Author: vikimasters

ಬಿಗ್‌ಬಾಸ್‌ (Bigg boss)ರಿಯಾಲಿಟಿ ಶೋ.. ಕನ್ನಡದ ಅತಿ ಜನಪ್ರಿಯ ಕಾರ್ಯಕ್ರಮ.. 10 ಸೀಸನ್‌ ಪೂರೈಸಿ, 11ನೇ ಸೀಸನ್‌ನ ಫೈನಲ್‌ ಹಂತಕ್ಕೆ ಬಂದಿರುವ ಬಿಗ್‌ಬಾಸ್‌(Bigg boss)ಶೋವನ್ನು ಅಭಿಮಾನಿಗಳು ಸಖತ್‌ ಎಂಜಾಯ್‌ ಮಾಡ್ತಿದ್ದಾರೆ. ಇದೆಲ್ಲದಕ್ಕಿಂತ ಮೇಲಾಗಿ ಕಿಚ್ಚು ಸುದೀಪ್‌ರ ನಿರೂಪಣೆ ಅದ್ಭುತವಾದುದು.. ತಪ್ಪು ಮಾಡಿದವರಿಗೆಲ್ಲಾ ಸರಿಯಾಗಿ ಕ್ಲಾಸ್‌ ತೆಗೆದುಕೊಂಡು ತಿದ್ದಿ ಬುದ್ದಿ ಹೇಳುವ ಕಿಚ್ಚನ ಜಾಣ್ಮೆ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಇಂತಹ ರಿಯಾಲಿಟಿ ಶೋಗೆ ಈಗ ಕಿಚ್ಚ ಸುದೀಪ್‌ ವಿದಾಯ ಹೇಳಿದ್ದು, ಅಭಿಮಾನಿಗಳಿಗೆ ತೀವ್ರ ಬೇಸರ ತರಿಸಿದೆ. ಸೀಸನ್‌ 1ರಿಂದಲೇ ಕಮಾಲ್‌ ಮಾಡಿದ್ದ ಕಿಚ್ಚ ಸುದೀಪ್..!‌ಕರ್ನಾಟಕದ ಜನಮಾನಸದಲ್ಲಿ ಹೆಸರುವಾಸಿಯಾಗಿರುವ ಬಿಗ್‌ಬಾಸ್‌ ಶುರುವಾಗಿದ್ದು 2013ರಲ್ಲಿ.. ಆ ಸೀಸನ್‌ನಲ್ಲಿ ಸ್ಯಾಂಡಲ್‌ವುಡ್ ಚಿನ್ನಾರಿಮುತ್ತ ವಿಜಯ್ ರಾಘವೇಂದ್ರ (Vijay Raghavendra)ವಿಜೇತರಾಗಿದ್ರೆ, ಅರುಣ್ ಸಾಗರ್ ರನ್ನರ್ ಅಪ್ ಆಗಿದ್ರು. ಸೀಸನ್‌ ಒಂದರಿಂದಲೇ ಕಿಚ್ಚ ಸುದೀಪ್‌(Kiccha Sudeep) ಭರ್ಜರಿಯಾಗಿ ನಿರೂಪಣೆ ಮಾಡಿದ್ರು. ಆ ಮೂಲಕ ಅವರ ಗತ್ತು, ಗೈರತ್ತು ಇಡೀ ಕನ್ನಡ ಇಂಡಸ್ಟ್ರಿಗೆ ಗೊತ್ತಾಗಿತ್ತು.. ಅಲ್ಲಿಂದ ಈ ಸೀಸನ್‌ವರೆಗೂ ಸುದೀಪ್‌ ನಿರೂಪಣೆ ಹೇಗಿದೆ…

