IPL 2025 ರೋಚಕ ಘಟ್ಟ ತಲುಪಿದೆ. ದೆಹಲಿ ವಿರುದ್ಧ ಪಂದ್ಯ ಗೆದ್ದಿರುವ ಗುಜರಾತ್ ಟೈಟನ್ಸ್ ಟೀಂ ತಾನು ಫ್ಲೇ ಆಫ್‌ಗೆ ಹೋಗೋದರ ಜೊತೆಗೆ ಇನ್ನೆರಡು ತಂಡಗಳನ್ನೂ ಕರೆದೊಯ್ದಿದೆ.. ಹೌದು.. ಭಾನುವಾರದ ಡಬಲ್ ಹೆಡ್ಡರ್ನಲ್ಲಿ ರಾಜಸ್ತಾನ್ ರಾಯಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಗೆಲುವು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗುಜರಾತ್ ಟೈಟನ್ಸ್ ಭರ್ಜರಿ ಜಯ ಸಾಧಿಸುವ ಮೂಲಕ ಪ್ಲೇ ಆಫ್ ಹೋಗುವ ತಂಡಗಳು ಯಾವ್ಯಾವು ಅನ್ನೋದು ಕನ್ಫರ್ಮ್ ಆಗಿದೆ.
IPL 2025: ಹೌದು… ಭಾನುವಾರದ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಗುಜರಾತ್ ಟೈಟನ್ಸ್ ಗೆದ್ದಿದ್ದು, ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟಿದೆ.. ಇದರ ಜೊತೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ಕೂಡ ಫೈನಲ್ ರೌಂಡ್‌ಗೆ ಲಗ್ಗೆ ಇಟ್ಟಿವೆ.. ಗುಜರಾತ್ ಟೈಟನ್ಸ್, ಆರ್ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ಪಾಯಿಂಟ್ ಟೇಬಲ್ನಲ್ಲಿ ಅಗ್ರ ಮೂರು ಸ್ಥಾನಗಳನ್ನು ಪಡೆಯುವ ಮೂಲಕ ಪ್ಲೇ ಆಫ್ ಅನ್ನು ಕನ್ಫರ್ಮ್ ಮಾಡಿಕೊಂಡಿವೆ. ಉಳಿದ ತಂಡಗಳು ಕಡಿಮೆ ಅಂಕಗಳನ್ನು ಹೊಂದಿರುವುದರಿಂದ ಪ್ಲೇ ಆಫ್ನಿಂದ ಹೊರ ಬಿದ್ದಿವೆ.
ಇನ್ನು, ಪ್ಲೇ ಆಫ್‌ನ 4ನೇ ಸ್ಥಾನದ ಪ್ಲೇ ಆಫ್ಗಾಗಿ 3 ತಂಡಗಳ ನಡುವೆ ಭರ್ಜರಿ ಪೈಪೋಟಿ ನಡೆದಿದೆ. ಮುಂದಿನ ಎಲ್ಲ ಪಂದ್ಯಗಳನ್ನು ಮುಂಬೈ, ದೆಹಲಿ, ಲಖನೌ ತಂಡಗಳು ಗೆದ್ದರೆ ಮಾತ್ರ 4ನೇ ಸ್ಥಾನದ ಪ್ಲೇ ಆಫ್ ದಕ್ಕುತ್ತದೆ… ಈಗಾಗ್ಲೇ ಮುಂಬೈ ಇಂಡಿಯನ್ಸ್ 14 ಅಂಕ ಪಡೆದಿದ್ದು ಇನ್ನು ಎರಡು ಮ್ಯಾಚ್ಗಳು ಬಾಕಿ ಉಳಿದಿವೆ.. ಈ ಎರಡರಲ್ಲೂ ಗೆಲುವು ಪಡೆದರೆ ಒಟ್ಟು 18 ಅಂಕಗಳಿಂದ ಪ್ಲೇ ಆಫ್‌ಗೆ ಬರುತ್ತದೆ. ಒಳ್ಳೆಯ ರನ್ರೇಟ್ ಇದ್ದರೆ ಮುಂಬೈಗೆ ಅವಕಾಶ ಸಿಗುವುದು ದಟ್ಟವಾಗಿದೆ..
ಇನ್ನೊಂದೆಡೆ, ಡೆಲ್ಲಿ ಕ್ಯಾಪಿಟಲ್ಸ್ 13 ಅಂಕ ಪಡೆದಿದ್ದು ಇನ್ನೂ 2 ಪಂದ್ಯ ಆಡಲಿದೆ. ಈ ಎರಡನ್ನು ಗೆದ್ದರೆ 17 ಅಂಕ ಪಡೆದು ನೆಟ್ ರನ್ರೇಟ್ ಮೇಲೆ ಪ್ಲೇಆಫ್ ನಿಗದಿಯಾಗುತ್ತದೆ. ಇನ್ನೊಂದ್ಕಡೆ, ಲಖನೌ ತಂಡಕ್ಕೂ ಪ್ಲೇ ಆಫ್‌ಗೆ ಎಂಟ್ರಿ ಕೊಡುವ ಅವಕಾಶವಿದೆ.. ಆದ್ರೆ, ಲಖನೌ ತಂಡ ಪ್ಲೇ ಆಫ್‌ಗೆ ಬರಬೇಕು ಅಂದರೆ ದೊಡ್ಡ ಪವಾಡವೇ ನಡೆಯಬೇಕು. ಯಾಕಂದ್ರೆ, ಉಳಿದ 3 ಪಂದ್ಯಗಳನ್ನು ಗೆಲ್ಲಬೇಕು. ಜೊತೆಗೆ ಹೆಚ್ಚಿನ ರನ್ರೇಟ್ ಇರಬೇಕು. ಅಂದಾಗ ಮಾತ್ರ ಉಳಿದ ತಂಡಗಳ ಫಲಿತಾಂಶದ ಮೇಲೆ ಲಕ್ನೋ ತಂಡದ ಪ್ಲೇಆಫ್ ನಿರ್ಧಾರ ಆಗುತ್ತದೆ..
Also Read: KL Rahul Century: ಐಪಿಎಲ್ 50ನೇ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಅಬ್ಬರ, ಕೊಹ್ಲಿ ದಾಖಲೆ ಉಡೀಸ್ !
ಒಟ್ನಲ್ಲಿ ಐಪಿಎಲ್ ಸೀಸನ್ 18ರ ಪ್ಲೇ ಆಫ್‌ಗೆ ಮೂರು ತಂಡಗಳು ಎಂಟ್ರಿ ಕೊಟ್ಟಿದ್ದು, ಇನ್ನೊಂದು ಸ್ಥಾನಕ್ಕೆ ಮೂರು ತಂಡಗಳ ನಡುವೆ ಭರ್ಜರಿ ಫೈಟ್ ಏರ್ಪಟ್ಟಿದೆ.. ಮುಂಬೈಗೆ ಅವಕಾಶ ಜಾಸ್ತಿ ಇದ್ದು, ದೆಹಲಿ, ಲಖನೌ ತಂಡಗಳಿಗೆ ತುಸು ಅವಕಾಶ ಕಡಿಮೆ ಇದೆ.. ಆದ್ರೆ, ಅಂತಿಮವಾಗಿ ಯಾವ ತಂಡ ಪ್ಲೇ ಆಫ್‌ಗೆ ಹೋಗುತ್ತೆ ಅನ್ನೋದು ಕಾದು ನೋಡ್ಬೇಕು.

