Site icon BosstvKannada

ನೀವು ಬೆಟ್ಟಿಂಗ್‌ ಆ್ಯಪ್‌ ಬಳಸ್ತೀರಾ.. ನಿಮಗೂ ಕಾದಿದೆ ಶಿಕ್ಷೆ..!

ಬೆಟ್ಟಿಂಗ್‌ ಆ್ಯಪ್‌ ಬಳಸುವವರು ಹಾಗೂ ಪ್ರಮೋಟ್‌ ಮಾಡುವವರಿಗೂ ಕೇಂದ್ರ ಸರ್ಕಾರ ಶಾಕ್‌ ನೀಡಿದೆ. ಇನ್ಮುಂದೆ ಆನ್‌ಲೈನ್‌ ಮೂಲಕ ಬೆಟ್ಟಿಂಗ್‌ ಕಟ್ಟೋದು ಅಥವಾ ಬೆಟ್ಟಿಂಗ್‌ ಆಪ್‌ಗಳನ್ನ ಪ್ರಮೋಟ್‌ ಮಾಡೋದು ಶಿಕ್ಷಾರ್ಹ ಅಪರಾಧ ಪರಿಗಣಿಸಿರುವ ಕೇಂದ್ರ ಸರ್ಕಾರ, ಇದಕ್ಕೆ ಕಡಿವಾಣ ಹಾಕಲು ಸಜ್ಜಾಗಿದೆ. ಕೇಂದ್ರ ಕ್ಯಾಬಿನೆಟ್‌ನಲ್ಲಿ ಆನ್‌ಲೈನ್‌ ಗೇಮಿಂಗ್‌ ಹಾಗೂ ಬೆಟ್ಟಿಂಗ್‌ ತಡೆಗಟ್ಟುವ ಮಸೂದೆಗೆ ಅನುಮೋದನೆ ನೀಡಲಾಗಿದ್ದು, ನಾಳೆ ಲೋಕಸಭೆಯಲ್ಲಿ ಬಿಲ್‌ ಮಂಡನೆ ಮಾಡುವ ಸಾಧ್ಯತೆ ಇದೆ. ಕಳೆದ ಕೆಲ ತಿಂಗಳುಗಳಿಂದ ಆನ್‌ಲೈನ್‌ ಫ್ರಾಡ್‌ ಪ್ರಕರಣಗಳು ಹೆಚ್ಚಾಗ್ತಾ ಇವೆ.

ಬೆಟ್ಟಿಂಗ್‌ ಆ್ಯಪ್‌ಗಳು ಬ್ಯಾನ್‌..!

ಅಲ್ಲದೇ ಸಾಕಷ್ಟು ಸೆಲೆಬ್ರಿಟೀಸ್‌ ಹಾಗೂ ಇನ್‌ಫ್ಲುಯೆನ್ಸರ್ಸ್‌ ಬೆಟ್ಟಿಂಗ್‌ ಆಪ್‌ಗಳನ್ನ ಪ್ರಮೋಟ್‌ ಮಾಡ್ತಿದ್ದಾರೆ. ಇದ್ರಿಂದ ಅವರ ಫಾಲೋವರ್ಸ್‌ ಕೂಡ ಉತ್ತೇಜನಕ್ಕೊಳಗಾಗ್ತಿದ್ದಾರೆ. ಎಷ್ಟೋ ಮಂದಿ ಹಣ, ಆಸ್ತಿ ಕಳೆದುಕೊಂಡು ಬೀದಿಪಾಲಾಗ್ತಿದ್ದಾರೆ. ಈ ಕಾರಣದಿಂದಾಗಿ ಆನ್‌ಲೈನ್‌ ಬೆಟ್ಟಿಂಗ್‌ ಮೇಲೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. ಇನ್ನು, ಹಣದ ಆಸೆಯಿಂದಾಗಿ ಯುವಕರು, ವಿದ್ಯಾರ್ಥಿಗಳು ಆನ್‌ಲೈನ್‌ ಗೇಮಿಂಗ್‌ ದಾಸರಾಗ್ತಿದ್ದಾರೆ. ಹೀಗಾಗಿ ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಕಾನೂನು ಜಾರಿಗೊಳಿಸಲು ಮಸೂದೆಯನ್ನ ಮಂಡಿಸಿದೆ.

ಪ್ರಮೋಟ್‌ ಮಾಡುವವರಿಗೂ ಶಿಕ್ಷೆ?

ಹೀಗಾಗಿ ಆನ್‌ಲೈನ್‌ ಗೇಮಿಂಗ್ಅನ್ನ ಕೂಡ ರೆಗ್ಯುಲೇಟ್‌ ಮಾಡಲು 40% GST ವಿಧಿಸಲಾಗ್ತಿದೆ. ಅಲ್ಲದೇ, ಇನ್ಮುಂದೆ ಆನ್‌ಲೈನ್‌ ಗೇಮಿಂಗ್‌ ಹಾಗೂ ಬೆಟ್ಟಿಂಗ್‌ ಮೇಲೆ ಪೆನಾಲ್ಟಿ ಕೂಡ ಬೀಳುತ್ತೆ. ಜೊತೆಗೆ ಬ್ಯಾನ್‌ ಆಗುವ ಸಾಧ್ಯತೆ ಕೂಡ ಇದೆ. ಹಾಗೆ ಈ ಆಪ್‌ಗಳನ್ನ ಎಂಡೋರ್ಸ್‌ ಮಾಡುವ ಸೆಲೆಬ್ರಿಟೀಸ್‌ಗೆ ಕೂಡ ಸರ್ಕಾರ ಚಾಟಿ ಬೀಸಿದ್ದು, ಈ ಆಪ್‌ಗಳನ್ನ ಎಂಡೋರ್ಸ್‌ ಮಾಡದಂತೆ ಸೂಚನೆ ನೀಡಿದೆ.

Real Also : ವಿಧಾನಸಭೆಯಲ್ಲಿ ಗಿಗ್‌ ಕಾರ್ಮಿಕರ ಮಸೂದೆ ಅಂಗೀಕಾರ..!

Exit mobile version