Site icon BosstvKannada

ಕರ್ನಾಟಕದಲ್ಲಿ 16 ಮಂದಿಗೆ COVID ಪಾಸಿಟಿವ್, ಮತ್ತೆ ಲಾಕ್ ಡೌನ್..?

COVID

ದೇಶದ ಮೇಲೆ ಮತ್ತೆ ಕೊರೋನಾ ಕರಿ ನೆರಳು ಬಿದ್ದಿದೆ. ಸತತ ಎರಡುವರೆ ವರ್ಷಗಳ ಕಾಲ ದೇಶವನ್ನ ಸ್ಮಶಾನ ಮಾಡಿದ್ದ COVID ಈಗ ಮತ್ತೆ ರಣಕೇಕೆ ಹಾಕುತ್ತಿದೆ. ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಇಬ್ಬರು ಸೋಂಕಿತ ವ್ಯಕ್ತಿಗಳ ಸಾವನ್ನಪ್ಪಿದ್ದು, ದೇಶದೆಲ್ಲೆಡೆ ಭಯದ ವಾತಾವರಣ ಸೃಷ್ಟಿದೆ. ಸಿಂಗಪುರದಲ್ಲಿ ಕೊರೋನಾ ಅಲೆ ಏರಿಕೆಯಾದಾಗ ಬೆನ್ನಲ್ಲೆ, ಭಾರತದಲ್ಲಿ 257 ಪ್ರಕರಣಗಳು ದಾಖಲಾಗಿದ್ದವು. ಈ ಭಾರತದಲ್ಲಿ ಮತ್ತೆ ಕೊರೋನಾ ಅಬ್ಬರಿಸುತ್ತಿದ್ದು ಜನರಲ್ಲಿ ಭಯದ ವಾತಾವರಣ ಶುರುವಾಗಿದೆ.

ಕರ್ನಾಟಕದಲ್ಲಿ 16 ಮಂದಿಗೆ COVID positive ದಾಖಲಾಗಿದ್ದು, ಆರೋಗ್ಯ ಇಲಾಖೆಯು ಆತಂಕ ಮತ್ತು ನಿರ್ಲಕ್ಷ್ಯ ಬೇಡವೆಂದು ಎಚ್ಚರಿಸಿದೆ. ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ, ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಹಾಗೂ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ತಿಳಿಸಿದೆ.

ಕೊರೋನಾ ವೈರಾಣುವಿನ ಓಮಿಕ್ರಾನ್‌ ರೂಪಾಂತರಿಯ ‘ಜೆಎನ್‌.1’ ಉಪತಳಿಯಿಂದ ಏಷ್ಯಾದಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿದೆ ಎಂದು ಅಮೆರಿಕದ ಜಾನ್ಸ್‌ ಹಾಪ್‌ಕಿನ್ಸ್‌ ಮೆಡಿಸಿನ್‌ ತಿಳಿಸಿದ್ದು, ದೇಶದ ದೊಡ್ಡ ದೊಡ್ಡ ನಗರಗಳಲ್ಲಿ ಕೊವಿಡ್ ಮಹಾಮಾರಿ ಹಬ್ಬುತ್ತಿದೆ.

Also Read: Banu Mushtaq ಬೂಕರ್‌ ಗರಿ! ಪ್ರಶಸ್ತಿ ಬೆಲೆ ಎಷ್ಟು..?

ಕೇರಳದಲ್ಲಿ 69, ಮಹಾರಾಷ್ಟ್ರ 44, ತಮಿಳುನಾಡು 34 ಮಂದಿಗೆ ಕೊರೋನಾ ಪಾಸಿಟಿವ್ ಕಂಡುಬಂದಿದ್ದು, ಗುಜರಾತ್‌, ದೆಹಲಿ, ಹರಿಯಾಣದಲ್ಲಿ ಕೂಡ ಕೊರೋನಾ ಸೋಂಕಿನ ಗುಣಲಕ್ಷಣಗಳು ಕಾಣಿಸಿಕೊಂಡಿವೆ ಎಂದು ವರದಿಯಾಗಿದೆ. ಈ ಕೊರೋನಾವು ದೇಶದಲ್ಲಿ ಮತ್ತೆ ಲಾಕ್ ಡೌನ್ ಭೀತಿ ಸೃಷ್ಟಿಸಿದ್ದು ಜನರು ಹೈರಾಣಾಗಿದ್ದಾರೆ.

Exit mobile version