Site icon BosstvKannada

ಡಿ-ಮಾರ್ಟ್‌ ಭರ್ಜರಿ ಆಫರ್‌, 50% ಡಿಸ್ಕೌಂಟ್‌ನಲ್ಲಿ ಮಾರಾಟ(D-Mart has offer 50% off)

ಮಧ್ಯಮ ವರ್ಗದವರ ಪಾಲಿಗೆ ಡಿ-ಮಾರ್ಟ್ ಅಂದರೆ ಒಂದು ವರದಾನ.. ಕೈಗೆಟುಕುವ ಬೆಲೆಗೆ ಮನೆಗೆ ಬೇಕಾದ ಎಲ್ಲಾ ವಸ್ತುಗಳು ಒಂದೇ ಸೂರಿನಡಿ ಸಿಗೋದ್ರಿಂದ, ಡಿ-ಮಾರ್ಟ್ ಜನರ ಅಚ್ಚುಮೆಚ್ಚಿನ ತಾಣವಾಗಿ ಮಾರ್ಪಟ್ಟಿದೆ. ಸಾಮಾನ್ಯ ಅಂಗಡಿಗಳಿಗೆ ಹೋಲಿಸಿದರೆ ಡಿ-ಮಾರ್ಟ್ ಯಾವಾಗಲೂ ಕಡಿಮೆ ಬೆಲೆಗೆ ಮತ್ತು ಭರ್ಜರಿ ರಿಯಾಯಿತಿಯಲ್ಲಿ ವಸ್ತುಗಳನ್ನು ನೀಡುತ್ತೆ.

ಇದೀಗ ಡಿಮಾರ್ಟ್ ತನ್ನ ಗ್ರಾಹಕರಿಗೆ ಮತ್ತೊಂದು ಭರ್ಜರಿ ಗುಡ್‌ ನ್ಯೂಸ್‌ ಕೊಟ್ಟಿದೆ. ಅರ್ಧಕ್ಕಿಂತ ಕಡಿಮೆ ಬೆಲೆಯಲ್ಲಿ ವಸ್ತುಗಳನ್ನು ಮಾರಾಟ ಮಾಡುತ್ತಿದೆ. ಮನೆ ಬಳಕೆ ವಸ್ತುಗಳು, ಅಡುಗೆ ಪಾತ್ರೆಗಳು ಹೀಗೆ ಎಲ್ಲದರ ಮೇಲೂ ಭಾರಿ ರಿಯಾಯಿತಿ ನೀಡಲಾಗಿದೆ. ಅರ್ಧಕ್ಕಿಂತ ಕಡಿಮೆ ಬೆಲೆ ಎಂಬ ಆಫರ್‌ಅನ್ನು ಡಿಮಾರ್ಟ್‌ ಘೋಷಿಸಿದ್ದು, ವಾರಾಂತ್ಯದಲ್ಲಿ ಶಾಪಿಂಗ್‌ ಮಾಡುವವರಿಗೆ ಇದು ಬಂಪರ್‌ ಆಫರ್.‌

ಇನ್ನು ಯಾವ್ದಕ್ಕೆಲ್ಲಾ ಆಫರ್‌ ಇದೆ ಅಂತಾ ನೋಡೋದಾದ್ರೆ, ಸನ್‌ಫೀಸ್ಟ್‌ ಡಾರ್ಕ್‌ ಫ್ಯಾಂಟಸಿ ಬಿಸ್ಕೆಟ್‌, ಬ್ರಿಟಾನಿಯಾ ಬಿಸ್ಕೆಟ್‌, ಬ್ರಿಟಾನಿಯಾ ಚೀಸ್‌ ಪ್ಯಾಕೆಟ್‌, ಟಾಯ್ಲೆಟ್‌ ಕ್ಲೀನರ್‌, ಸಫೋಲಾ ಮೀಲ್‌ ಮೇಕರ್‌, ಎಪಿಸ್‌ ಕ್ಲಾಸಿಕ್‌ ಖರ್ಜೂರ ಈ ರೀತಿ ಚಾಕಲೇಟ್‌ ಹಾಗೂ ಬಿಸ್ಕೆಟ್‌ಗಳ ಮೇಲೆ ಭಾರೀ ಡಿಸ್ಕೌಂಟ್‌ ಇದೆ. ಇನ್ನು, 4,800 ರೂಪಾಯಿ ಬೆಲೆಯ ೫ ಲೀಟರ್‌ನ ಕುಕ್ಕರ್‌ ಕೂಡ ಕೇವಲ 1,949ಕ್ಕೆ ಸಿಗ್ತಾ ಇದೆ. ಸೋ, ಹಬ್ಬದ ಶಾಪಿಂಗ್‌ ಮಾಡೋದಿಕ್ಕೆ ಹಾಗೆ ಹಣ ಉಳಿಸೋದಿಕ್ಕೆ ಡಿಮಾರ್ಟ್‌ ಬೆಸ್ಟ್‌ ಆಪ್ಷನ್‌ ಆಗಿದೆ.

Read Also : ನೀವು ಬೆಟ್ಟಿಂಗ್‌ ಆ್ಯಪ್‌ ಬಳಸ್ತೀರಾ.. ನಿಮಗೂ ಕಾದಿದೆ ಶಿಕ್ಷೆ..!

Exit mobile version