Read More

ಬಾಹ್ಯಾಕಾಶ ಲೋಕದಲ್ಲಿ ಭಾರತ (India)ಮತ್ತೊಂದು ಪರಾಕ್ರಮ ಮೆರೆದಿದೆ. ಇದುವರೆಗೂ ಅಮೆರಿಕ(America), ರಷ್ಯಾ & ಚೀನಾ(Russia & China) ಮಾತ್ರ ಮಾಡಿದ್ದ ಸಾಧನೆಯನ್ನು ಈಗ ಭಾರತ (India)ಮಾಡಿ ತೋರಿಸಿದೆ. ಇಸ್ರೋ ಭಾರತದ ಬಾಹ್ಯಾಕಾಶ ಇತಿಹಾಸದಲ್ಲೇ ಹೊಸ ಸಾಧನೆ ಮಾಡಿದ್ದು ಅಂತರಿಕ್ಷದಲ್ಲಿ ಈಗ ಮನುಷ್ಯರ ಸಹಾಯ ಇಲ್ಲದೆಯೇ, 2 ಉಪಗ್ರಹ ನಡುವೆ ಡಾಕಿಂಗ್ ಮಾಡಿದೆ. ಅಂದ್ರೆ, ಭೂಮಿಯ ಕಕ್ಷೆಯಲ್ಲಿ ಸುತ್ತುವ 2 ಉಪಗ್ರಹದ ಮೇಲೆ ಭೂಮಿ ಮೇಲಿಂದ ನಿಯಂತ್ರಣ ಸಾಧಿಸಿ & ಒಂದನ್ನು ಮತ್ತೊಂದಕ್ಕೆ ಕೂಡಿಸುವ ಪ್ರಕ್ರಿಯೆ ಈಗ ಯಶಸ್ವಿಯಾಗಿದೆ. ಡಾಕಿಂಗ್, ಅನ್‌ಡಾಕಿಂಗ್‌ ಪ್ರಯೋಗ ಸಕ್ಸಸ್..!‌ ಇನ್ನು 2 ಬಾಹ್ಯಾಕಾಶ ನೌಕೆಗಳ ಡಾಕಿಂಗ್ & ಅನ್‌ಡಾಕಿಂಗ್‌ ಎಂದರೆ, 2 ಬಾಹ್ಯಾಕಾಶ ನೌಕೆಗಳನ್ನು ಒಂದಕ್ಕೊಂದು ಜೋಡಿಸುವುದು ಹಾಗೂ ಬೇರ್ಪಡಿಸುವ ಪ್ರಯೋಗ. ಈವರೆಗೂ ಈ ಸಾಧನೆ ಮಾಡಿದ್ದ ದೇಶಗಳ ಪೈಕಿ ಅಮೆರಿಕ(America), ರಷ್ಯಾ, ಚೀನಾ(Russia & China) ಮಾತ್ರ ಮುನ್ನೆಲೆಯಲ್ಲಿ ಇದ್ದವು. ಇದೀಗ ಭಾರತ ಕೂಡ ಭರ್ಜರಿಯಾಗಿ ಎಂಟ್ರಿ ಕೊಟ್ಟಿದೆ. ಅಂದಹಾಗೆ 2024 ರ ಡಿಸೆಂಬರ್ 30…

