ಭಾರತೀಯ ಸೇನೆಯಿಂದ ಮಕಾಡೆ ಮಲಗಿದ ಪಾಕ್‌ಗೆ ಸದ್ಯ ತನ್ನದೇ ದೇಶದಲ್ಲೇ ನಾಗರಿಕರು ಮತ್ತು ಸಂಸದರಿಂದ ಮುಖಭಂಗಕ್ಕೆ ಗುರಿಯಾಗುತ್ತಿದೆ. ಭಾರತದೊಂದಿಗಿನ ಗಡಿ ಉದ್ವಿಗ್ನತೆಯ ನಡುವೆಯೇ ಪಾಕಿಸ್ತಾನದ ಸಂಸದರೊಬ್ಬರು ತಮ್ಮ ಪ್ರಧಾನಿಯನ್ನೆ ತರಾಟೆಗೆ ತೆಗೆದುಕೊಂಡಿದ್ದಾರೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ “ಹೇಡಿತನ”ದ ಬಗ್ಗೆ ಅವರ ದೇಶದ ಸಂಸದರೊಬ್ಬರು ಟೀಕಿಸಿದ್ದಾರೆ.
ಪಾಕಿಸ್ತಾನ ಪಿಎಂ ಶೆಹಬಾಜ್ ಷರೀಫ್ ಭಾರತೀಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ಎದುರಿಸಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ಸಂಸತ್ತಿನಲ್ಲೇ ಮೋದಿಯವರನ್ನ ಹೊಗಳಿದ್ದಾರೆ. ಇದ್ರಿಂದ ಪಾಕಿಸ್ತಾನ ಪಿಎಂ ಶೆಹಬಾಜ್ ಷರೀಫ್‌ಗೆ ತೀವ್ರ ಮುಜಗರ ಉಂಟಾಗಿದೆ.
“ಭಾರತದ ವಿರುದ್ಧ ನಿಮ್ಮಿಂದ ಒಂದೇ ಒಂದು ಹೇಳಿಕೆ ಬಂದಿಲ್ಲ. ಗಡಿಯಲ್ಲಿ ನಿಂತಿರುವ ಪಾಕಿಸ್ತಾನಿ ಸೈನಿಕರು ಸರ್ಕಾರದ ಧೈರ್ಯದಿಂದ ಹೋರಾಡುತ್ತದೆ ಎಂದು ನಿರೀಕ್ಷಿಸುತ್ತಾರೆ. ನಿಮ್ಮ ನಾಯಕ ಮೋದಿಯ ಹೆಸರನ್ನು ಸಹ ಉಚ್ಚರಿಸಲಾಗದ ಹೇಡಿಯಾಗಿರುವಾಗ, ಗಡಿಯಲ್ಲಿ ಹೋರಾಡುವ ಸೈನಿಕನಿಗೆ ನೀವು ಯಾವ ಸಂದೇಶವನ್ನು ನೀಡುತ್ತಿದ್ದೀರಿ?” ಎಂದು ಪಾಕಿಸ್ತಾನಿ ಸಂಸತ್ತಿನ ಸದನದಲ್ಲಿ ಸಂಸದ ಕಿಡಿಕಾರಿದ್ದು, ಶೆಹಬಾಜ್ ಷರೀಫ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
Also Read: Namma Metro : ಮೆಟ್ರೋ ನಿಲ್ದಾಣಗಳಲ್ಲಿ ‘AI’ ಸೆಕ್ಯೂರಿಟಿ..!
ಪಾಕಿಸ್ತಾನದ ಸೇನೆಯು ಭಾರತದ ಮೇಲೆ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಸರಣಿ ದಾಳಿ ನಡೆಸಿದೆ. ಇದಕ್ಕೆ ಪ್ರತಿದಾಳಿ ನಡೆಸಿದ ನಾವುಗಳು ಉದ್ದೇಶಿತ ಗುರಿಗಳನ್ನು ಹೊಡೆಯುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದೇವೆ ಅಂತಾ ಪಾಕಿಸ್ತಾನ ಸಂಸತ್ತಿನಲ್ಲಿ ಮಾತನಾಡುವಾಗ ಹೇಳಿದ್ದ ವಿಡಿಯೋ ಜಾಗತಿಕವಾಗಿ ಸದ್ದು ಮಾಡುತ್ತಿದೆ.
ಸದ್ಯ ಪಾಕ್ ಸಂಸದ ತಮ್ಮ ಪಿಎಂ ಷರೀಫ್ ಬಗ್ಗೆ ವೈಯಕ್ತಿಕ ಹೇಳಿಕೆ ನೀಡಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಇದಕ್ಕೆ ನೆಟ್ಟಿಗರಿಂದ ಕಮೆಂಟ್‌ಗಳ ಸುರಿಮಳೆಯೇ ಹರಿದಿದೆ.

