ಬೆಂಗಳೂರಿನಲ್ಲಿ ಬಿಟ್ಟೂ ಬಿಡದೆ ಭಾರಿ ಮಳೆಯಾಗುತ್ತಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ದಾಖಲೆಯ ಮಳೆಗೆ ಹಲವು ತಗ್ಗು ಪ್ರದೇಶಗಳು ಮುಳುಗಡೆಯಾಗಿದ್ದು ಜನ ಪರದಾಡುತ್ತಿದ್ದಾರೆ. ಮೇ 17 ರಂದು ಬೆಂಗಳೂರಿನಲ್ಲಿ ನಡೆಯಬೇಕಿದ್ದ RCB ಮತ್ತು ಕೆಕೆಆರ್ ನಡುವಿನ ಪಂದ್ಯ ಮಳೆಯಿಂದ ರದ್ದಾಗಿತ್ತು. ಮೇ 23ರಂದು ನಡೆಯಬೇಕಿದ್ದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯ ಕೂಡ ರದ್ದಾಗುವ ಆತಂಕವಿತ್ತು. ಈ ಬೆನ್ನಲ್ಲೇ ಬಿಸಿಸಿಐ ಮಹತ್ವದ ನಿರ್ಧಾರ ಮಾಡಿದೆ.
RCB: ಮೇ 23 ರಂದು ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ಹೈ-ವೋಲ್ಟೇಜ್ ಪಂದ್ಯ ನಡೆಯಲಿದೆ. ನಿಗದಿಯಂತೆ ಈ ಪಂದ್ಯವು ಬೆಂಗಳೂರಲ್ಲಿ ನಡೆಯಬೇಕಿತ್ತು. ಆದರೆ ಬೆಂಗಳೂರಲ್ಲಿ ಮಳೆರಾಯನ ಕಾಟ ಹೆಚ್ಚಾಗಿದ್ದು, ಆ ದಿನದ ಪಂದ್ಯವನ್ನು ಲಕ್ನೋಗೆ ಶಿಫ್ಟ್ ಮಾಡಲಾಗಿದೆ.
ಸಧ್ಯ ಹವಾಮಾನ ಇಲಾಖೆ ಮಳೆ ಸುರಿಯುವ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಪಂದ್ಯವನ್ನು ಲಕ್ನೋದ ಎಕನಾ ಮೈದಾನದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಮೇ 17 ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ಕೋಲ್ಕತ್ತ ವಿರುದ್ಧ ಪಂದ್ಯವಿತ್ತು. ಆದರೆ ಮಳೆಯಿಂದಾಗಿ ನಡೆಸಲು ಸಾಧ್ಯವಾಗಲಿಲ್ಲ.
Also Read: ಕರ್ನಾಟಕದಲ್ಲಿ 16 ಮಂದಿಗೆ COVID ಪಾಸಿಟಿವ್, ಮತ್ತೆ ಲಾಕ್ ಡೌನ್..?
ಪಂದ್ಯ ಕ್ಯಾನ್ಸಲ್ ಆದ ಹಿನ್ನೆಲೆಯಲ್ಲಿ ಎರಡೂ ತಂಡಗಳು ತಲಾ ಒಂದೊಂದು ಪಾಯಿಂಟ್ಸ್ ಹಂಚಿಕೊಂಡವು.ಮತ್ತೆ ಈ ರೀತಿ ಆಗಬಾರದು ಅನ್ನೋ ಉದ್ದೇಶದಿಂದ ಬೆಂಗಳೂರಿನ ಪಂದ್ಯವನ್ನು ಲಕ್ನೋಗೆ ಶಿಫ್ಟ್ ಮಾಡಲಾಗಿದೆ. ಲಕ್ನೋ ಸೂಪರ್ ಜೈಂಟ್ಸ್ ಜೊತೆ ಬೆಂಗಳೂರು ತಂಡ ಮೇ 27 ರಂದು ಪಂದ್ಯ ನಡೆಯಲಿದೆ.
ಇನ್ನು, ಐಪಿಎಲ್ ಅಂತಿಮಘಟ್ಟ ತಲುಪಿದ್ದು, ಮೇ 29 ರಿಂದ ಪ್ಲೇ-ಆಫ್ ಪಂದ್ಯಗಳು ನಡೆಯಲಿವೆ. ಜೂನ್ 3 ರಂದು ಫೈನಲ್ ಮ್ಯಾಚ್ ನಡೆಯಲಿದೆ.

