Author: vikimasters

ಅಬ್ಬಬ್ಬಾ ಅಂದರೆ ಒಂದು ಕೋಣದ ಬೆಲೆ ಎಷ್ಟಿರಬಹುದು ಹೇಳಿ.. ೫ ಕೋಟಿ.. ೧೦ ಕೋಟಿ ಇರಬಹುದಾ? ಇದೇ ಜಾಸ್ತಿ.. ಇದಕ್ಕಿಂತರ ಜಾಸ್ತಿ ಇರೋಕೆ ಸಾಧ್ಯನೇ ಇಲ್ಲ ಅಂತಾ ನಿಮಗೆ ಅನ್ನಿಸಬಹುದು.. ಆದ್ರೆ, ನಿಮ್ಮ ಅಂದಾಜಿಗೂ ಮೀರಿದ ಬೆಲೆಯ ಕೋಣ ಇದೆ. ಅದರ ಬೆಲೆ ಕೇಳಿದ್ರೆ ನಿಮ್ಮ ತಲೆ ಗಿರ್ರ ಅನ್ನುತ್ತೆ.. ಅಬ್ಬಬ್ಬಾ ಇಷ್ಟೊಂದ ದುಬಾರಿನಾ ಅಂತಾ ನಿಬ್ಬೆರಗಾಗ್ತೀರಿ.. ಹಾಗಾದರೆ, ಆ ಕೋಣದ ಬೆಲೆ ಎಷ್ಟು ಅಂದ್ರೆ ಬರೋಬ್ಬರಿ ೨೩ ಕೋಟಿ ರೂಪಾಯಿ.. ಕೇಳೋಕೆ ಶಾಕ್‌ ಅನ್ನಿಸಬಹುದಲ್ಲ.. ಆದ್ರೂ ಇದೇ ಸತ್ಯ.. ನಿಜ.. ಈ ಕೋಣಕ್ಕೆ ಬರೋಬ್ಬರಿ 23 ಕೋಟಿ ರೂಪಾಯಿ ಅಂದ್ರೆ ನಂಬೋಕೆ ಆಗಲ್ಲ. ಅಷ್ಟೇ ಅಲ್ಲ.. ಮನುಷ್ಯರು ಡಯಟ್‌ ಮಾಡೊದನ್ನ ಕೇಳಿದ್ದಿವಿ ಆದ್ರೆ ಈ ಕೋಣವೂ ಡಯಟ್‌ ಮಾಡುತ್ತೆ.. ಹಾಗಾದ್ರೆ, ಈ ಕೋಣ ಎಲ್ಲಿದೆ? ಡಯಟ್‌ ವಿಧಾನ ಹೇಗೆ..! ಈ ದುಬಾರಿ ಕೋಣ ಇರೋದು ಹರಿಯಾಣ ರಾಜ್ಯದಲ್ಲಿ. ಇದರ ಹೆಸರು ಅನ್ಮೋಲ್‌ ಅಂತಾ. ಗಿಲ್‌ ಎಂಬ ವ್ಯಕ್ತಿ ಈ ಗೋಲ್ಡನ್‌…

