Site icon BosstvKannada

Banu Mushtaq : ಕನ್ನಡದ ಕೃತಿಗೆ ಮೊದಲ ಪ್ರತಿಷ್ಟಿತ ಬೂಕರ್‌ ಪ್ರಶಸ್ತಿ : ಯಾವುದಾ ಕೃತಿ?

Banu Mushtaq

ಕನ್ನಡದ ಖ್ಯಾತ ಸಾಹಿತಿ Banu Mushtaq ಕನ್ನಡದ ಕೃತಿಗೆ ಮೊದಲ ಪ್ರತಿಷ್ಟಿತ ಬೂಕರ್‌ ಪ್ರಶಸ್ತಿ : ಯಾವುದಾ ಕೃತಿ? ಅವರ ಸಣ್ಣ ಕತೆಗಳ ಅನುವಾದಿತ ಸಂಕಲನ ‘ಹಾರ್ಟ್‌ ಲ್ಯಾಂಪ್‌’ ಅಂತಾರಾಷ್ಟ್ರೀಯ ಬುಕರ್‌ ಪ್ರಶಸ್ತಿಗೆ ಭಾಜನವಾಗಿದೆ. ದೀಪಾ ಭಸ್ತಿ ಅವರು ಬಾನು ಮುಷ್ತಾಕ್‌ ಅವರ ಕತೆಗಳನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಅದ್ರಲ್ಲಿ ಹಾರ್ಟ್‌ ಲ್ಯಾಂಪ್‌ ಕೂಡ ಒಂದು.  ಇದು 2023ರಲ್ಲಿ ‘ಹೆಣ್ಣು ಹದ್ದಿನ ಸ್ವಯಂವರ’ ಹೆಸರಿನಲ್ಲಿ ಕನ್ನಡದಲ್ಲಿ ಈ ಕಥಾ ಸಂಕಲನ ಪ್ರಕಟವಾಗಿತ್ತು. ನಂತರ ಇಂಗ್ಲಿಷ್‌ ಭಾಷೆಗೆ ದೀಪಾ ಭಸ್ತಿ ಅವರು ಅನುವಾದಿಸಿದ್ರು. ಇದೇ ಮೊದಲ ಬಾರಿಗೆ ಕನ್ನಡದಿಂದ ಅನುವಾದಗೊಂಡ ಕೃತಿಯು ಬೂಕರ್‌ ಪ್ರಶಸ್ತಿಗೆ ಆಯ್ಕೆಯಾಗಿದೆ.

ಇನ್ನು ಈ ಸಂತಸದ ವಿಚಾರವನ್ನ ಸಾಹಿತಿ ಬಾನು ಮುಷ್ತಾಕ್‌ ಅವರು ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಬಾನು ಮುಷ್ತಾಕ್‌ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

ಬೂಕರ್ ಪ್ರಶಸ್ತಿಗೆ ಭಾಜನರಾದ Banu Mushtaq ಕ್ ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅಭಿನಂದನೆ ತಿಳಿಸಿದ್ದಾರೆ. ಕನ್ನಡ ಸಾಹಿತ್ಯದ ಸಂವೇದನಾಶೀಲ ಲೇಖಕಿ ಶ್ರೀಮತಿ ಬಾನು ಮುಷ್ತಾಕ್ ಅವರಿಗೆ ಅಂತರರಾಷ್ಟ್ರೀಯ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿ ಎಂದು ಪರಿಗಣಿಸಲ್ಪಟ್ಟಿರುವ ಬೂಕರ್ ಪ್ರಶಸ್ತಿ ದೊರೆತಿರುವುದು ಸಮಸ್ತ ಕನ್ನಡಿಗರಿಗೆ ಹೆಮ್ಮೆ ತಂದಿದೆ. ಸರ್ಕಾರದ ಪರವಾಗಿ ಹಾಗೂ ಇಡೀ ನಾಡಿನ ಜನರ ಪರವಾಗಿ ಭಾನು ಮುಷ್ತಾಕ್ ಅವರಿಗೆ ಹಾರ್ದಿಕವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

ಅವರ ಎದೆಯ ಹಣತೆ ಎಂಬ ಕಥಾ ಸಂಕಲನ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನವಾಗಿದೆ. ಕನ್ನಡದ ಈ ಕಥೆಯನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದು ಪ್ರಶಸ್ತಿಗೆ ಕಾರಣರಾದ ಅನುವಾದಕಿ ಶ್ರೀಮತಿ ದೀಪ ಬಸ್ತಿ ಅವರು ಸಹ ಅಭಿನಂದನೆಗೆ ಅರ್ಹರು. ಅವರಿಗೂ ಸಮಸ್ತ ಕನ್ನಡಿಗರ ಪರವಾಗಿ ಧನ್ಯವಾದ ಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

