BosstvKannada

Bengaluru Rain Alert: ಒಂದೇ ಮಳೆಗೆ ಮುಳುಗಿಹೋಯ್ತು ‘ಬೆಂದ’ ಕಾಳೂರು! : ಭಾರೀ ಮಳೆಗೆ ಓರ್ವ ಮಹಿಳೆ ಬಲಿ

Bengaluru Rain Alert: ಮಳೆಗಾಲ ಆರಂಭಕ್ಕೂ ಮುನ್ನ ರಾಜ್ಯ ರಾಜಧಾನಿ ಬೆಂಗಳೂರಿನ ಮೇಲೆ ವರುಣದೇವ ಮುನಿಸಿಕೊಂಡಿದ್ದು, ಅಬ್ಬರಿಸಿ ಬೊಬ್ಬರೆಯುತ್ತಿದ್ದಾನೆ. ನಿನ್ನೆ ಸುರಿದ ಒಂದೇ ಮಳೆಗೆ ಸಿಲಿಕಾನ್‌ ಸಿಟಿ ತತ್ತರಿಸಿ ಹೋಗಿದೆ.. ಸತತ ಒಂದು ವಾರದಿಂದ ಸಂಜೆ ಆದ್ರೆ ಸಾಕು ಮಳೆ ಸುರಿಯುತ್ತಿದೆ. ಈಗಾಗಲೇ ಮಳೆಯಿಂದ ಜನರು ಬೇಸತ್ತು ಹೋಗಿದ್ದಾರೆ. ಇನ್ನೂ ಬೇಸಿಗೆ ಕಾಲನೇ ಕಳೆದಿಲ್ಲ, ಅಂತಹದ್ರಲ್ಲಿ ಈಗಲೇನೆ ಭರ್ಜರಿ ಮಳೆ ಸುರಿಯುತ್ತಿದ್ದು, ಜನರು ಹೈರಾಣಾಗಿದ್ದಾರೆ.

Bengaluru Rain Alert: ಹಲವೆಡೆ ಭಾರೀ ಮಳೆಯಾಗ್ತಿದೆ. ಮಳೆರಾಯ ರಾತ್ರಿ ಇಡೀ ಆರ್ಭಟಿಸಿದ್ದಾನೆ. ಹೀಗಾಗಿ ನಗರದಾದ್ಯಂತ ದಾಖಲೆಯ ಮಳೆ ಸುರಿದಿದೆ. ರಾತ್ರಿಯಿಂದ ಬೆಳಗ್ಗೆ 5:30ರವರೆಗೆ ನಗರ ವ್ಯಾಪ್ತಿಯಲ್ಲಿ 104 ಮಿ.ಮೀ ಮಳೆಯಾಗಿದೆ. ಕಳೆದ 10 ವರ್ಷದಲ್ಲಿ ಮೇ ತಿಂಗಳಲ್ಲಿ ದಾಖಲಾದ ಅತಿಹೆಚ್ಚು ಮಳೆ ಇದಾಗಿದೆ. ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಅಂಡರ್‌ ಪಾಸ್‌ಗಳು, ರಸ್ತೆಗಳಲ್ಲಿ ನೀರು ನಿಂತು ನದಿಯಂತಾಗಿವೆ. ಅಲ್ಲದೇ ನಗರದ ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

Also Read: IPL 2025 : ಪ್ಲೇ ಆಫ್‌ಗೆ 3 ಟೀಂ ಎಂಟ್ರಿ, ಇನ್ನೊಂದು ಟೀಂ ಯಾವ್ದು ಗೊತ್ತಾ?

ನಗರದ ಕೆ.ಆರ್. ಸರ್ಕಲ್, ಕಾರ್ಪೊರೇಷನ್, ಮೆಜೆಸ್ಟಿಕ್ , ಕೆ.ಆರ್. ಮಾರುಕಟ್ಟೆ, ಜಯನಗರ, ವಿಜಯನಗರದಲ್ಲಿ ರಾತ್ರಿಇಡೀ ಭಾರೀ ಮಳೆಯಾಗಿದೆ. ಅಲ್ಲದೇ ಚಂದ್ರಲೇಔಟ್, ರಾಜಾಜಿನಗರ, ಆರ್.ಟಿ ನಗರ, ಹೆಬ್ಬಾಳ, ಕೋರಮಂಗಲ, ಕಾಮಾಕ್ಷಿ ಪಾಳ್ಯದಲ್ಲಿ ವರುಣ ಆರ್ಭಟಿಸಿದ್ದು, ಬೊಮ್ಮನಹಳ್ಳಿ, ನಾಯಂಡಹಳ್ಳಿ, ಆರ್.ಆರ್ ನಗರದಲ್ಲಿ ಭಾರಿ ಜೋರು ಮಳೆಯಾಗಿದೆ.

ಇನ್ನು ಈ ಭರ್ಜರಿ ಮಳೆಗೆ ಓರ್ವ ಮಹಿಳೆ ಸಾವನ್ನಪ್ಪಿದ್ದಾಳೆ. ಯಾದಗಿರಿ ಜಿಲ್ಲೆ ಶಹಾಪುರ ಮೂಲದವರಾದ ಶಶಿಕಲಾ, ಐ ಝಡ್ ಕಂಪನಿಯಲ್ಲಿ ಹೌಸ್ ಕೀಪಿಂಗ್ ಕೆಲಸಕ್ಕೆ ಹೋಗಿದ್ದರು. ಕೆಲಸದ ಸ್ಥಳದಲ್ಲಿದ್ದ ಕಾಂಪೌಂಡ್ ಗೋಡೆ ಕುಸಿದು ಶಶಿಕಲಾ ಸಾವನ್ನಪ್ಪಿದ್ದಾರೆ. ಇಡೀ ರಾತ್ರಿ ಸುರಿದ ಮಳೆಗೆ ಗೋಡೆ ನೆನೆದಿದ್ದರಿಂದ ಶಶಿಕಲಾ ಅವರ ಮೇಲೆ ಬಿದ್ದಿದೆ.

ಘಟನಾ ಸ್ಥಳಕ್ಕೆ ಮಹದೇವಪುರ ಪೊಲೀಸರು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಶಶಿಕಲಾ ಕುಟುಂಬಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.

Exit mobile version