Read More

ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನಲ್ಲಿ ಚುನಾವಣಾ ಕಾವು ಜೋರಾಗಿದೆ. ಇದರ ಮಧ್ಯೆ ಕಾಂಗ್ರೆಸ್‌-ಬಿಜೆಪಿ ನಾಯಕರ ವಾಗ್ಯುದ್ಧ ಭಾರಿ ಸದ್ದು ಮಾಡುತ್ತಿದೆ.. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಮಾತಿನ ಕದನ ಏರ್ಪಟ್ಟಿದೆ. ಮಹಾರಾಷ್ಟ್ರದ ಚುನಾವಣಾ ರ್ಯಾಲಿಯಲ್ಲಿ ಮಾತಾಡಿರುವ ಯೋಗಿ, ಮುಸ್ಲಿಂ ತುಷ್ಟೀಕರಣದ ಜೊತೆಗೆ ಕರ್ನಾಟಕದ ಇತಿಹಾಸ ಕೆದಕಿದ್ದಾರೆ. ಮುಸ್ಲಿಂ ಪರ ಮಾತನಾಡುವ ಖರ್ಗೆಗೆ ಯೋಗಿ ರಜಾಕಾರರನ್ನ ನೆನಪು ಮಾಡಿಸಿದ್ದಾರೆ. ನಿಮ್ಮ ತಾಯಿ ಸಹೋದರಿಯರನ್ನ ಕಗ್ಗೊಲೆ ಮಾಡಿದ ರಜಾಕಾರರು ನೆನಪಿದ್ದಾರಾ ಎಂಬ ರೀತಿಯ ಪ್ರಶ್ನೆಗಳನ್ನ ಮಾಡಿದ್ದಾರೆ. ರಜಾಕಾರರು ಈ ಹೆಸರನ್ನ ಅನೇಕ ಜನ ಕೇಳಿರಲಿಕ್ಕಿಲ್ಲ. ಹಾಗಾದರೆ ಈ ರಜಾಕಾರರು ಯಾರು? ಇವರ ಹಿನ್ನೆಲೆ ಏನು? ಹೈದ್ರಾಬಾದ್‌ ಕರ್ನಾಟಕ ಅಂದ್ರೆ ಈಗಿನ ಕಲ್ಯಾಣ ಕರ್ನಾಟಕದಲ್ಲಿ ರಜಾಕಾರರ ಅಟ್ಟಹಾಸ ಹೇಗಿತ್ತು. ಈಗಲೂ ಅಲ್ಲಿನ ಜನರಿಗೆ ರಜಾಕಾರರ ಹೆಸರು ಕೇಳಿದ್ರೆ ರಕ್ತ ಕುದಿಯುತ್ತೆ. ರಜಾಕಾರರು ಅಂದ್ರೆ ನರ ರೂಪದ ರಕ್ಕಸರು ಅಂದರೆ ತಪ್ಪಾಗಲ್ಲ. ಹೌದು ರಜಾಕಾರರು ಎಂಥಾ ಮತಾಂಧರಾಗಿದ್ರು ಅಂದ್ರೆ ಇವರ…

Read More

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಾ ಮಿತಿ ಮೀರಿದೆ.. ಇತ್ತ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಇದೇ ತರ ವಾಯು ಮಾಲಿನ್ಯದಿಂದ ಜನ ತತ್ತರಿಸುವ ದಿನಗಳು ದೂರವೇನಿಲ್ಲ… ಯಾಕಂದ್ರೆ ಬೆಂಗಳೂರು ಕೂಡ ಈಗ ವಾಯು ಮಾಲಿನ್ಯದಿಂದ ತೀರಾ ಹದಗೆಟ್ಟಿದೆ.. ಮಾತ್ರವಲ್ಲದೇ, ಜಲ ಮಾಲಿನ್ಯವೂ ಕೂಡ ಬೆಂಗಳೂರಿನ ಪ್ರಮುಖ ಸಮಸ್ಯೆಯಾಗಿ ಪರಿಣಮಿಸಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ, ದೆಹಲಿ ವಾಯು ಗುಣಮಟ್ಟ ಸೂಚ್ಯಂಕ 342 ತಲುಪಿದೆ. ಅತ್ಯಂತ ಕಳಪೆ ಮಟ್ಟದಲ್ಲಿ ಇದನ್ನ ಗುರುತಿಸಲಾಗಿದೆ. ಆದರೆ ಬೆಂಗಳೂರು ಈ ಕಳಪೆ ಮಟ್ಟದಲ್ಲಿ ಸಧ್ಯ ಇಲ್ಲದಿದ್ದರೂ ಮುಂದೆ ಇದು ಎಚ್ಚರಿಕೆ ಗಂಟೆಯಾಗಿದೆ. ನಗರದ ಅನೇಕ ಪ್ರದೇಶಗಳಲ್ಲಿ ಎಕ್ಯೂಐ ಮಟ್ಟ ಕಳಪೆ ವರ್ಗದಲ್ಲೇ ಮುಂದುವರೆದಿದ್ದು ನಗರ, ವಾಯು ಮಾಲಿನ್ಯ ಬಿಕ್ಕಟ್ಟಿನ ಪರಿಣಾಮ ಹೊಂದಿರುವುದನ್ನು ಪ್ರತಿಬಿಂಬಿಸುತ್ತಿದೆ. ವಾಯು ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನೆ ಹಾಗೂ ಸಂಶೋಧನಾ ವ್ಯವಸ್ಥೆ ಸಾರ್ವಜನಿಕರಿಗೆ ಈಗಾಗಲೇ ಎಚ್ಚರಿಕೆಯ ಸಂದೇಶ ರವಾನಿಸಿದೆ. ದೇಶದ ಪವಿತ್ರ ನದಿಗಳಲ್ಲಿ ಒಂದಾಗಿರುವ ಯಮುನಾ ವಾಯು ಮಾಲಿನ್ಯದ…