Read More

ಕುಂದಾನಗರಿಯಲ್ಲಿ ಮತ್ತೆ ಕಿಚ್ಚು ಹಚ್ಚಿದ್ರಾ ಡಿಕೆಶಿ..? ರಾಜ್ಯ ರಾಜಕಾರಣದ್ದೇ ಒಂದು ತೂಕವಾದ್ರೆ, ಕುಂದಾನಗರಿ ಬೆಳಗಾವಿಯದ್ದೇ ಮತ್ತೊಂದು ತೂಕ.. ರಾಜ್ಯ ರಾಜಕೀಯದ್ದೇ ಒಂದು ಲೆಕ್ಕವಾದ್ರೆ, ಬೆಳಗಾವಿಯದ್ದೇ ಮತ್ತೊಂದು ಲೆಕ್ಕ.. ಪ್ರತಿ ಬಾರಿಯೂ ಒಂದಿಲ್ಲೊಂದು ಅಂತರ್ಯುದ್ಧದೊಂದಿಗೆ ಸದ್ದು ಮಾಡುವ ಬೆಳಗಾವಿ ಈಗ ಮತ್ತೊಮ್ಮೆ ಪ್ರಾಬಲ್ಯದ ವಿಚಾರದ ಕಿಡಿ ಹೊತ್ತಿಕೊಂಡಿದೆ.. ಅದೂ ಸಿಎಲ್‌ಪಿ ಸಭೆಯಲ್ಲೇ ಸತೀಶ್‌ ಜಾರಕಿಹೊಳಿ(Satish Jarkiholi), ಲಕ್ಷ್ಮೀ ಹೆಬ್ಬಾಳ್ಕರ್‌ (Lakshmi Hebbalkar)ಮಧ್ಯೆ ಕಿಚ್ಚು ಜ್ವಾಲೆಯಂತೆ ಧಗಧಗಿಸಿದೆ.. ಯೆಸ್..‌ ಬೆಂಗಳೂರಿನಲ್ಲಿ ನಡೆದ ಸಿಎಲ್‌ಪಿ ಸಭೆಯಲ್ಲಿ ಕುಂದಾನಗರಿ ರಾಜಕೀಯ ಮತ್ತೊಮ್ಮೆ ಭಾರಿ ಸೌಂಡ್‌ ಮಾಡಿದೆ. ಕ್ರಿಡಿಟ್‌ ವಾರ್‌ಗಾಗಿ ಸಚಿವರಾದ ಸತೀಶ್‌ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್‌ ಮಧ್ಯೆ ತೀವ್ರ ವಾಕ್ಸಮರ ನಡೆದಿದೆ.. ಸಿಎಂ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೇವಾಲ ಸಮ್ಮುಖದಲ್ಲೇ ಡಿಸಿಎಂ ಡಿಕೆಶಿ, ಲಕ್ಷ್ಮೀ ಹೆಬ್ಬಾಳ್ಕರ್‌ರನ್ನು ಹಾಡಿಹೊಗಳಿದ್ದು, ಸತೀಶ್‌ ಜಾರಕಿಹೊಳಿಯನ್ನು ಕೆರಳಿ ಕೆಂಡವಾಗುವಂತೆ ಮಾಡಿದೆ.. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿಜಕ್ಕೂ ನಡೆದಿದ್ದೇನು..?ಸಿಎಲ್‌ಪಿ ಸಭೆಯನ್ನುದ್ದೇಶಿಸಿ ಡಿಸಿಎಂ ಡಿಕೆ.ಶಿವಕುಮಾರ್ (DK.Shivakumar)ಮಾತನಾಡುತ್ತಿದ್ರು. ಈ ವೇಳೆ, ನೂತನ…

