

ಚನ್ನಪಟ್ಟಣ ಚೆಸ್ ಆಟದಲ್ಲಿ ಗೆಲ್ಲೋದು ಯಾರು ಅಂತಾ ಇಡೀ ರಾಜ್ಯದಲ್ಲಿ ಬಿಸಿ ಬಿಸಿ ಚರ್ಚೆ ನಡೀತಿದೆ. ಚನ್ನಪಟ್ಟಣದ ಮತದಾರರ ಮನದಾಳ ನವೆಂಬರ್ 23ಕ್ಕೆ ಗೊತ್ತಾಗುತ್ತೆ. ಆದ್ರೆ ಅದಕ್ಕೂ ಮೊದಲೇ ಚನ್ನಪಟ್ಟಣದಲ್ಲಿ ಗೆಲ್ಲೋರು ಯಾರು ಅಂತಾ ಹಿಂಟ್ ಸಿಕ್ಕಾಗಿದೆ. ಗೆಲ್ಲೋರು ಯಾರು ಅಂತೀರಾ. ನಿಮ್ಮ ಬಾಸ್ ಟಿವಿ ತೋರಿಸ್ತಿದೆ ನೋಡಿ ಚನ್ನಪಟ್ಟಣ ಉಪ ಚುನಾವಣೆ ಗೆಲುವಿನ ಪಕ್ಕಾ ಲೆಕ್ಕಾಚಾರದ ಸ್ಟೋರಿ.
ನವೆಂಬರ್ 13ರಂದು ಚನ್ನಪಟ್ಟಣದ ಮತದಾರರು ತಮ್ಮ ಕ್ಷೇತ್ರದ ಶಾಸಕ ಯಾರಾಗ್ಬೇಕು ಅಂತಾ ನಿರ್ಧರಿಸಿ ಮತ ಹಾಕಿದ್ದಾರೆ. ಕ್ಷೇತ್ರದಲ್ಲಿ ಹಿಂದೆಂದೂ ಆಗದಂತಹ ಸಂಖ್ಯೆಯಲ್ಲಿ ಮತದಾನ ನಡೆದಿದೆ. ಸಾರ್ವತ್ರಿಕ ಚುನಾವಣೆಯಲ್ಲಿ ಶೇಕಡ 85.27ರಷ್ಟು ಮತದಾನ ನಡೆದಿತ್ತು. ಆದ್ರೆ ಬೈ ಎಲೆಕ್ಷನ್ ನಲ್ಲಿ ಅದಕ್ಕಿಂತ ಶೇಕಡ 3.5ರಷ್ಟು ಮತದಾನ ಹೆಚ್ಚಾಗಿದೆ. ಅಂದ್ರೆ ಶೇಕಡ 88.80ರಷ್ಟು ಮತದಾನ ಆಗಿದೆ. ಒಟ್ಟು 2,32,996 ಮತದಾರರ ಪೈಕಿ 2,06,866 ಮತದಾರರು ಹಾಕಿರೋ ವೋಟ್ ಈಗ ಬ್ಯಾಲೆಟ್ ಬಾಕ್ಸ್ ನಲ್ಲಿ ಭದ್ರವಾಗಿದೆ. ಇನ್ನೊಂದೆಡೆ ಗೆಲ್ಲೋದು ಯಾರು ಅಂತಾ ಚನ್ನಪಟ್ಟಣ ಸೇರಿ ಇಡೀ ರಾಜ್ಯದಲ್ಲಿ ಸಿಕ್ಕಾಪಟ್ಟೆ ಚರ್ಚೆ ಶುರುವಾಗಿದೆ.
YES! ರಾಜ್ಯದಲ್ಲಿ ನಡೆದ 3 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಸಂಡೂರು, ಶಿಗ್ಗಾಂವಿಗಿಂತ ಚನ್ನಪಟ್ಟಣದ ಚದುರಂಗದ ವೀರ ಯಾರು ಅನ್ನೋದೆ ಕುತೂಹಲವಾಗಿದೆ. ನಿಮ್ಮ ಬಾಸ್ ಟಿವಿ ಗ್ರೌಂಡ್ ರಿಪೋರ್ಟ್ ಹಾಗೂ ಸಿಕ್ಕಿರೋ ಪಕ್ಕಾ ಹಿಂಟ್ ಪ್ರಕಾರ ಗ್ಯಾರಂಟಿ ಸರ್ಕಾರದ ಕೈ ಅಭ್ಯರ್ಥಿ ಸಿ.ಪಿ.ಯೋಗೀಶ್ವರ್ ಗೆ ಹ್ಯಾಟ್ರಿಕ್ ಸೋಲು ಪಕ್ಕಾ ಅನ್ನಿಸ್ತಿದೆ. ಮೋದಿ ಸರ್ಕಾರದಲ್ಲಿ ಮಂತ್ರಿಯಾಗಿರೋ ಕುಮಾರಸ್ವಾಮಿ ಮಗ ನಿಖಿಲ್ ವಿರುದ್ಧ ನನಗೆ ಸೋಲಾಗಬಹುದು ಅಂತಾ ಈಗಾಗಲೇ ಯೋಗೀಶ್ವರ್ ಕಂಗಾಲಾಗಿದ್ದಾರೆ. ಮತದಾನದ ಮರುದಿನವೇ ಮೊದಲು ಸುದ್ದಿಗೋಷ್ಠಿ ನಡೆಸಿದ ನಿಖಿಲ್ ಗೆಲ್ಲೋದು ನಾನೇ ಅಂತಾ ವಿಶ್ವಾಸ ವ್ಯಕ್ತಪಡಿಸಿದ್ರೆ, ನಿಖಿಲ್ ಬಳಿಕ ಸುದ್ದಿಗೋಷ್ಠಿ ನಡೆಸಿದ ಯೋಗೀಶ್ವರ್, ನನ್ನ ಗೆಲುವು ಯಾಕೆ ಕಷ್ಟ ಅಂತಾ ಅಳಲು ತೋಡಿಕೊಂಡಿದ್ದಾರೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಆಪ್ತ ಸಚಿವ ಜಮೀರ್ ಆಡಿದ ಮಾತುಗಳಿಂದ ನನಗೂ ಆಘಾತವಾಗಿದೆ.