Read More

ಎರಡೂವರೆ ವರ್ಷಗಳಿಂದ ನಡೆಯುತ್ತಿರುವ ರಷ್ಯಾ ಉಕ್ರೇನ್‌ ಯುದ್ಧಕ್ಕೆ ಕೊನೆಗೂ ಬ್ರೇಕ್..‌ ಟ್ರಂಪ್‌ ಹೇಳಿದ ಆ ಒಂದು ಮಾತಿನಿಂದಲೇ ರಣಯುದ್ಧ ನಿಂತು ಹೋಗುತ್ತಾ? ಹಾಗಾದ್ರೆ, ಟ್ರಂಪ್‌ ಖಡಕ್‌ ವಾರ್ನಿಂಗ್‌ ಕೊಟ್ಟಿದ್ದು ಯಾರಿಗೆ..? ಟ್ರಂಪ್‌ ಎಚ್ಚರಿಕೆಗೆ ಹೆದರಿತಾ ಬಲಿಷ್ಠ ರಷ್ಯಾ..? ಒಂದೊಮ್ಮೆ ಯುದ್ಧ ನಿಂತು ಹೋದರೆ ಅಮೆರಿಕಕ್ಕೆ ಆಗುವ ಅತಿದೊಡ್ಡ ಲಾಭವೇನು? ಇದೆಲ್ಲವನ್ನೂ ಸಂಪೂರ್ಣವಾಗಿ ಹೇಳ್ತೀವಿ.. ರಷ್ಯಾ ಉಕ್ರೇನ್‌ ಶುರುವಾಗಿ ಎರಡೂವರೆ ವರ್ಷ ಕಳೆದಿದೆ. ಅಂದ್ರೆ ಮುಂದಿನ ವರ್ಷದ ಫೆಬ್ರವರಿಗೆ ಮೂರು ವರ್ಷ ಪೂರೈಸಲಿದೆ. ಎರಡೂ ದೇಶಗಳ ಯುದ್ಧ ದಾಹಕ್ಕೆ ಲೆಕ್ಕಕ್ಕೇ ಸಿಗದಷ್ಟು ಜನರ ಜೀವನ ಬಲಿಯಾಗಿದೆ.. ಸೈನಿಕರ ಬಲಿದಾನ ನಡೆದಿದೆ. ಪುಟ್ಟ ಮಕ್ಕಳಿಂದ ಹಿಡಿದು, ನಾಗರಿಕರವರೆಗೂ ಯುದ್ಧದ ಪರಿಣಾಮ ಎದುರಿಸಿದ್ದಾರೆ. ಅಷ್ಟೇ ಅಲ್ಲ.. ಈ ಯುದ್ಧ ಷೇರುಮಾರುಕಟ್ಟೆಯ ಭಾರಿ ಏರಿಳಿತಕ್ಕೂ ಕಾರಣವಾಗಿದೆ.. ಇಷ್ಟೊಂದು ಜಾಗತಿಕ ತಲ್ಲಣ ಸೃಷ್ಟಿಸಿರುವ ರಷ್ಯಾ-ಉಕ್ರೇನ್‌ ಕದನಕ್ಕೆ ಅಸಲಿ ಕಾರಣವಾದ್ರೂ ಏನು? ಝೆಲೆನ್‌ಸ್ಕಿ ಮೇಲೆ ಪುಟಿನ್‌ಗೆ ಕಡುಕೋಪ ಯಾಕೆ ಅನ್ನೋದನ್ನು ಮೊದಲು ನಿಮಗೆ ಹೇಳಲೇಬೇಕು.. ಉಕ್ರೇನ್‌ ನ್ಯಾಟೋ ಸೇರಿದ್ದಕ್ಕೆ ರಷ್ಯಾಗೆ…