Read More

ಲಾಸ್‌ ಏಂಜಲೀಸ್‌ನಲ್ಲಿ 12 ಸಾವಿರ ಕಟ್ಟಡಗಳು ಬೆಂಕಿಗಾಹುತಿ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ(Los Angeles, California) ಕಾಡ್ಗಿಚ್ಚು ದಿನ ಕಳೆದಂತೆ ವ್ಯಾಪಿಸುತ್ತಲೇ ಇದೆ.. ಲಾಸ್‌ ಏಂಜಲೀಸ್‌ನಲ್ಲಿ ಹಬ್ಬಿರುವ ಭೀಕರ ಕಾಡ್ಗಿಚ್ಚು ತಣ್ಣಗಾಗುವ ಲಕ್ಷಣ ಕಂಡುಬರುತ್ತಿಲ್ಲ. ಗಾಳಿಯಿಂದಾಗಿ ಬೆಂಕಿ ವ್ಯಾಪಕವಾಗಿ ಹರಡುತ್ತಿದ್ದು, ರಕ್ಷಣಾ ಕಾರ್ಯಾಚರಣೆಗೂ ಅಡ್ಡಿಯಾಗ್ತಿದೆ.. ಇದುವರೆಗೂ ಸುಮಾರು 25 ಜನ ಈ ಘೋರ ಕಾಡ್ಗಿಚ್ಚಿಗೆ ಬಲಿಯಾಗಿದ್ದಾರೆ. ಲಾಸ್‌ ಏಂಜಲೀಸ್‌ನ ಪೆಸಿಫಿಕ್‌ ಪ್ಯಾಲೆಸೇಡ್ಸ್‌ ಮತ್ತು ಈಟನ್‌ ಪ್ರದೇಶದಲ್ಲಿ ಹೆಚ್ಚು ಸಾವು-ನೋವುಗಳು ಸಂಭವಿಸಿದೆ.. ಪೆಸಿಫಿಕ್‌ ಪ್ಯಾಲೆಸೇಡ್ಸ್‌ ಪ್ರದೇಶದಲ್ಲಿ 8 ಜನ ಮತ್ತು ಈಟನ್‌ ಪ್ರದೇಶದಲ್ಲಿ 17 ಜನ ಕಾಡ್ಗಿಚ್ಚಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ ಅಂತಾ ರಕ್ಷಣಾ ಸಿಬ್ಬಂದಿ ಆತಂಕ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಈ ಭೀಕರ ಕಾಡ್ಗಿಚ್ಚು ವನ್ಯಜೀವಿಗಳ ಮೇಲೂ ಪರಿಣಾಮ ಬೀರಿದ್ದು, ಭಾರೀ ಸಂಖ್ಯೆಯಲ್ಲಿ ವನ್ಯಜೀವಿಗಳು ಮೃತಪಟ್ಟಿವೆ ಅನ್ನೋ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಇನ್ನು, ಭೀಕರ ಸ್ವರೂಪ ಪಡೆದುಕೊಂಡಿರುವ ಕಾಡ್ಗಿಚ್ಚು ನಿಯಂತ್ರಿಸಲು ನಿರಂತರ ಕಾರ್ಯಾಚರಣೆ ಮುಂದುವರಿಯುತ್ತಿದ್ದು, ಮಹಾ ಆಪತ್ತು ಎದುರಿಸಲು ಅಧಿಕಾರಿಗಳು…

Read More

ಮತ್ತೊಂದು ಆರೋಗ್ಯ (Health)ಸಮಸ್ಯೆಯಿಂದ ಬಳಲುತ್ತಿರುವ ಸಮಂತಾ.. ಟಾಲಿವುಡ್ ಸ್ಟಾರ್(Tollywood star) ಹೀರೋಯಿನ್ ಸಮಂತಾ(Samantha) ತನಗೆ ಮತ್ತೊಂದು ಭಯಾನಕ ಕಾಯಿಲೆ ಇದೆ ಎಂದು ಬಾಂಬ್ ಸಿಡಿಸಿದ್ದಾರೆ. ಈ ಒಂದು ವಿಚಾರದ ಬೆನ್ನಲ್ಲೇ ನಟಿಯ ಆರೋಗ್ಯದ ಕುರಿತಾದ ಚರ್ಚೆಗಳು ಭಾರೀ ಜೋರಾಗಿದೆ. ಅಷ್ಟಕ್ಕೂ ಆಗಿದ್ದೇನು? ಈ ಬಗ್ಗೆ ಸಮಂತಾ ಶೇರ್ ಮಾಡಿರುವ ಪೋಸ್ಟ್ ವೈರಲ್ ಆಗಿದೆ. ಅವರು ಇನ್ಸ್ಟಾಗ್ರಾಮ್ನಲ್ಲಿ ಸ್ಟೋರಿವೊಂದನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಜಿಮ್ನಲ್ಲಿ ವ್ಯಾಯಾಮ ಮಾಡುತ್ತಿದ್ದಾರೆ. ಚಿಕನ್ ಗುನ್ಯಾದಿಂದ ಉಂಟಾಗುವ ಸಂಧಿವಾತದಿಂದ ಚೇತರಿಸಿಕೊಳ್ಳುವುದು ತುಂಬಾ ಖುಷಿಯಾಗುತ್ತದೆ ಎಂದು ಅವರು ಬರೆದಿದ್ದಾರೆ. ಈ ಪೋಸ್ಟ್‌ಗೆ ದುಃಖದ ಎಮೋಜಿಯನ್ನು ಕೂಡ ಹಾಕಿದ್ದಾರೆ. ಸಧ್ಯ ಸಮಂತಾ(Samantha) ಶೇರ್ ಮಾಡಿರುವ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಫುಲ್‌ ವೈರಲ್ ಆಗಿದೆ. ಇದನ್ನು ಕಂಡು ಸಮ್‌ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದು, ಸಮಂತಾ ಬೇಗ ಗುಣಮುಖರಾಗಿ ಅಂತ ವಿಶ್‌ ಮಾಡಿದ್ದಾರೆ.

