ರ ಮಸೂದ್‌ ಅಜರ್‌ ಕುಟುಂಬವನ್ನೇ ಸರ್ವನಾಶ ಮಾಡಿದ್ದು, ಈಗ ಮತ್ತೊಬ್ಬ ನರ ಹೇಡಿ ಮೋಸ್ಟ್ ವಾಂಟೆಡ್ Dawood Ibrahim ಭಾರತದ ದಾಳಿಗೆ ಹೆದರಿ ಪಾಕ್‌ ಬಿಟ್ಟು ಓಡಿಹೋಗಿದ್ದಾನೆ ಎನ್ನಲಾಗಿದೆ.

ಭಾರತೀಯ ಸೇನೆಯ ಆಪರೇಷನ್ ಸಿಂಧೂರ್ ಮತ್ತು ಡ್ರೋನ್ ದಾಳಿಯ ನಂತರ ಪಾಕಿಸ್ತಾನಿ ನಾಗರಿಕರಲ್ಲಿ ಅಪಾರ ಭೀತಿ ಉಂಟಾಗಿದೆ. ಪಾಕಿಸ್ತಾನದಲ್ಲಿ ಅಡಗಿಕೊಂಡಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕೂಡ ಭಾರತದ ದಾಳಿಯಿಂದ ಕಂಗೆಟ್ಟಿದ್ದಾನೆ. ಗುರುವಾರ ರಾತ್ರಿ ಭಾರತೀಯ ಸೇನೆಯು ಲಾಹೋರ್, ಕರಾಚಿ ಮತ್ತು ಇಸ್ಲಾಮಾಬಾದ್‌ನಲ್ಲಿ ಡ್ರೋನ್ ದಾಳಿ ನಡೆಸಿತು. ಆದ್ದರಿಂದ, ಪಾಕಿಸ್ತಾನವು ಭೂಗತ ಪಾತಕಿಗಳಾದ Dawood Ibrahim ಛೋಟಾ ಶಕೀಲ್ ಮತ್ತು ಮುನ್ನಾ ಜಿಂಗಾ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ. ಭಾರತದ ಭಯದಿಂದ ಈ ಮೂವರು ಭೂಗತ ಪಾತಕಿಗಳು ಪಾಕಿಸ್ತಾನದಿಂದ ಬೇರೆ ದೇಶಕ್ಕೆ ಪರಾರಿಯಾಗಿರಬಹುದು ಎನ್ನಲಾಗಿದೆ.

ಕಳೆದ ಹಲವಾರು ವರ್ಷಗಳಿಂದ, ಭೂಗತ ಪಾತಕಿ Dawood Ibrahim ಪಾಕಿಸ್ತಾನದಲ್ಲಿ ಇದ್ದಾನೆ ಎಂಬ ಮಾತು ಕೇಳಿಬರುತ್ತಿದೆ. ಪಾಕಿಸ್ತಾನ ಅವನನ್ನು ರಕ್ಷಿಸಿ ಕರಾಚಿಯಲ್ಲಿ ಸುರಕ್ಷಿತವಾಗಿರಿಸಿದೆ ಎಂದು ಹೇಳಲಾಗುತ್ತದೆ. ಕಳೆದ ಕೆಲವು ದಿನಗಳಿಂದ ಭಾರತೀಯ ಸೇನೆಯು ಪಾಕಿಸ್ತಾನದ ಒಳಭಾಗದೊಳಗೆ ಡ್ರೋನ್ ದಾಳಿಗಳನ್ನು ನಡೆಸಿದೆ. ಭಾರತೀಯ ಸೇನೆಯು ಲಾಹೋರ್‌ನಲ್ಲಿ ವಾಯು ರಕ್ಷಣಾ ವ್ಯವಸ್ಥೆಯನ್ನು ಸಹ ನಾಶಪಡಿಸಿತು. ಹೀಗಾಗಿ ಇಸ್ಲಾಮಾಬಾದ್ ಮತ್ತು ಕರಾಚಿಯಲ್ಲೂ ಭಾರತ ದಾಳಿ ನಡೆಸಿದೆ. ಹೀಗಾಗಿ, ಭಯಗೊಂಡಿರುವ ದಾವೂದ್ ಇಬ್ರಾಹಿಂ ಕರಾಚಿ ಬಿಟ್ಟು ಬೇರೆ ಜಾಗಕ್ಕೆ ಪಲಾಯನ ಮಾಡಿದ್ದಾನೆ ಎನ್ನಲಾಗಿದೆ.

Also Read: Pak MP Calls Shehbaz Sharif A “Coward” : ʼಶೆಹಬಾಜ್ ಷರೀಫ್ ಮೋದಿ ಹೆಸರನ್ನೂ ಉಚ್ಚರಿಸಲಾರರು’: ಅವರ ಪ್ರಧಾನಿಯನ್ನೇ ‘ಹೇಡಿ’ ಎಂದ ಪಾಕ್‌ ಸಂಸದ

ಒಟ್ಟಿನಲ್ಲಿ ವಿನಾಶ ಕಾಲೇ ವಿಪರೀತ ಬುದ್ಧಿ ಎಂಬಂತೆ, ಅಲ್ಲಿನ ಜನ ಅನ್ನ, ನೀರಿಗೆ ಬಿಕ್ಷೆ ಬೇಡುತ್ತಿದ್ರೆ, ಇತ್ತ ಪಾಪಿ ಪಾಕ್‌ಗೆ ತನ್ನ ಜನರಿಗಿಂತ, ಹಂತಕರು, ಉಗ್ರರ ಮೇಲೆ ಲವ್‌ ಜಾಸ್ತಿಯಾದಂತಿದೆ. ಉಗ್ರರನ್ನ, ಹಂತಕರನ್ನ ಬೇರೆ ಕಡೆ ಓಡಿ ಹೋಗಲು ಸಹಾಯ ಮಾಡಿರೋದು ನಾಚಿಕೆ ಗೇಡಿನ ಸಂಗತಿ ಅನ್ನೋದರಲ್ಲಿ ತಪ್ಪೇ ಇಲ್ಲ.

Exit mobile version