ಅಲ್ಪಸಂಖ್ಯಾತ ಜನಾಂಗದ ಪ್ರತಿನಿಧಿಯಾಗಿ ಮಹಿಳೆಯರ ಬವಣೆಗಳನ್ನು ತಮ್ಮ ಸಾಹಿತ್ಯದ ಮೂಲಕ ಜಗತ್ತಿನ ಮುಂದೆ ತೆರೆದಿಟ್ಟ ಬಾನು ಮುಷ್ತಾಕ್ ಅವರು ಈ ಪ್ರಶಸ್ತಿಗೆ ಭಾಜನರಾದ ಮೊಟ್ಟ ಮೊದಲ ಕನ್ನಡದ ಲೇಖಕಿ ಯಾಗಿದ್ದಾರೆ. ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಅಂತರರಾಷ್ಟ್ರೀಯ ಮನ್ನಣೆ ದೊರಕಿಸಿದ ಅವರ ಈ ಸಂಭ್ರಮದಲ್ಲಿ ನಾವೆಲ್ಲರೂ ಭಾಗಿಯಾಗೋಣ ಎಂದು ಸಚಿವ ಶಿವರಾಜ ತಂಗಡಗಿ ತಮ್ಮ ಅಭಿನಂದನಾ ಸಂದೇಶದಲ್ಲಿ ತಿಳಿಸಿದ್ದಾರೆ.

Also Read: ಕರ್ನಾಟಕ ನಮಗೆ ಉದಾತ್ತ ಉಡುಗೊರೆ ಕೊಟ್ಟಿದೆ : ಆಂಧ್ರ ಡಿಸಿಎಂ pawan kalyan

ಇನ್ನು ಅಂತರ ರಾಷ್ಟ್ರೀಯ ಭೂಕರ್ ಪ್ರಶಸ್ತಿ ಪಡೆದ ಬಾನು ಮುಷ್ತಾಕ್ ಅವರಿಗೆ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಅವರು ಕೂಡ ಅಭಿನಂದನೆ ತಿಳಿಸಿದ್ದಾರೆ. ಕನ್ನಡದ ಸಂವೇದನಾಶೀಲ ಲೇಖಕಿ ಶ್ರೀಮತಿ ಭಾನು ಮುಷ್ತಾಕ್ ರವರು ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನರಾಗಿರುವುದು ಭಾರತೀಯರಿಗೆ ಅದರಲ್ಲಿಯೂ ವಿಶೇಷವಾಗಿ ಸಮಸ್ತ ಕನ್ನಡಿಗರಿಗೆ ಅತ್ಯಂತ ಹೆಮ್ಮೆಯ ಸಂಗತಿ. ಅವರಿಗೆ ಸಾಹಿತ್ಯ ಲೋಕದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಹೇಳಿದ್ದಾರೆ.

ಈ ಪ್ರಶಸ್ತಿಗೆ ಭಾನು ಮುಸ್ತಾಕ್ ಅವರ ಜೊತೆ ಅವರ ಕಥಾ ಸಂಕಲನವನ್ನು ಅನುವಾದಿಸಿದ ಶ್ರೀಮತಿ ದೀಪ ಬಾಸ್ತಿ ಅವರು ಸಹ ಅಭಿನಂದನೆಗೆ ಅರ್ಹರು. ಅವರಿಗೂ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ , ಕಳೆದ ವಾರದಷ್ಟೇ ಕನ್ನಡ ಪುಸ್ತಕ ಪ್ರಾಧಿಕಾರ ಭಾನು ಮುಷ್ತಾಕ್ ಅವರ ಹಸೀನಾ ಮತ್ತು ಇತರ ಕಥೆಗಳು ಕೃತಿ ಕುರಿತ ಹಾಗೆ ಅಂಗಳದಲ್ಲಿ ತಿಂಗಳ ಪುಸ್ತಕ ಕಾರ್ಯಕ್ರಮ ಆಯೋಜನೆ ಮಾಡಿ ಭಾನು ಮುಷ್ತಾಕ್ ಅವರಿಗೆ ಬೂಕರ್ ಪ್ರಶಸ್ತಿ ಬರಲೆಂದು ಹಾರೈಸಿತ್ತು. ಅದೇ ಕಥಾ ಸಂಕಲನದಲ್ಲಿರುವ ಎದೆಯ ಹಣತೆ ಎಂಬ ಕಥೆ ಈ ಪ್ರತಿಷ್ಠಿತ ಪ್ರಶಸ್ತಿಗೆ ಪರಿಗಣಿಸಲ್ಪಟ್ಟಿದೆ. ನಮ್ಮ ಹಾರೈಕೆ ಈಡೇರಿದೆ. ಇದು ಅತ್ಯಂತ ಸಂತೋಷದ ಸಂಗತಿ ಎಂದು ಅವರು ತಿಳಿಸಿದ್ದಾರೆ.

Exit mobile version