Read More

ಭಾರತ ಕ್ರಿಕೆಟ್‌(India Cricket) ತಂಡಕ್ಕೆ ಚಾಂಪಿಯನ್ಸ್ ಟ್ರೋಫಿಗೆ (Champions Trophy) ಮುಂಚಿತವಾಗಿ ಬ್ಯಾಡ್ ನ್ಯೂಸ್ ಸಿಕ್ಕಿದೆ. ಒಂದು ಕಡೆ ಚಾಂಪಿಯನ್ಸ್‌ ಟ್ರೋಫಿಗೆ(Champions Trophy) ಬುಮ್ರಾ(Bumrah) ಅಲಭ್ಯರಾಗುವ ಎಲ್ಲಾ ಲಕ್ಷಣ ಕಾಣ್ತಿದೆ… ಮತ್ತೊಂದು ಕಡೆ ನಾಯಕ ಸ್ಥಾನದಿಂದ ರೋಹಿತ್‌ ಕೆಳಗಿಳಿಯುವ ಮುನ್ಸೂಚನೆ ಕೊಟ್ಟಿದ್ದಾರೆ.. ರೋಹಿತ್ ಶರ್ಮಾ (Rohit Sharma)ಮುಂದಿನ ಕೆಲವು ತಿಂಗಳುಗಳ ಕಾಲ ಮಾತ್ರ ಭಾರತ ತಂಡದ ನಾಯಕತ್ವದಲ್ಲಿ ಮುಂದುವರಿಯುವ ಬಯಕೆಯನ್ನು ಬಿಸಿಸಿಐ ಮುಂದೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಹೊಸ ನಾಯಕನ ಹುಡುಕಾಟವನ್ನು ಮುಂದುವರಿಸುವಂತೆಯೂ ಬಿಸಿಸಿಐಯನ್ನು ಕೇಳಿಕೊಂಡಿದ್ದಾರೆ ಎನ್ನಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಬಿಸಿಸಿಐ ಜೊತೆಗಿನ ಸಭೆಯಲ್ಲಿ, ರೋಹಿತ್ ಶರ್ಮಾ(Rohit Sharma) ಸ್ಥಾನವನ್ನು ಬುಮ್ರಾ ಅವರಿಗೆ ನೀಡುವ ಬಗ್ಗೆ ಪ್ರಸ್ತಾಪಿಸಲಾಗಿದೆಯಂತೆ. ಭಾರತದ ಟೆಸ್ಟ್ ನಾಯಕರಾಗಿ ರೋಹಿತ್ ಶರ್ಮಾ ಬದಲಿಗೆ ಯಾರು ಎಂದು ಕೇಳಿದರೆ ಆ ಸಾಲಿನಲ್ಲಿ ಜಸ್ಪ್ರೀತ್ ಬುಮ್ರಾ (Bumrah) ಮುಂಚೂಣಿಯಲ್ಲಿದ್ದಾರೆ. ಆದರೆ ಅವರ ಫಿಟ್ನೆಸ್ ಕಾಳಜಿಯನ್ನು ಪರಿಗಣಿಸಿ, ಅವರು ದೀರ್ಘಾವಧಿಯ ಆಯ್ಕೆಯಾಗಿ ಕಂಡುಬರುವುದಿಲ್ಲ. ಇತ್ತೀಚಿನ ಬೆನ್ನು ನೋವಿನ ಸಮಸ್ಯೆಯಿಂದಾಗಿ, ಅವರು…

