
ವೈರಸ್ ತಡೆಗೆ ಆರೋಗ್ಯ ಇಲಾಖೆಯಿಂದ ಗೈಡ್ಲೈನ್ಸ್!
ಚೀನಾದಲ್ಲಿ ಆರ್ಭಟಿಸುತ್ತಿರುವ HMPV ವೈರಸ್(Virus) ಈಗ ಬೆಂಗಳೂರಿಗೂ ಕಾಲಿಟ್ಟಿದೆ.. ಬೆಂಗಳೂರಿನ 3 ತಿಂಗಳು ಹಾಗೂ 8 ತಿಂಗಳ ಮಕ್ಕಳಿಬ್ಬರಲ್ಲಿ HMPV ವೈರಸ್(Virus) ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರ ಬೆನ್ನಲ್ಲೇ ವೈರಸ್ ಕಟ್ಟಿ ಹಾಕಲು ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ.. ವೈರಸ್ ದಾಳಿಯನ್ನರಿತ ಆರೋಗ್ಯ ಇಲಾಖೆ ಹೊಸ ಗೈಡ್ಲೈನ್ಸ್ ರಿಲೀಸ್ ಮಾಡಿದೆ. ಹಾಗಾದ್ರೆ, ಆರೋಗ್ಯ ಇಲಾಖೆ ರಿಲೀಸ್ ಮಾಡಿರುವ ಗೈಡ್ಲೈನ್ಸ್ನಲ್ಲಿ ನೀವು ಏನೇನ್ ಮಾಡ್ಬೇಕು.? ಏನೇನ್ ಮಾಡಬಾರದು ಅಂತಾ ಹೇಳ್ತೀವಿ.
HMP ವೈರಸ್ ತಡೆಗೆ ರೂಲ್ಸ್ ಏನೇನು..?
ಬೆಂಗಳೂರಲ್ಲಿ ಇಬ್ಬರು ಮಕ್ಕಳಿಗೆ ವೈರಸ್ ಕಾಣಿಸಿಕೊಂಡ ಬೆನ್ನಲ್ಲೇ ರಾಜ್ಯ ಆರೋಗ್ಯ ಇಲಾಖೆ ಹೈಅಲರ್ಟ್ ಆಗಿದೆ.. ಈ ಹಿಂದೆ ಕೊರೊನಾಗೆ ರಿಲೀಸ್ ಮಾಡಿದಂತೆ ಈ ವೈರಸ್ಗೂ ಹೊಸ ರೂಲ್ಸ್ ಜಾರಿ ಮಾಡಿದೆ.
ಸೋಂಕಿನಿಂದ ದೂರ ಇರಲು ಹೀಗೆ ಮಾಡಿ
- ಕೆಮ್ಮುವಾಗ, ಸೀನುವಾಗ ಬಾಯಿ, ಮೂಗನ್ನು ಕರ್ಚೀಫ್ ಹಾಗೂ ಟಿಸ್ಯೂ ಪೇಪರ್ನಿಂದ ಮುಚ್ಚಿ
- ಆಗಾಗ ಕೈಗಳನ್ನು ಸೋಪ್ ಹಾಗೂ ಸ್ಯಾನಿಟೈಸರ್ನಿಂದ ತೊಳೆದುಕೊಳ್ಳಿ
- ಜನಸಂದಣಿ ಪ್ರದೇಶಗಳಿಂದ ದೂರವಿರಿ
- ಜ್ವರ (Fever), ಕೆಮ್ಮು(Cough), ಸೀನು (Sneeze)ಕಾಣಿಸಿಕೊಂಡಿದ್ರೆ ಸಾರ್ವಜನಿಕ ಸ್ಥಳಗಳಿಂದ ದೂರ ಇರಿ
- ನೀವು ಕಾಯಿಲೆಗೆ ತುತ್ತಾಗಿದ್ರೆ ಮನೆಯಲ್ಲೇ ಇರಿ
- ಹೆಚ್ಚು ನೀರು ಕುಡಿಯಿರಿ, ಪೋಷಕಾಂಶಯುಕ್ತ ಆಹಾರ ಸೇವಿಸಿ
ಕ್ರಮಗಳನ್ನು ಅನುಸರಿಸೋದರ ಜತೆಗೆ ಕೆಲವೊಂದಿಷ್ಟು ತಪ್ಪುಗಳನ್ನು ನೀವು ಮಾಡಲೇಬೇಡಿ ಅಂತಲೂ ಆರೋಗ್ಯ ಇಲಾಖೆ ಗೈಡ್ಲೈನ್ಸ್ನಲ್ಲಿ ತಿಳಿಸಿದೆ.
ಇವುಗಳನ್ನು ಮಾಡಲೇಬೇಡಿ
- ಕರವಸ್ತ್ರ ಹಾಗೂ ಟಿಸ್ಯೂ ಪೇಪರ್ಗಳ ಪುನರ್ಬಳಕೆ ಬೇಡ
- ಕಾಯಿಲೆಗೆ ತುತ್ತಾದವರ ಜತೆ ಸಂಪರ್ಕ, ಟವೆಲ್, ಬಟ್ಟೆ ಶೇರಿಂಗ್ ಬೇಡ
- ಪದೇಪದೆ ಕಣ್ಣು, ಮೂಗು, ಬಾಯಿ ಮುಟ್ಟಿಕೊಳ್ಳಬೇಡಿ
- ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬೇಡಿ
- ವೈದ್ಯರನ್ನು ಸಂಪರ್ಕಿಸದೇ ಸ್ವಯಂ ಚಿಕಿತ್ಸೆ ಬೇಡ
ಚೀನಾದಲ್ಲಿ ಹುಟ್ಟಿಕೊಂಡಿರುವ ಎಚ್ಎಂಪಿ ವೈರಸ್ ಈಗ ಬೆಂಗಳೂರಿಗೂ ಕಾಲಿಟ್ಟಾಯ್ತು.. ಇಲ್ಲೂ ಕೂಡ ಚೀನಾದಂತೆಯೇ ಈ ವೈರಸ್ ಭಯಾನಕ ದಾಳಿ ಮಾಡುತ್ತಾ ಅನ್ನೋ ಆತಂಕ ಎಲ್ಲರಲ್ಲೂ ಶುರುವಾಗಿದೆ. ಆದ್ರೆ, ಮುಂದೇನಾಗುತ್ತೋ ಪರಿಸ್ಥಿತಿ ದೇವರೇ ಬಲ್ಲ…