ಸುಬ್ಬ, ಸುಬ್ಬಿ ದೂರ.. ದೂರ!
ಡಿ ಬಾಸ್ ಅಡ್ಡದಿಂದ ಬಂತು ಬ್ರೇಕಿಂಗ್ ನ್ಯೂಸ್!, 10 ವರ್ಷದ ಸ್ನೇಹ, ಸಂಬಂಧಕ್ಕೆ ಶೀಘ್ರದಲ್ಲೇ ಎಳ್ಳುನೀರು!, ದೊಡ್ಡಮಟ್ಟದ ಪರಿಹಾರಕ್ಕೆ ಮುಂದಾದ ದರ್ಶನ್!, ಅಷ್ಟಕ್ಕೂ ಡಿ ಬಾಸ್ ಅಡ್ಡದಲ್ಲಿ ಆಗಿದ್ದೇನು? ಸುಬ್ಬ, ಸುಬ್ಬಿಯ ಕತೆಯೇನು? ಅಂತ ಹೇಳ್ತೀವಿ.. ಅದಕ್ಕೂ ಮೊದಲು ಬಾಸ್ ಟಿವಿ ಕನ್ನಡ ಚಾನೆಲ್ನ್ನು ಸಬ್ಸ್ಕ್ರೈಬ್ ಮಾಡಿ..



ಕನ್ನಡ ಸಿನಿಮಾ (Kannada cinema)ಇಂಡಸ್ಟ್ರಿಯ ಬಾಕ್ಸ್ ಅಫಿಸ್ ಸುಲ್ತಾನ ಅನ್ನೋ ಹೆಸರು ಪಡೆದಿದ್ದ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ನೂರಾರು ಸಮಸ್ಯೆ ಎದುರಿಸುತ್ತಿದ್ದಾರೆ. ರೇಣುಕಾಸ್ವಾಮಿ (Renukaswamy)ಕೊಲೆ ಕೇಸ್ ದರ್ಶನ್ರನ್ನು ನೂರಾರು ಸಂಕಷ್ಟಕ್ಕೆ ದೂಡಿದೆ. ಕೋಟಿ ಕೋಟಿ ಅಭಿಮಾನಿಗಳು ಕೂಡ ಚಿಂತೆಯಲ್ಲಿ ಮುಳುಗಿದ್ದಾರೆ. ಹೀಗಿದ್ದಾಗಲೇ, ಪವಿತ್ರಾಗೌಡಗೆ 50 ಕೋಟಿ ರೂಪಾಯಿ ಪರಿಹಾರ ಕೊಡಲು ಡಿಬಾಸ್ ದರ್ಶನ್ ಮುಂದಾಗಿದ್ದಾರೆ ಅನ್ನೋ ಸುದ್ದಿ ಸಖತ್ ಸೆನ್ಷೇಷನ್ ಸೃಷ್ಟಿಸಿದೆ..
ಹೌದು… ಡಿ-ಬಾಸ್(D-boss) ವಿರುದ್ಧ ಸಾಕಷ್ಟು ಸಮಸ್ಯೆ ಹೆಗಲು ಏರುತ್ತಿದೆ. ಅದರಲ್ಲೂ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆದ ನಂತರ ಡಿ-ಬಾಸ್ ದರ್ಶನ್ಗೆ ಬೆನ್ನು ನೋವು ಹೆಚ್ಚಾಗಿ ನರಳಾಡಿದ್ದರು. ಹೀಗೆ ಶುರುವಾಗಿದ್ದ ಬೆನ್ನು ನೋವು ಕೊನೆಗೆ ಕಾಲಿಗೂ ಹರಡಿ ಆಪರೇಷನ್ ಮಾಡಿಸಬೇಕಾದ ಹಂತಕ್ಕೆ ಬಂದು ನಿಂತಿದೆ. ಮನೆಯವರು ಕೂಡ ಪವಿತ್ರರಿಂದ ದೂರ ಇರಲು ಖಡಕ್ ಎಚ್ಚರಿಕೆ ನೀಡಿದ್ದಾರೆ. ಸದ್ಯ ಇದನ್ನೆಲ್ಲ ಗಮನದಲ್ಲಿ ಇಟ್ಟುಕೊಂಡಿರುವ ದರ್ಶನ್, ಪವಿತ್ರಾ ಗೌಡರಿಂದ ಶಾಶ್ವತವಾಗಿ ದೂರ ಇರುಲು ನಿರ್ಧಾರ ಮಾಡಿದ್ದು, ಪವಿತ್ರಾ ಗೌಡಗೆ 50 ಕೋಟಿ ರೂಪಾಯಿ ಪರಿಹಾರ ಕೊಡಲು ದರ್ಶನ್ ಮುಂದಾಗಿದ್ದಾರೆ ಅಂಥಾ ಸುದ್ದಿ ಹರಿದಾಡ್ತಿದೆ..
ಆದೇನೆ ಆಗಲಿ… ಡಿ-ಬಾಸ್ ದರ್ಶನ್ ತೂಗುದೀಪ್(Darshan Thugudeep) ಅವರು, ಪವಿತ್ರಾ ಗೌಡ ಪರಿಚಯ ಆಗಿ ಬರೋಬ್ಬರಿ 10 ವರ್ಷ ಕಳೆದಿದೆ. ಪವಿತ್ರಾ ಗೌಡ ತಮ್ಮ ಮೊದಲ ಗಂಡನಿಂದ ದೂರವಾದ ನಂತರ 2014ರ ಸಮಯದಲ್ಲಿ ಬುಲ್ ಬುಲ್ ಸಿನಿಮಾ ಶೂಟಿಂಗ್ ಸಮಯದಲ್ಲಿ ದರ್ಶನ್ಗೆ ಪರಿಚಯ ಆಗಿದ್ದು, ಆ ನಂತರ ಇಬ್ಬರೂ ಒಟ್ಟಿಗೆ ಇದ್ದಾರೆ ಅನ್ನೋ ಮಾತಿದೆ.. ಸದ್ಯ ಕಷ್ಟ, ಸಮಸ್ಯೆಗಳು ಡಿ ಬಾಸ್ ಹೆಗಲೇರಿದ್ದು, ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆದ್ದು, ಬೆಳ್ಳಿಪರದೆ ಮೇಲೆ ಮತ್ತೆ ಅಬ್ಬರಿಸಲಿ ಅನ್ನೋದೆ ಅಭಿಮಾನಿಗಳ ಆಶಯ.