Read More

ಕುಡಿದ ಅಮಲಿನಲ್ಲಿ ಕೃತ್ಯ ಎಸಗಿರುವ ಸೈಯದ್ ಚಾಮರಾಜಪೇಟೆ (Chamarajpet)ಹಸುಗಳ ಕೆಚ್ಚಲು ಕೊಯ್ದು ಕ್ರೌರ್ಯ ಮೆರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಕಾಟನ್ ​ಪೇಟೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಶೇಕ್ ನಸ್ರು ಎಂದು ಗುರ್ತಿಸಲಾಗಿದೆ. ಈತ ಬಿಹಾರ ರಾಜ್ಯದ ಚಂಪಾರನ್ ಜಿಲ್ಲೆ ಮೂಲದವನಾಗಿದ್ದು, ಘಟನೆ ನಡೆದ ಸ್ಥಳದಿಂದ 50 ಮೀಟರ್ ದೂರದಲ್ಲಿರುವ ಪ್ಲಾಸ್ಟಿಕ್ ಹಾಗೂ ಬಟ್ಟೆ ಹೊಲೆಯುವ ಅಂಗಡಿಯಲ್ಲಿ ಈತ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಆರೋಪಿಯನ್ನು ಬಂಧನಕ್ಕೊಳಪಡಿಸಿರುವ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಆರೋಪಿಯನ್ನು ಜನವರಿ 24ರವರೆಗೆ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ. ಈ ಕೃತ್ಯದಲ್ಲಿ ಇತರರು ಭಾಗಿಯಾಗಿರುವುದು ಕಂಡು ಬಂದಿದೆ. ಆರೋಪಿಯನ್ನು ಬಂಧಿಸಿ ಜನವರಿ 24 ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಚಿಕಿತ್ಸೆ ಬಳಿಕ ಹಸುಗಳು ಅಪಾಯದಿಂದ ಪಾರಾಗಿವೆ. ಈ ಘಟನೆ ಚಾಮರಾಜಪೇಟೆಯ (Chamarajpet) ಓಲ್ಡ್​ ಪೆನ್ಷನ್​ ಮೊಹಲ್ಲಾದ ವಿನಾಯಕನಗರದಲ್ಲಿ ನಡೆದಿತ್ತು. ಹಸುಗಳ (Cow)ಮಾಲೀಕ ಕರ್ಣ ಅವರು ಕಾಟನ್​ಪೇಟೆ ಪೊಲೀಸ್ ಠಾಣೆಯಲ್ಲಿ(Cottonpet Police Station) ದೂರು ನೀಡಿದ್ದು, ​ದೂರು ಆಧರಿಸಿ ಪೊಲೀಸರು ಪ್ರಕರಣ…