Read More

ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ 7ನೇ ವಾರಕ್ಕೆ ಕಾಲಿಟ್ಟಿದೆ. ಈ ವಾರ ದೊಡ್ಮನೆಯಲ್ಲಿ ಸ್ಪರ್ಧಿಗಳನ್ನು ಜೋಡಿಗಳಾಗಿ ಪರಿವರ್ತನೆ ಮಾಡಿದ್ದಾರೆ. ಆದರೆ ಮನೆಯ ಯಾವ ಮೂಲೆಗೂ ಹೋದರು ಸ್ಪರ್ಧಿಗಳು ಪರಸ್ಪರ ಅಂಟಿಕೊಂಡು ಓಡಾಡಬೇಕು. ಮಿಸ್ ಆಗಿ ಜೋಡಿಗಳನ್ನು ಬಿಟ್ಟು ಹಾಗೇ ಹೋಗಿದ್ದೇ ಆದರೆ ಬಿಗ್ ಬಾಸ್ ಕಡೆಯಿಂದ ಬಿಗ್ ಶಿಕ್ಷೆ ಸಿಗೋದು ಗ್ಯಾರಂಟಿ. ಇನ್ನೂ ಮನೆಯಲ್ಲಿರೋ ಸ್ಪರ್ಧಿಗಳಿಗೆ ಬಿಗ್ ಬಾಸ್, ತಾವೇ ಜೋಡಿಗಳನ್ನು ಆಯ್ಕೆ ಮಾಡಿದ್ದಾರೆ. ಹಳ್ಳಿ ಹೈದ ಹನುಮಂತಗೆ ಗೌತಮಿ, ಉಗ್ರಂ ಮಂಜು ಜೊತೆ ಭವ್ಯಾ ಗೌಡ, ಶಿಶಿರ್ ಮತ್ತು ಚೈತ್ರಾ ಕುಂದಾಪುರ, ಧರ್ಮ- ಐಶ್ವರ್ಯಾ ಸಿಂಧೋಗಿ, ಅನುಷಾ ರೈ- ಗೋಲ್ಡ್ ಸುರೇಶ್ ಹಾಗೂ ಧನರಾಜ್- ಮೋಕ್ಷಿತಾ ಪೈ ಅವರನ್ನು ಜೋಡಿಗಳನ್ನಾಗಿ ಮಾಡಿ ಈ ವಾರದ ಟಾಸ್ಕ್ ನೀಡುತ್ತಿದ್ದಾರೆ. ಒಂದೊಂದು ಜೋಡಿಯು ಇನ್ಮುಂದೆ ಯಾವ ರೀತಿ ಮನರಂಜನೆ ನೀಡುತ್ತಾರೆ ಅಂತ ವೀಕ್ಷಕರು ಕಾಯುತ್ತಿದ್ದಾರೆ. ಇಂದಿನ ಸಂಚಿಕೆಯಲ್ಲಿ ಗೌತಮಿ ಜಾಧವ್ ಅವರು ಹನುಮಂತನ ಹಾಗೆ ಚೇಂಚ್ ಆಗಿದ್ದಾರೆ. ಹನುಮಂತನಂತೆಯೇ…

Read More