ಪ್ರಾದೇಶಿಕ ಪಕ್ಷದ ಕುಮಾರಸ್ವಾಮಿ, ದೇವೇಗೌಡರನ್ನ ವೈಯಕ್ತಿಕವಾಗಿ ಯಾರಾದ್ರೂ ಕೆಟ್ಟದಾಗಿ ಬೈದ್ರೆ, ಒಕ್ಕಲಿಗ ಸಮುದಾಯ ಸಹಿಸೋದು ಕಷ್ಟ ಅಂತಾ ಹೇಳಿದ್ರು. ಸೋ, ಈ ಸಲವೂ ನಾನು ಗೆಲ್ಲೋದು ಡೌಟ್ ಅಂತಾ ಯೋಗೀಶ್ವರ್ ಮನಸ್ಸಲ್ಲಿ ಇರೋ ಥರಾ ಕಾಣ್ತಿದೆ. ಇದುವರೆಗೂ 10 ಬಾರಿ ಚುನಾವಣೆಯಲ್ಲಿ ಸೆಣಸಾಡಿರೋ ಯೋಗೇಶ್ವರ್, ಈ ಹಿಂದಿನ 2 ಚುನಾವಣೆಗಳಲ್ಲಿನ ಸೋಲಿನ ಬಗ್ಗೆ ಮತದಾನದ ಮರುದಿನವೇ ಹೇಳಿಕೊಂಡಿದ್ರು. ಆಡಳಿತಾರೂಢ ಕಾಂಗ್ರೆಸ್ ಪಕ್ಷದಿಂದಲೇ ಚುನಾವಣೆಗೆ ಸ್ಫರ್ಧಿಸಿದ್ರೂ ಸಹ ಕುಮಾರಸ್ವಾಮಿ ತೆರವುಗೊಳಿಸಿದ ಜೆಡಿಎಸ್ ಭದ್ರಕೋಟೆ ಚನ್ನಪಟ್ಟಣದಲ್ಲಿ ಅವರ ಮಗ ನಿಖಿಲ್ ಗೆಲ್ಲಬಹುದು ಅನ್ನೋ ಅನುಮಾನ ಸೈನಿಕನಿಗೆ ಇದೆ.
ಚನ್ನಪಟ್ಟಣದಲ್ಲಿ ಕಾಂಗ್ರೆಸ್ ನಿಂದ ಡಿಕೆಶಿ ಅಥವಾ ಡಿ.ಕೆ.ಸುರೇಶ್ ನಿಲ್ಲಬಹುದು ಅಂತಾ ಎಲ್ಲಾ ಅಂದುಕೊಳ್ತಿದ್ದಾಗ, ಕೊನೇ ಕ್ಷಣದ ಆಪರೇಷನ್ ನಲ್ಲಿ BJPಯಿಂದ ಯೋಗೀಶ್ವರ್ ನಿಲ್ಲಿಸಿದ್ರು ಡಿಕೆ ಬ್ರದರ್ಸ್ ಹಾಗೂ ಸಿಎಂ ಸಿದ್ದರಾಮಯ್ಯ. ಇನ್ನೊಂದೆಡೆ ಕುಮಾರಸ್ವಾಮಿಯಿಂದ ತೆರವಾದ ಕ್ಷೇತ್ರದಲ್ಲಿ ಮಗ ನಿಖಿಲ್ ನಿಲ್ಲಲಿ ಅಂತಾ ದೋಸ್ತಿ ಬ್ರದರ್ಸ್ ನಿಖಿಲ್ ನಿಲ್ಲಿಸಿದ್ರು. ಎರಡೂ ಕಡೆಯವರು ಈಗ ಗೆಲ್ಲೋದು ನಾವೇ ಅಂತಾ ವಾದದ ಜತೆಗೆ ಬೆಟ್ಟಿಂಗ್ ಆಡ್ತಿದ್ದಾರೆ. ಒಟ್ಟಾರೆ, ಚನ್ನಪಟ್ಟಣದ ಜನ ಗೆಲ್ಲಿಸಿರೋದು ಯಾರನ್ನ ಅಂತಾ ನವೆಂಬರ್ 23ಕ್ಕೆ ಅಧಿಕೃತವಾಗಿ ಗೊತ್ತಾಗಲಿದೆ.