Read More

144 ವರ್ಷಗಳ ಬಳಿಕ ಅಪರೂಪದ ಮಹಾ ಕುಂಭಮೇಳ(Maha Kumbh Mela) ಗಂಗಾ(Ganga), ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿಂದು ಮೊದಲ ಧಾರ್ಮಿಕ ಸ್ನಾನ ಅಥವಾ ಶಾಹಿ ಸ್ನಾನದೊಂದಿಗೆ 45 ದಿನಗಳ ವಿಶ್ವದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮ ಮಹಾಕುಂಭ ಮೇಳ ಶುಭಾರಂಭಗೊಂಡಿದೆ. ಐತಿಹಾಸಿಕ ಕುಂಭಮೇಳಕ್ಕೆ ಪ್ರಯಾಗ್​ರಾಜ್ ಸಿದ್ಧಗೊಂಡಿದೆ. 144 ವರ್ಷಗಳ ನಂತರ ನಡೆಯುತ್ತಿರುವ ಅತ್ಯಂತ ಅಪರೂಪದ ಕುಂಭಮೇಳ ಇದಾಗಿದ್ದು ಈ ಕಾರಣದಿಂದ ಇದನ್ನು ಮಹಾಕುಂಭ ಮೇಳ (Maha Kumbh Mela) ಎಂದು ಕರೆಯಲಾಗುತ್ತದೆ. ಇಂದು ಕುಂಭಮೇಳ ಆರಂಭಗೊಂಡಿದೆ. ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ನಾಲ್ಕು ಗ್ರಹಗಳ ಅಪರೂಪದ ಸಂಯೋಜನೆಯಾಗುತ್ತಿರುವ ಹಿನ್ನೆಲೆಯಲ್ಲಿ 144 ವರ್ಷಗಳ ಬಳಿಕ ಈ ಕುಂಭಮೇಳ ನಡೆಯುತ್ತಿದೆ. ಈ ಬಾರಿ ನಡೆಯುತ್ತಿರುವ ಕುಂಭಮೇಳದಲ್ಲಿ ಸುಮಾರು 45 ಕೋಟಿಗೂ ಅಧಿಕ ಮಂದಿ ಪುಣ್ಯ ಸ್ನಾನ ಮಾಡುವ ನಿರೀಕ್ಷೆ ಇದೆ. ಮಹಾಕುಂಭ ಮೇಳವು ಇಂದಿನಿಂದ ಪ್ರಯಾಗರಾಜ್‌ನಲ್ಲಿ ಪ್ರಾರಂಭವಾಗಿದ್ದು, ಇದು ಮಹಾಶಿವರಾತ್ರಿಯಂದು (Mahashivratri) ಫೆಬ್ರವರಿ 26 ರಂದು ಕೊನೆಗೊಳ್ಳಲಿದೆ. ಈ ಮಹಾಕುಂಭ…

Read More

ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಯ್ (Sarigama Vijay)ನಿಧನರಾಗಿದ್ದಾರೆ. ಕಳೆದ 4 ದಿನಗಳಿಂದ ಅವರು ಯಶವಂತಪುರದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ರು. ನಟ ಸರಿಗಮ ವಿಜಯ್(Sarigama Vijay) ಆರೋಗ್ಯದಲ್ಲಿ ಏರುಪೇರಾಗಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು ಎಂದು ಸರಿಗಮ ವಿಜಯ್(Sarigama Vijay) ಪುತ್ರ ರೋಹಿತ್ ತಿಳಿಸಿದ್ದಾರೆ. ಅಂದಹಾಗೆ, 1980ರಲ್ಲಿ ಗೀತಪ್ರಿಯಾ ನಿರ್ದೇಶನದ ಬೆಳವಳದ ಮಡಿಲಲ್ಲಿ ಚಿತ್ರಕ್ಕೆ ಸಣ್ಣ ಪಾತ್ರದಲ್ಲಿ ನಟಿಸುವುದರ ಮೂಲಕ ನಟನಾಗಿ ಗುರುತಿಸಿಕೊಂಡರು. ಆ ನಂತರ ಚಿತ್ರರಂಗದಲ್ಲಿ ತೊಡಗಿಕೊಂಡವರು. ಅದರ ಫಲವೇ 269 ಚಿತ್ರಗಳಲ್ಲಿ ನಟನೆ, 80 ಚಿತ್ರಗಳಿಗೆ ಸಹಾಯಕ ನಿರ್ದೇಶನ ಮಾಡಿದ್ದಾರೆ. ವಿಶೇಷ ಅಂದರೆ, ಇವರ ನಟನೆಯ ಚಿತ್ರಗಳ ಪಟ್ಟಿಯಲ್ಲಿ ಟೈಗರ್ ಪ್ರಭಾಕರ್ (Tiger Prabhakar)ಚಿತ್ರಗಳೇ ಹೆಚ್ಚಾಗಿದೆ. ಇನ್ನೂ ಅವರು ಸರಿಗಮ ವಿಜಿ ಎಂದೇ ಫೇಮಸ್ ಆಗಿದ್ರು. ಸರಿಗಮ ವಿಜಿ ಅಭಿನಯಿಸಿದ್ದ ಕೊನೆ ಸಿನಿಮಾ ಡಕೋಟಾ ಪಿಕ್ಚರ್(Cinema Dakota Picture). ಸಂಸಾರದಲ್ಲಿ ಸರಿಗಮ ನಾಟಕ ದಿಂದ ವಿಜಯ್ ಅವರಿಗೆ ಸರಿಗಮ ಹೆಸರು ಬಂತು..…

Read More

ದೊಡ್ಮನೆ ದೋಸ್ತಿಗೆ ಅಭಿಮಾನಿ ಫುಲ್‌ ಫಿದಾ! ಕನ್ನಡದ ಬಿಗ್​ಬಾಸ್​ ಸೀಸನ್​ 11 (Bigg Boss Kannada season 11)ಗ್ರ್ಯಾಂಡ್​ ಫಿನಾಲೆಗೆ(Grand Finale) ಇನ್ನೂ ಕೆಲವು ದಿನಗಳು ಮಾತ್ರ ಬಾಕಿ ಉಳಿದಿವೆ. ಇದೇ ಹೊತ್ತಲ್ಲಿ ಬಿಗ್​ಬಾಸ್​ ಮನೆಯಲ್ಲಿ ಸ್ಪರ್ಧಿಗಳು ಸಖತ್​ ಅಲರ್ಟ್​ ಆಗಿದ್ದಾರೆ. ಟಿಕೆಟ್​ ಟು ಫಿನಾಲೆಗೆ ಹೋಗಬೇಕು ಅಂತ ಸ್ಪರ್ಧಿಗಳು ತುಂಬಾ ಆಸೆ ಇಟ್ಟುಕೊಂಡಿದ್ದರೆ, ಈ ನಡುವೆ ಧನು ಹಾಗೂ ಹನುಮಂತು ದೋಸ್ತಿಗೆ ಬಿಗ್‌ಬಾಸ್‌ ಅಭಿಮಾನಿಗಳು ಮತ್ತೆ ಫಿದಾ ಆಗಿದ್ದಾರೆ.. ಅಷ್ಟಕ್ಕೂ ದೊಡ್ಮನೆಯಲ್ಲಿ ಆಗಿದ್ದೇನು? ಅಂತ ಹೇಳ್ತೀವಿ. ಬಿಗ್‌ಬಾಸ್‌ ಚದುರಂಗ ಆಟ ದಿನದಿಂದ ದಿನಕ್ಕೆ ಸಖತ್‌ ಟ್ವಿಸ್ಟ್‌ ಪಡೆದುಕೊಳ್ತಿದ್ದು, ಅದರಂತೆ ಎಲ್ಲಾ ಸ್ಪರ್ಧಿಗಳು ಫಿನಾಲೆ ಟಿಕೆಟ್‌ ಪಡೆದುಕೊಳ್ಳಲು ನಾನಾ? ನೀನಾ ಅಂತ ಬಿಗ್​ಬಾಸ್​ ಕೊಡುವ ಟಾಸ್ಕ್​ಗಳನ್ನು ಕಷ್ಟಪಟ್ಟು ಆಡುತ್ತಿದ್ದಾರೆ. ಆದ್ರೆ, ಬಿಗ್​ಬಾಸ್​ ಕೊಟ್ಟ ಟಿಕೆಟ್ ಟು ಫಿನಾಲೆ ಟಾಸ್ಕ್​ನಲ್ಲಿ ಭವ್ಯಾಗೌಡ, ಹನುಮಂತ, ತ್ರಿವಿಕ್ರಮ್​ ಹಾಗೂ ರಜತ್​ ಆಯ್ಕೆಯಾಗಿದ್ದಾರೆ. ಗೌತಮಿ(Gautami), ಮಂಜು, ಚೈತ್ರಾ, ಧನರಾಜ್​ ಹಾಗೂ ಮೋಕ್ಷಿತಾ ಟಿಕೆಟ್ ಟು ಫಿನಾಲೆ ಟಾಸ್ಕ್​…

Read More